Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಂದಿಹಾಳ್ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿಗಳ ಅಕ್ರಮ  ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿಂಗಪ್ಪ ಮತ್ತು ಗ್ರಾಮಸ್ಥರ ಒತ್ತಾಯ

ಬಳ್ಳಾರಿ  ಮೇ 27. ತಾಲೂಕಿನ ಹಂದಿಹಾಳ್ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಮತ್ತು 14/15ನೇ ಹಣಕಾಸಿನಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರಯಾಗಿದೆ ಎಂದು ಗ್ರಾಮದ ನಿಂಗಪ್ಪ ಮತ್ತು ಇತರರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಆರ್.ಡಿ.ಪಿ.ಆರ್ ಕಾರ್ಯದರ್ಶಿ ಮತ್ತು ಆಯುಕ್ತಾಲಯ, ಬೆಂಗಳೂರು ಸೇರಿದಂತೆ ಅಕ್ರಮದ ಬಗ್ಗೆ ತನಿಖೆ ಕೈಗೊಳ್ಳಲು ಲೋಕಾಯುಕ್ತಕ್ಕೂ ಸಹ ದೂರು ನೀಡಿ ಒತ್ತಾಯಿಸಿದ್ದಾರೆ.


ಗ್ರಾಮ ಪಂಚಾಯಿತಿಯಿAದ ಅನಷ್ಠಾನಗೊಳ್ಳುವ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಬರದಿದ್ದರೂ ಕೆಲವರ ಹೆಸರಿನಲ್ಲಿ ಎನ್.ಎಂ.ಆರ್ ತೆಗೆದು, ಮತ್ತು ಹತ್ತೆ ಜನರನ್ನು ಇಟ್ಟುಕೊಂಡು ಪದೇ ಪದೇ ಅವರನ್ನೆ ಮೂರು ಗುಂಪುಗಳಾಗಿ ಮಾಡಿ ಕೆಲಸಕ್ಕೆ ಬಾರದಿದ್ದರೂ ಅಂತಹ ಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿ ತಿರುಗ ಅದನ್ನು ಬಿಡಿಸಿಕೊಂಡು ಅಧಿಕಾರಿಗಳು ಮತ್ತು ಇತರರು ಹಂಚಿಕೆ ಮಾಡಿಕೊಳ್ಳುವುದು, ಮತ್ತು ಒಂದೇ ಕುಟುಂಬದ ಹಲವು ಸದಸ್ಯರ ಹೆಸರಿನಲ್ಲಿ ಎನ್.ಎಂ.ಆರ್ ತೆಗೆದು ಅವರ ಖಾತೆಗೆ ಹಣ ಜಮೆ ಮಾಡಿ ಅಕ್ರಮವನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.


ಹಂದಿಹಾಳ್ ಮತ್ತು ಗುಡದೂರಿನಲ್ಲಿ ಮೂರ್ನಾಲ್ಕು ಆರ್.ಒ. ಪ್ಲಾಂಟ್‌ಗಳಿದ್ದು ಅವುಗಳ ನಿರ್ವಹಣೆಯನ್ನು ಒಂದು ಕಂಪನಿಗೆ ನೀಡಿದ್ದರೂ, ಎರಡು ಕಂತಿನಲಿ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ದುರಸ್ತಿಗೆಂದು, ಫರ್ನಿಚರ್‌ಗೆಂದು ಮೂರು ಲಕ್ಷ ಐವತ್ತು ಸಾವಿರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಹಾಗೂ ಬಾಲಾಜಿ ಕಂಪ್ಯೂಟರ್ಸ್ಗೆ ಪ್ರಿಂಟರ್, ಝರಾಕ್ಸ್ ಮಿಷನ್‌ಗಳಿಗೆಂದು ಆರು ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ. ಇಷ್ಟೆ ಅಲ್ಲದೆ ನಗರದ ಮಹಾಲಕ್ಷಿö್ಮ ಏಜೆನ್ಸಿಗೆ ಎಲೆಕ್ಟಿçಕ್ ಉಪಕರಣಗಳ ಖರೀದಿಗೆಂದು ಕೇವಲ ಮೂರು ತಿಂಗಳ ಅವದಿಯಲ್ಲಿ ಮೂರು ಕಂತಿನಲ್ಲಿ ಆರು ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿರುತ್ತಾರೆ, ಇದನ್ನೆಲ್ಲಾ ನೋಡಿದಾಗ ಬೋಗಸ್ ಪಾವತಿ ಮತ್ತು ಬೋಗಸ್ ಬಿಲ್ಲುಗಳೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದರ ಹಿಂದೆ ಶೇಕಡಾವಾರು ಹಣವನ್ನು ಕಿಕ್‌ಬ್ಯಾಕ್ ಪಡೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರುದಾರರು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.


ಸಂಬAಧಿಸಿದ ಅಧಿಕಾರಿಗಳು ನಮ್ಮ ದೂರನ್ನು ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ದುರುಪಯೋಗವಾದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿದ ನೌಕರರಿಂದ ವಸೂಲಿ ಮಾಡಿ ಅವರ ವಿರುದ್ಧ ಸೂಕ್ತ ಕಾನೂನುಕ್ರಮಕೈಗೊಂಡು ಅವರನ್ನು ಕೆಲಸದಿಂದ ಅಮಾನತ್ತು ಮಾಡಬೇಕೆಂದು ಸಂಬAಧಿಸಿದ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ವಿವಿರಗಳೊಂದಿಗೆ ದೂರು ನೀಡಿದರೂ ಸಹ ಅಧಿಕಾರಿಗಳು ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ