Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೈವಿಧ್ಯತೆಯ ಈ ನಮ್ಮ  ದೇಶದಲ್ಲಿ ಏಕತೆಯ ಹೂ ಅರಳಬೇಕು: ಸಾಹಿತಿ ಡಾ. ಜಯವೀರ ಎ.ಕೆ

ರಾಯಬಾಗ: ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಸರ್ವಜನಾಂಗದ ಶಾಂತಿಯ ತೋಟವಾದ  ವೈವಿಧ್ಯತೆಯ ಈ ನಮ್ಮ  ದೇಶದಲ್ಲಿ ಏಕತೆಯ ಹೂ ಅರಳಬೇಕು ಎಂದು ಶಿರಗುಪ್ಪಿಯ ಪ್ರತಿಷ್ಠಿತ ಕೆ ಎಲ್ ಇ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಜಯ ವೀರ ಎ.ಕೆ. ಅಭಿಮತ ವ್ಯಕ್ತಪಡಿಸಿದರು.


ಅವರು ರಾಯಬಾಗ ಪಟ್ಟಣದ ಕೆ ಎಲ್ ಇ ಸಂಸ್ಥೆಯ ಪ್ರತಿಷ್ಠಿತ ಮಲಗೌಡಾ ಪಾಟೀಲ ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದತ್ತುಗ್ರಾಮ ಸುಕ್ಷೇತ್ರ ದಿಗ್ಗೇವಾಡಿಯಲ್ಲಿ ಹಮ್ಮಿಕೊಂಡ  ವಿಶೇಷ ಶಿಬಿರದ ಎರಡನೇ ದಿನವಾದ ಮಂಗಳವಾರ ದಿ. 2 ರಂದು "ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಯುವಕರ ಪಾತ್ರ"ವಿಷಯದ ಕುರಿತು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.


ನಮ್ಮಲ್ಲಿ ಭಾಷೆ, ವೇಷ, ಆಹಾರ, ಉಡುಗೆ, ತೊಡುಗೆ, ಸಂಪ್ರದಾಯಗಳು ಬೇರೆ ಬೇರೆ ಇದ್ದರೂ ನಾವೆಲ್ಲರೂ ಒಂದು ನಾವೆಲ್ಲರೂ ಬಂಧುಗಳು ಎಂಬ ಗಟ್ಟಿ ಭಾವ ಮೂಡಿಸಿಕೊಂಡು ಜಾತ್ಯತೀತ ತತ್ವಗಳನ್ನು ಎತ್ತಿ ಹಿಡಿಯಬೇಕೆಂದರು. ದಿಗ್ಗೇವಾಡಿ  ಗ್ರಾಮವೂ  ಕೂಡ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಬಗೆಯನ್ನು ಸೋದಾಹರಣವಾಗಿ ವಿಶ್ಲೇಷಣೆ ಮಾಡಿದರು. ಶಾಲಾ ಕಾಲೇಜುಗಳಲ್ಲಿ ಸರ್ಕಾರ ಸಮವಸ್ತ್ರ ಕಡ್ಡಾಯ ಮಾಡಿದ್ದರ ಹಿಂದಿನ ಮಹೋನ್ನತ ಉದ್ದೇಶ ಸಮಾನತೆ ಮತ್ತು ಸಹೋದರ ಭಾವ ಎಂಬುದನ್ನು ತಾವೆಲ್ಲರೂ ಚೆನ್ನಾಗಿ ಅರಿತುಕೊಳ್ಳಬೇಕು. ನಿಮ್ಮ ಮನೋಮಂದಿರದಲ್ಲಿ ಸಾಮರಸ್ಯದ ಸದ್ಭಾವನೆಯ ದಿವ್ಯ ಮಂತ್ರ ಅನವರತವೂ ನಿನದಿಸುತ್ತಿರಬೇಕು ಎಂದು ಡಾ.ಜಯವೀರ ಎ. ಕೆ ಮಾರ್ಮಿಕವಾಗಿ ನುಡಿದರು. ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಆರಂಭದಲ್ಲಿ ಹಲವು ಶಿಬಿರಾರ್ಥಿಗಳು" ರಾಷ್ಟ್ರೀಯ ಭಾವೈಕ್ಯತೆ" ಕುರಿತು ತಮ್ಮ ಮನದಾಳದ ಅಭಿಪ್ರಾಯಗಳನ್ನು ಸೊಗಸಾಗಿ ಹಂಚಿಕೊಂಡರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮದ ಉದಯೋನ್ಮುಖ  ಚುಟುಕು ಕವಿ, ಶಿಕ್ಷಕ ಜ್ಯೋತಿ ರುಪ್ಪಾಳೆ ಮಾತನಾಡಿ" ಈ ಭವ್ಯ ಭಾರತದ ದೇಶದಲ್ಲಿ ನಾವೆಲ್ಲರೂ ಸಂಕುಚಿತ ಭಾವ ತೊರೆದು ಸಾಮರಸ್ಯದಿಂದ ಬದುಕಿ ಬಾಳಬೇಕು" ಎಂದು ನುಡಿದರು. ಸ್ಥಳೀಯ ಗ್ರಾಮ ಪಂಚಾಯತಿಯ ಸದಸ್ಯರಾದ ಅಪ್ಪಾಸಾಬ ಬಿ ಮೈಶಾಳೆ ಅಧ್ಯಕ್ಷತೆ ವಹಿಸಿ ಆಶಯ ನುಡಿ ಹಂಚಿಕೊಂಡರು. ಪ್ರೊ ಎಂ ಎಸ್ ಹಂಜೆ,  ರಾಷ್ಟ್ರೀಯ ಸೇವಾ ಯೋಜನೆ ಘಟಕದ  ಕಾರ್ಯಕ್ರಮ ಅಧಿಕಾರಿ  ಎಸ್ ಎ ಖವಟಕೊಪ್ಪ, ಗ್ರಾಮದ ನಾಗರಿಕರಾದ ರಾಜು ಮಿರ್ಜೆ, ಶಿಬಿರದ ನಾಯಕಿ ಕು. ಯೋಗಿತಾ ಪಾಟೀಲ, ಶಿಬಿರದ ನಾಯಕ ಕು. ಜ್ಯೋತಿಬಾ ದೇಸಾಯಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು. ಪ್ರೇಮಾಂಜಲಿ ಬನಗೆ ಸ್ವಾಗತಿಸಿದರು. ಕು. ಅಪೂರ್ವ ಪೂರ್ವಾಂತ  ನಿರೂಪಿಸಿದರು. ಕು. ಯೋಗಿತಾ ಪಾಟೀಲ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ