LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಶಿಂದಿಕುರಬೇಟ ಗ್ರಾಮದ ಭಂಡಾರದ ಒಡೆಯ ಶ್ರೀ ವಿಠ್ಠಲ ದೇವರು

ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಆಧುನಿಕ ವಾಸ್ತುಶಿಲ್ಪಕಲೆಗಳಿಗೆ ತಲೆಯತ್ತಿ ನಿಂತಿರುವ ಹಾಗೂ ಗ್ರಾಮದ ಹೆಬ್ಬಾಗಿಲಿಗೆ ರಮಣೀಯ ನೋಟದಂತೆ ಹೊಳೆಯುತ್ತಿರುವ ಹಾಗೂ ಗ್ರಾಮದ ಆರಾಧ್ಯದೈವ ಶ್ರೀ ವಿಠ್ಠಲ ದೇವರ ಮಂದಿರದ ಭವ್ಯ ಕೆಂಪುಕಲ್ಲಿನ ನಗಾರಿಖಾನೆ ಕಟ್ಟಡವು ಸುಂದರ ಮನಮೋಹಕವಾಗಿ ಕಂಗೊಳಿಸುತ್ತಿದೆ.
ಇಲ್ಲಿನ ಭವ್ಯ ವಾಸ್ತು ಶಿಲ್ಪಕಲೆಯ ನೋಟವು ನಮಗೆ ಇತಿಹಾಸವನ್ನು ನೆನಪಿಸುತ್ತಿದೆ.ಹಾಗೂ ರಾಷ್ಟ್ರಕೂಟರ ಶಿಲಾ ವೈಭವವನ್ನು ಮರುಕಳಿಸಿದಂತಿದೆ. ಅಂದರೆ ೭ಮತ್ತು ೮ನೇಯ ಶತಮಾನದ ನಾಗರಶೈಲಿ, ಗಾಂಧಾರಶೈಲಿಗಳಂತ ಶಿಲ್ಪ ಕಲೆಯಲ್ಲಿ ರಾಮಾಯಣ ಹಾಗೂ ಮಹಾಭಾರತದ ಕೆಲವು ಶಿಲಾವೈಭವಗಳನ್ನು ಸವಿಯಬಹುದು. ಈ ಕಟ್ಟಡದಲ್ಲಿ ರಥಸಪ್ತಮಿ ಚಿತ್ರ ಹಾಗೂ ರಾಮನು ಹನುಮನಿಗೆ ಆಶೀರ್ವಾದ ನೀಡುವ ದೃಶ್ಯ, ನಾಗದೇವತೆಯನ್ನು ಪೂಜಿಸುವ ದೃಶ್ಯ ಹಾಗೂ ದ್ವಾರಬಾಗಿಲದ ಎರಡು ಬದಿಯಲ್ಲಿ ವಿಶೇಷ ಭಂಗಿಯಲ್ಲಿ ಶಿವ-ಪಾರ್ವತಿಯರ ರಮಣೀಯ ದೃಶ್ಯ ಹಾಗೂ ಭಕ್ತ ಕನಕದಾಸರು ತಮ್ಮ ಕೀರ್ತನೆಯನ್ನು ಮಂಡಿಸುವ ದೃಶ್ಯ ಹಾಗೂ ವೀರರಾಣಿ ಕಿತ್ತೂರ ಚನ್ನಮ್ಮಳು ಯುದ್ದಕ್ಕೆ ಆಶ್ವಾರೂಡಳಾಗಿ ಹೋರಾಡುವ ದೃಶ್ಯ ಹಾಗೂ ವೀರ ಸಂಗೋಳ್ಳಿ ರಾಯಣ್ಣ ಯುದ್ದದ ತಯಾರಿ ನಡೆಸಿರುವ ಸನ್ನಿವೇಶವನ್ನು ಅತ್ಯಂತ ಸೂಕ್ಷ್ಮ ಕೆತ್ತನೆಯಲ್ಲಿ ಕೆತ್ತಲ್ಪಟ್ಟಿದೆ.ಇವು ಮುಖಭಾಗದ ಮೇಲ್ಛಾವಣಿಯಲ್ಲಿ ಕೆತ್ತಲ್ಪಟ್ಟ ಶಿಲ್ಪಕಲೆಯಾಗಿದೆ. 
ಕೆಂಪುಕಲ್ಲಿನ ನಗಾರಿಖಾನೆಯ ಮುಂಭಾಗದಲ್ಲಿ ಒಂದೇ ಬಂಡೆಕಲ್ಲಿನಲ್ಲಿ ಅತ್ಯಂತ ಚಿಕ್ಕ ಚಿಕ್ಕ ಮಣಿಯುಳ್ಳ ಕಿಟಕಿಯೂ ಹಾಗೂ ಗೋಡೆಯ ಮೇಲ್ಬಾಗದ ನಾಲ್ಕು ಬದಿಗೆ ಸುಮಾರು ೨೦ ಅಡಿ ಎತ್ತರದಲ್ಲಿ ಏಕಶಿಲೆಯಲ್ಲಿ ಸರಪಳಿಯನ್ನು ಕೆತ್ತಲಾಗಿದ್ದು ಆಯಾತಕಾರದಲ್ಲಿ ತೂಗು ಸರಪಳಿಯು ಎಂಥವರನ್ನು ಬೆರಗುಗೊಳಿಸುತ್ತಿದೆ.ಹಾಗೂ ಕಟ್ಟಡ ಬಲಬದಿಯ ಎರಡನೆಯ ಅಂತಸ್ಥಿನ ಶಿವ-ಪಾರ್ವತಿಯರ ಯಜ್ಞಯಾಗದ ದೃಶ್ಯ ಹಾಗೂ ಪ್ರತಿ ಅಂತಸ್ಥಿನಲ್ಲಿ ಸಣ್ಣ ಸಣ್ಣ ಗಣೇಶ ಶಿವ ಪಾರ್ವತಿ,ಆನೆ,ಅಶ್ವ, ವಿವಿಧ ಶಿಲೆಗಳು ಅರಳಿ ನಿಂತಿವೆ. 
ಏಕಶಿಲೆಯಲ್ಲಿ ಕೆತ್ತಲ್ಪಟ್ಟ ಪುರಾತನ ಸಂಸ್ಕೃತಿಯ ರೂಪ ಪಡೆದು ಆಧುನಿಕ ವಾಸ್ತು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಜೀವಂತಿಕೆಯನ್ನು ಮೆರೆಯುತ್ತಿದೆ. ಇದು ಒಟ್ಟು ಮೂರು ಅಂತಸ್ಥನ್ನು ಹೊಂದಿ ಕೊನೆಯಲ್ಲಿ ಗೋಲಗುಮ್ಮಟಾಕಾರದಲ್ಲಿ ಶಿಖರವನ್ನು ಹೊತ್ತು ನಿಂತಿದೆ.ಸುಮಾರು ೫೦ ಅಡಿಗಳಷ್ಟು ಎತ್ತರವನ್ನು ಹೊಂದಿರುವ ಭವ್ಯ ದೀಪಸ್ತಂಭ ಕಟ್ಟಡದಶಿಲೆಯೂ ತಲೆಎತ್ತಿ ನಿಂತಿದೆ.
            ದ್ವಾರಬಾಗಿಲನ್ನು ಪ್ರವೇಶಿಸಿದರೆ ಶಿವನ ಇನ್ನೂಂದು ರೂಪದಂತೆ ಹಾಲು ಮತದ ಶ್ರೀ ವಿಠ್ಠಲ ದೇವರ ದರ್ಶನವನ್ನು ಪಡೆದರೆ ಎಂತಹವರು ಕಷ್ಟ ನೋವುಗಳನ್ನು ಕಳೆದುಕೋಳ್ಳಬಹುದು. ಹಾಗೂ ಕೆಲ ಹೊತ್ತು ವಿಶ್ರಮಿಸಿದರೆ ನಮ್ಮ ಮನಸ್ಸು ಹಗುರವಾಗುವುದು. ಧನಿವು ಆರಿ ಧನ್ಯತಾ ಭಾವ ಬರುವುದು. ಈ ಸುಂದರವಾದ ಕಟ್ಟಡವು ಶಿಂದಿಕುರಬೇಟ ಗ್ರಾಮದ ಹಾಲುಮತದ ಹಿರಿಯರಿಂದ ೧೯೭೪ ರಲ್ಲಿ ಆರಂಭವಾಯಿತು. ದೇವಸ್ಥಾನದ ಹಿಂಭಾಗದಲ್ಲಿ ಮತ್ತು ಬಲಗಡೆ ಸುಂದರವಾದ ಕಲ್ಲಿನಲ್ಲಿಯೇ ಕಮಾನಗಳನ್ನು ನಿರ್ಮಾಣ ಮಾಡಲಾಗಿದೆ. 
ಜಾತ್ರಾ ಕಾರ್ಯಕ್ರಮ : ಶಿಂದಿಕುರಬೇಟ ಗ್ರಾಮದ ಭಾಗ್ಯದ ನಿಧಿ ಎಂದು ಪ್ರಖ್ಯಾತಗೊಂಡಿರುವ ಶ್ರೀ ವಿಠ್ಠಪ್ಪ ದೇವರ ಜಾತ್ರೆಯು ದಿ.೨೫ ರಂದು ಬೆಳಗಿನ ಜಾವ ವಾಲಗ ಬಾರಿಸುವುದು. ನಂತರ ಶರಣರಿಂದ ಓಂಕಾರ ಮಂತ್ರ ನಡೆಯುವುದು. ಮುಂಜಾನೆ ೭ಘಂಟೆಗೆ ಶ್ರೀ ವಿಠ್ಠಪ್ಪ ದೇವರ ಅಭಿಷೇಕ ಹಾಗೂ ನೈವೇದ್ಯ ಹಾಗೂ ಅಂಬಲಿ ಕುಂಭಗಳ ಆಗಮನ ಮಧ್ಯಾಹ್ನ ಮಹಾಪ್ರಸಾದ ಜರಗುವುದು. ಅದೇ ದಿವಸ  ಕಬ್ಬಿನ ಗಾಡಿಗೆ ಹೂಡಿದ ಎತ್ತುಗಳ ಪ್ರದರ್ಶನ ಜರುಗುವುದು. ಸಂಜೆ ೪ಘಂಟೆಗೆ ವಾಲಗ ಬಾರಿಸುವುದರೊಂದಿಗೆ ಪಲ್ಲಕ್ಕಿ ಉತ್ಸವ  ಹಾಗೂ ಶ್ರೀ ವಿಠ್ಠಪ್ಪ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ಇವರಿಂದ ಅಲಗ(ಖಡ್ಗ)ಹಾಯುವದು. ಮತ್ತು ಭಂಡಾರ ಹಾರಿಸುವುದು.ಕಬ್ಬಿನ ಗಾಡಿಗಳು ದೇವಸ್ಥಾನ ಸುತ್ತುವುದು. ಸಾಯಂಕಾಲ ೬ ಘಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯುವದು. ನಂತರ ಡೊಳ್ಳಿನ ಪದಗಳು ಜರಗುವದೆಂದು ಜಾತ್ರಾ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಬಾಗ: ಅಕ್ಟೋಬರ್ ೨೮ ರಿಂದ ಚೌಗುಲೆ ಶಿಕ್ಷಣ ಸಂಸ್ಥೆಯ ತ್ರಿದಿನ ಉತ್ಸವ ವಿಜೃಂಭಣೆಯಿಂದಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿದ ಜಿಲ್ಲಾಧಿಕಾರಿ ಸ್ನೇಹಲ್.ಆರ್ಮತಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶಾಂತಿಯುತವಾಗಿ ಶೇ.75.62 ರಷ್ಟು ಮತದಾನ: ಚುನಾವಣಾಧಿಕಾರಿ ಕೆ.ಎಮ್.ಜಾನಕಿಚುನಾವಣಾ ನೀತಿ ಸಂಹಿತೆ ಹಿನ್ನೆಲೆ: ಬಳ್ಳಾರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸರಳ ಆಚರಣೆಬಳ್ಳಾರಿ ಜಿಲ್ಲೆಯಾದ್ಯಂತ ಅಕ್ಟೋಬರ್ 26 ರಿಂದ ಸುರಕ್ಷಿತ ಬಚ್‌ಪನ್ ಅಭಿಯಾನ': ಪೋಕ್ಸೊ ಕಾಯ್ದೆ ಕುರಿತು ಜಾಗೃತಿಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಅಕ್ಟೋಬರ್ 29 ರಂದು ಬಳ್ಳಾರಿಯಲ್ಲಿ ಹಿರಿಯ ನಾಗರಿಕರಿಗೆ ಡಿಮೆನ್ಷಿಯಾ (ಮರುವಿನ ಕಾಯಿಲೆ) ಆರೋಗ್ಯ ತಪಾಸಣಾ ಶಿಬಿರಮಡಿಕೇರಿ ದಸರಾಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆ ಇದೆ: ಶಿವಾನಂದ ತಗಡೂರುSIR ರದ್ದುಗೊಳಿಸಲು ಎದ್ದೇಳು ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆಟಿ ಹೆಚ್ ಎಂ ಬಸವರಾಜ್ ಗೆ ಸೂರ್ಯ ಕೀರ್ತಿ ಪ್ರಶಸ್ತಿ