Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭತ್ತದ ಕಾಂಡ ಕೊರೆಯುವ ಕೀಟ ನಿರ್ವಹಣೆಗೆ ಹೊಸ ಮಾರ್ಗ

ಬಳ್ಳಾರಿ – ಜಾಗತಿಕ ಉದ್ಯಮವಾಗಿರುವ ಬಾಯರ್ (Bayer), ಕೃಷಿ ಮತ್ತು ಆರೋಗ್ಯ ರಕ್ಷಣೆಯ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದ್ದು, ಭತ್ತದ ಬೆಳೆಗಾರರು ಕಾಂಡ ಕೊರೆಯುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತಾಗಲು ವಿನ್ಯಾಸಗೊಳಿಸಲಾದ ಬಿಕೋಟಾ (BICOTA) ಎಂಬ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಬಾಯರ್ ಸಂಸ್ಥೆಯ ವಿಶೇಷ ನಾವೀನ್ಯದ ಸಂಯೋಜನೆಯಲ್ಲಿ ಈ ಉತ್ಪನ್ನವು ಹಾನಿಕಾರಕ ಕೀಟಗಳ ವಿರುದ್ಧ ಬಲವಾದ ರಕ್ಷಣೆ ನೀಡುತ್ತದೆ. ಭತ್ತ ಬೆಳೆಯುವ ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಕೋಟಾ ಉತ್ಪನ್ನ ಜೂನ್ 2025ರಿಂದ ಲಭ್ಯವಿರಲಿದೆ.


ಕಾಂಡಕೊರಕ ಕೀಟಗಳು ಭತ್ತದ ಬೇಸಾಯದಲ್ಲಿ ಗಮನಾರ್ಹ ಹಾನಿಗೆ ಕಾರಣವಾಗಿ, ಇಳುವರಿಯನ್ನು ಕಡಿಮೆ ಮಾಡುತ್ತವೆ. ಈ ಕೀಟಗಳು ಆಹಾರ ಸೇವನೆಯನ್ನು ನಿಲ್ಲಿಸಲು ಬಿಕೋಟಾ (BICOTA) ಕೀಟನಾಶಕವು ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಬೆಳೆಗಳಿಗೆ ದೀರ್ಘಕಾಲ ರಕ್ಷಣೆ ನೀಡುತ್ತದೆ. ಕೇವಲ ಒಂದು ಸಲ ಬೆಳೆಯ ನೆಲದಲ್ಲಿ ಚಲ್ಲಿದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕೀಟನಾಶಕಗಳಿಗಿಂತ ದೀರ್ಘಾವಧಿಯವರೆಗೆ ಹೆಚ್ಚಿನ ಹಾಗೂ ಪರಿಣಾಮಕಾರಿ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ, ಬೇರು ಮತ್ತು ತೆಂಡೆಗಳ ಬೆಳವಣಿಗೆಯನ್ನೂ ಪ್ರಚೋದಿಸುತ್ತದೆ. ಬೆಳೆಯ ಸಮಗ್ರ ಆರೋಗ್ಯವನ್ನು ಸುಧಾರಿಸುತ್ತದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ನಡುವೆ ಕಾಂಡಕೊರಕ ಕೀಟದ ಬಾಧೆಯನ್ನು ನಿಯಂತ್ರಿಸುವ ಪ್ರಮುಖ ಸವಾಲಿಗೆ ಪರಿಹಾರವಾಗಿ, ಹೆಚ್ಚಿನ ಇಳುವರಿಯನ್ನು ಒದಗಿಸುತ್ತದೆ.



ಮೋಹನ್ ಬಾಬು, ಕ್ಲಸ್ಟರ್ ವಾಣಿಜ್ಯ ಮುಖ್ಯಸ್ಥರು, ಭಾರತ, ಬಾಂಗ್ಲಾದೇಶ & ಶ್ರೀಲಂಕಾ, ಸಸ್ಯ ವಿಜ್ಞಾನ ವಿಭಾಗ, ಬಾಯಾರ್., “ಬಾಯರ್ ತನ್ನ ನಾವೀನ್ಯಗಳ ಮೂಲಕ ರೈತರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ. ಬಿಕೋಟಾ (BICOTA) ಕೀಟನಾಶಕ ಮೂಲಕ, ಭತ್ತದ ಬೆಳೆಗಾರರು ತಮ್ಮ ಬೆಳೆಯನ್ನು ಪರಿಣಾಮಕಾರಿಯಾಗಿ ರಕ್ಷಿಸಬಹುದು. ಇದು ಸಮಯ ಮತ್ತು ಕಾರ್ಮಿಕರ ವೆಚ್ಚವನ್ನು ಉಳಿಸುತ್ತದೆ. ಇಳುವರಿ ಮತ್ತು ಆದಾಯವನ್ನು ವೃದ್ಧಿಸಲು ಸಹಾಯ ಮಾಡುವ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದರು.



ಬಿಕೋಟಾ (BICOTA) ಬಳಸಲು ಮತ್ತು ಪ್ರಯೋಜನಕಾರಿ ಕೀಟಗಳಿಗೆ ಸುರಕ್ಷಿತವಾಗಿದೆ. ಹೀಗಾಗಿ, ಅದು ರೈತರಿಗೆ ಆದರ್ಶ ಆಯ್ಕೆಯಾಗಿದೆ. ಹಾಗೆಯೇ, ಇದು ಸಮಗ್ರ ಕೀಟ ನಿರ್ವಹಣ (IPM) ಕ್ರಮಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಹರಳಿನ ರೂಪದ ಇದರ ಸೂತ್ರೀಕರಣವು ಚೆಲ್ಲಲು ಅನುಕೂಲ ಮಾಡಿಕೊಡುತ್ತದೆ. ರೈತರು ತಮ್ಮ ಹೊಲಗಳಲ್ಲಿ ಪೂರ್ಣವಾಗಿ ಮತ್ತು ಬೇಗನೆ ಚೆಲ್ಲಲು ಸುಲಭವಾಗುತ್ತದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ