LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಅ 14 ಮತ್ತು 16 ವರ್ಷದೊಳಗಿನ ಕ್ರೀಡಾಪಟುಗಳ   ಆಯ್ಕೆ  

ಬಳ್ಳಾರಿ. ಅ. 23 :  ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ಸ್ ಸಂಘದ ವತಿಯಿಂದ ಅಕ್ಟೋಬರ್ 25ರಂದು ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 14 ಮತ್ತು 16 ವರ್ಷದೊಳಗಿನ ಬಾಲಕ-ಬಾಲಕಿಯರ ಜಿಲ್ಲಾ ಆಯ್ಕೆ ಟ್ರಯಲ್ಸ್ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ರವಿಶಂಕರ್ ಸಜ್ಜಲ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್‌ನ ವೊಕ್ಸೆನ್ ವಿಶ್ವವಿದ್ಯಾಲಯದಲ್ಲಿ ನವೆಂಬರ್ 14ರಿಂದ 16ರವರೆಗೆ ನಡೆಯಲಿರುವ 20ನೇ ರಾಷ್ಟ್ರೀಯ ಅಂತರಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಈ ಟ್ರಯಲ್ಸ್ ನಡೆಸಲಾಗುತ್ತಿದೆ. ವಿವಿಧ ವಿಭಾಗಗಳಲ್ಲಿ ಪ್ರತಿಭೆ ಪ್ರದರ್ಶಿಸುವ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದರು.
ಆಯ್ಕೆ ಟ್ರಯಲ್ಸ್‌ನಲ್ಲಿ ಅರ್ಹತೆ ಮತ್ತು ಪ್ರದರ್ಶನದ ಆಧಾರದ ಮೇಲೆ ಒಟ್ಟು 13 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸುವ ಗುರಿ ಹೊಂದಲಾಗಿದೆ. ಆಯ್ಕೆಯಾದ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅಗತ್ಯವಿರುವ ಖರ್ಚು ವೆಚ್ಚಗಳನ್ನು ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ಸ್ ಸಂಘವೇ ಭರಿಸಲಿದೆ. ಆರ್ಥಿಕ ಕಾರಣಗಳಿಂದಾಗಿ ಪ್ರತಿಭಾವಂತ ಮಕ್ಕಳು ಕ್ರೀಡಾ ಅವಕಾಶಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಘ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
14 ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗದಲ್ಲಿ ಟ್ರಯಥ್ಲಾನ್ ಮಾದರಿಯ ಸ್ಪರ್ಧೆಗಳು ನಡೆಯಲಿದ್ದು, 16 ವರ್ಷದೊಳಗಿನ ವಿಭಾಗದಲ್ಲಿ 60 ಮೀಟರ್ ಸ್ಪ್ರಿಂಟ್ , 600 ಮೀಟರ್ ಓಟ, ಉದ್ದಜಿಗಿತ, ಗುಂಡು ಎಸೆತ ಹಾಗೂ ಜಾವೆಲಿನ್ ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ತರಬೇತುದಾರರು ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಟ್ರಯಲ್ಸ್‌ಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ನೀಡುವ ಕಡ್ಡಾಯ ಯುಐಡಿ ಸಂಖ್ಯೆಯನ್ನು ಹೊಂದಿರಬೇಕು. ಯುಐಡಿ ಸಂಖ್ಯೆ ಇಲ್ಲದವರಿಗೆ ನೋಂದಣಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಪೋಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಮುಂಚಿತವಾಗಿಯೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಅಕ್ಟೋಬರ್ 25ರಂದು ಬೆಳಿಗ್ಗೆ 9ಕ್ಕೆ ಸ್ಪರ್ಧೆಗಳು ಆರಂಭವಾಗಲಿದ್ದು, ಕ್ರೀಡಾಪಟುಗಳು ಬೆಳಿಗ್ಗೆ 7.30ರಿಂದ 8.30ರೊಳಗೆ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9742913101 ಅಥವಾ 9187208791 ಸಂಪರ್ಕಿಸಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮಸ್ವಾಮಿ, ಮೆಹಬೂಬ್ ಭಾಷಾ, ಶ್ರೀಕಾಂತ್, ಕೃಷ್ಣ ರೆಡ್ಡಿ ಹಾಗೂ ವಿಕ್ರಂ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಿತ್ತೂರು ಉತ್ಸವ ನಿಮಿತ್ತ ವೈಭವದ 'ಪಾರಂಪರಿಕ ನಡಿಗೆ'. ಸಂಸ್ಕೃತಿ, ಇತಿಹಾಸದ ರಕ್ಷಣೆ ಎಲ್ಲರ ಹೊಣೆ: ಸಾಹಿತಿ ಮಂಜುನಾಥ ಕಳಸಣ್ಣವರಹಿಂದೂ ಸಮಾಜದ ಸಂಘಟನೆಯೇ ದೇಶದ ಶಕ್ತಿಗೆ ಆಧಾರ: ನರೇಂದ್ರಜೀಕಬ್ಬಡಿ ಪುರುಷರ ಪಂದ್ಯಾವಳಿ ಸವದತ್ತಿ  ತಂಡಕ್ಕೆ ಜಯ.ವೀರರಾಣಿ ಚೆನ್ನಮ್ಮಳ ಧೈರ್ಯ, ಸಾಹಸ, ದೇಶಪ್ರೇಮ ಯುವಜನರಿಗೆ ಪ್ರೇರಣೆ: ತಹಸೀಲ್ದಾರ್ ಸಿದರಾಯ ಬೋಸಗಿ ಅಭಿಮತಬಸವರಾಜ ಶಿವಲಿಂಗಪ್ಪ ಯಾದವಾಡ ನಿಧನಜನರಲ್ಲಿ ದೇಶಾಭಿಮಾನ ಬೆಳಿಸಿದ ವೀರ ರಾಣಿ ಚೆನ್ನಮ್ಮ - ನಿರಾಣಿ    ಕಿತ್ತೂರು ಚನ್ನಮ್ಮಾಜಿ ಆದರ್ಶ, ಹೋರಾಟ ಜೀವನದಲ್ಲಿ ಬಳಸಿಕೊಳ್ಳಿ : ಬಾಬಾಸಾಹೇಬ ಪಾಟೀಲ.  ಸಿಕಂದರ ಬಾದಹ ಅರಬ ನಿಧನರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಲಚ್ಯಾಣ ಸರಕಾರಿ ಶಾಲೆಯ ಬಾಲಕಿಯರಿಗೆ ತೃತೀಯ ಸ್ಥಾನಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ: ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ ಕರೆ