Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ ನಗರಕ್ಕೆ 350 ಕೋಟಿ ರೂನಿಂದ ಹೊಸ ಯುಜಿಡಿ ವ್ಯವಸ್ಥೆ: ಮಂಜುನಾಥ

ಬಳ್ಳಾರಿ:ಫೆ,11- ನಗರದಲ್ಲಿ ಹಲವು ದಶಕಗಳ ಹಳೆಯದಾದ ಒಳ ಚರಂಡಿ ವ್ಯವಸ್ಥೆ ಇದೆ. ಅದು ಸರಿಯಾಗಿ ಇಲ್ಲದ ಕಾರಣ ನಗರಕ್ಕೆ ಹೊಸದಾಗಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಬರಲಿದೆಂದು ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಹೇಳಿದ್ದಾರೆ.

ಅವರು ಇಂದು ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬಳ್ಳಾರಿ ಕೈಗಾರಿಕಾ ಮತ್ತು ನಗರದ ಕುಂದುಕೊರತೆಗಳ ಬಗ್ಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ನಗರದಲ್ಲಿ ಪರಿಸರ ಮಾಲಿನ್ಯ ಆಗುತ್ತಿರುವುದು ನೆರೆಯ ಕೈಗಾರಿಕೆಗಳಿಂದ ಆಗುತ್ತಿದೆ. ನಗರದಲ್ಲಿ ಪರಿಸರ ರಕ್ಷಣೆಗೆ ಗಿಡಗಳನ್ನು ನೆಡುವ ಕಾರ್ಯ ಮಾಡಲಿದೆ.

ಬಿ.ಖಾತಾ ಮಾಡಿಕೊಂಡುವುದು ತೆರಿಗೆ ಕಟ್ಟಲಷ್ಟೇ, ಮಾರಾಟ ಮಾಡಲು ಬರಲ್ಲ. ಬಿ.ಖಾತಾವನ್ನು ಏ ಖಾತಾ ಮಾಡಲು ಸೂಚಿಸಿದೆ. ಆದರೂ ಬುಡಾ ಪರವಾನಿಗೆ ಪಡೆದರೆ ಮಾತ್ರ ಮಾಡಲಿದೆಂದು. ಬಿ.ಖಾತಾ ಗಳನ್ನು ಸಹ ನೋಂದಣೆ ಮಾಡಿದ್ದಾರೆ ಅದು ತಪ್ಪು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸರಿಪಡಿಸಲು ಮನವಿ ಮಾಡಿದೆ ಎಂದು ಆಯುಕ್ತ ಮಂಜುನಾಥ ಹೇಳಿದರು.

30*40 ನಿವೇಶನದಲ್ಲಿ ಶೇ.15 ರಷ್ಟು ನಿಯಮ ಮೀರಿ ನಿರ್ಮಾಣ ಮಾಡಿದ್ದರೆ ಓಸಿ ಸಿಸಿ ನೀಡಲ್ಲ. ಅದರೊಳಗೆ ಇದ್ದರೆ ದಂಡ ಕಟ್ಟಿದರೆ ಮಾತ್ರ ನೀಡಲಿದೆ.

ನಗರದ ರಸ್ತೆಗಳ ಅತಿಕ್ರಮಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೇಯರ್ ಪಿ.ಗಾದೆಪ್ಪ ಮಾಸ್ಟರ್ ಪ್ಲಾನ್ ರೋಡ್ ಗೆ ಈ ತಿಂಗಳ ಅವಧಿಯಲ್ಲಿ ಟೆಂಡರ್ ಆಗಲಿದೆಂದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅವ್ವಾರು ಮಂಜುನಾಥ ಮೇಯರ್ ಮತ್ತು ಆಯುಕ್ತರಿಗೆ. .ಎ ಮತ್ತು ಬಿ ಖಾತೆ ನವೀಕರಣ ಸುಲಭಗೊಳಿಸ ಬೇಕು.ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಾರ್ಡ್ ವಾರು ತಂಡ ರಚಿಸಿ. ಬೀದಿ ದೀಪಗಳು ಹಗಲು ವೇಳೆ ಉರಿಯುತ್ತಿವೆ ಇದನ್ನು ನಿಯಂತ್ರಿಸಬೇಕು.

ಚೇಂಬರ್ ಕಟ್ಟಡದ ಮುಂದಿನ ರಸ್ತೆ ಅಭಿವೃದ್ಧಿ ಪಡಿಸಿ. ಕೈಗಾರಿಕಾ ಪ್ರದೇಶದಲ್ಲಿ ನೀರು, ಬೀದಿ ದೀಪ ಸೌಲಭ್ಯ ಒದಗಿಸಿ. ತೆರಿಗೆ ಕೇಳುವುದಷ್ಟೇ ಅಲ್ಲ. ಸೌಲಭ್ಯ ಸಹ ನೀಡಿ. ಆಸ್ತಿ , ಕುಡಿಯುವ ನೀರು,  ಒಳ ಚರಂಡಿ ತೆರಿಗೆ ಪಾವತಿಯನ್ನು ಆನ್ ಲೈನ್ ನಲ್ಲಿ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಕೈಗಾರಿಕಾ ಸಮಿತಿಯ ಅಧ್ಯಕ್ಷ ವಿ.ರಾಮಚಂದ್ರ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಒಂದು ಹನಿ ನೀರಿಲ್ಲ.  ಗುಗ್ಗರಹಟ್ಟಿಯಿಂದ ಕಾಲಯವೆ ವರೆಗೆ ಬೀದಿ ದೀಪ ಇಲ್ಲ. ಹಲವು ರಸ್ತೆಗಳು ಹಾಳಾಗಿದ್ದರೂ ದುರಸ್ಥಿ ಮಾಡಿಲ್ಲ. ತೆರಿಗೆ ಕಟ್ಟಿ ಎಲ್ಲಾ ಸೌಲಭ್ಯ ಕೊಡುವುದಾಗಿ ಹೇಳಿತ್ತು. ಆದರೆ ಏನೂ ಮಾಡಲಿಲ್ಲ ಎಂದರು.

ಕೆ.ಎಂ.ಶಿವಮೂರ್ತಿ ಮಾತನಾಡಿ, ಕಳೆದ 40 ವರ್ಷದಿಂದ ಕೈಗಾರಿಕಾ ಪ್ರದೇಶಕ್ಕೆ ನೀರಿನ ಸರಬಾರು ಏಕಿಲ್ಲ. ನಮ್ಮದು ಪಾಲಿಕೆಗೆ ಹಣ ನೀಡುವ ಮರ ಆದರೆ ಅದಕ್ಕೆ ನೀರಿಲ್ಲ ಎಂದರೆ ಹೇಗೆಂದರು. ಅಲ್ಲದೆ ಇಲ್ಲಿ ಒಂದು ಪೈರ್ ಸ್ಟೇಷನ್ ಆಗಬೇಕು ಎಂದರು.

ಹಿರಿಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ ಮಾತನಾಡಿ. ಕೈಗಾರಿಕಾ ಪ್ರದೇಶದಲ್ಲಿ ಓವರ್ ಹೆಡ್ ಟ್ಯಾಂಕ್ ಇದೆ ಆದರೆ ನೀರಿಲ್ಲ ಎಂದರು. ಪ್ರತಿ ಕೈಗಾರಿಜೆಯಿಂದ 3 ರಿಂದ 5 ಲಕ್ಷ ರೂ ತೆರಿಗೆ ಕೊಟ್ಟರೂ ಪಾರಂ 2 ಮಾತ್ರ ಕಳೆದ ಐದು ವರ್ಷದಿಂದ ಕೇಳಿದರೂ ಯಾಕೆ ಕೊಡಲ್ಲ ಎಂದರು.

ಸರಿಯಾದ ದಾಖಲೆ ನೀಡಿದರೂ ಯಾಕೆ ಫಾರಂ ಕೊಟ್ಟಿಲ್ಲ. ದಾಖಲೆ ನೀಡಿದರೆ 15 ದಿನದಲ್ಲಿ ನೀಡಿ ಎಂದು ಪಾಲಿಕೆ ಸದಸ್ಯ ಕುಬೇರ ತಮ್ಮ ಸಿಬ್ಬಂದಿ ವೆಂಕಟೇಶ್ ಗೆ   ಹೇಳಿದರು.  ಈ ವೇಳೆ ದಾಖಲೆ ನೀಡಿದರೆ ಕೊಡಲು ಏನು ಸಮಸ್ಯೆ ಎಂದು ಆಯುಕ್ತ ಪಿ.ಎಸ್. ಮಂಜುನಾಥ  ಪ್ರಶ್ನಿಸಿ.  ಮೊದಲು ಅರ್ಜಿ ಸಲ್ಲಿಸಿ ಅದಕ್ಕೆ ನಿಗಧಿಯಾಗಿರುವ ದಿನಗಳ ಒಳಗೆ ಮಾಡಲು ಸೂಚಿಸಿದರು.  ಮ್ಯುಟೇಷನ್, ಆಸ್ತಿ ತೆರಿಗೆ ಮೊದಲಾದವುಗಳನ್ನು  ಸರ್ಕಾರ ಆನ್ ಲೈನ್ ನಲ್ಲಿ  ಮಾಡಲು ವ್ಯವಸ್ಥೆ ಮಾಡಿದೆಂದರು.

ಸದಸ್ಯ ಸುಧಾಕರ್ ಮಾತನಾಡಿ ಕೈಗಾರಿಕಾ ಪ್ರದೇಶವನ್ನು ಪಾಲಿಕೆಗೆ ವಹಿಸಿದ ಮೇಲೂ ಅಲ್ಲಿ ಕಸ ಸಂಗ್ರಹಣೆ ನಡೆಯುತ್ತಿಲ್ಲ ಎಂದರು.

ರಾಘವೇಂದ್ರ ಮಾತನಾಡಿ, ಕೊಲಾಚಲಂ ಕಾಂಪೌಂಡ್ ನಲ್ಲಿನ ರಸ್ತೆಗಳ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳಬೇಕೆಂದರು.

ಐನಾಥರೆಡ್ಡಿ ಮಾತನಾಡಿ ಬಿಸಲಳ್ಳಿ ಪ್ರದೇಶದಲ್ಲಿ ವಿದ್ಯುತ್ ಸಮರ್ಪಕ ಸರಬರಾಜು ಮಾಡಬೇಕು ಬೀದಿ ದೀಪ ಹಾಕಬೇಕು  ಎಂದರು.

ವೆಂಕಟೇಶ್ ಮಾತನಾಡಿ,  ನಗರದಲ್ಲಿನ  ಒಳಚರಂಡಿ ನೀರು ಶುದ್ದೀಕರಣ ಘಟಕ (ಎಸ್ ಟಿಪಿ)ದ ನೀರು ಬಳಕೆಗೆ ನೀಡಿ ಎಂದರು.  ಆಯುಕ್ತರು ಇವು ಹಳೇ ಘಟಕಗಳಾಗಿವೆ. ರಿನವೇಷನ್ ಗೆ ಕೇಳಿತ್ತು 40 ಕೋಟಿ ರೂಗೆ ಆದರೆ ಹೊಸ ತಂತ್ರಜ್ಞಾನದಲ್ಲಿ ಮಾಡಲು ಪ್ರಕ್ರಿಯೆ ನಡೆದಿದೆ. ತಾತ್ಕಾಲಿಕವಾಗಿ ಬರುವ ಆರು ತಿಂಗಳಲ್ಲಿ ಮಾಡಿ ಕೈಗಾರಿಕೆಗೆ ನೀಡಲಿದೆಂದರು.

ನಾಯಿ, ಬೀದಿ ದನಗಳ ಕಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಈ ವರೆಗೆ 3500 ನಾಯಿಗಳಿಗೆ ಚಿಕಿತ್ಸೆ, ಸಂತಾನ ಹರಣ ಮಾಡಿ ಬಿಟ್ಟಿದೆ. ಈಗ ಆಸ್ಪತ್ರೆ, ಶಾಲೆ ಮೊದಲಾದ ಸಾರ್ವಜನಿಕ ಸ್ಥಳದಲ್ಲಿನ ನಾಯಿಗಳನ್ನು ಹಿಡಿಯುತ್ತಿದೆ. ಆಯಾ ಸಂಸ್ಥೆಗಳು ನಾಯಿಗಳು ಬರದಂತೆ ಮಾಡಬೇಕಿದೆಂದು ಹೇಳಿದರು.

ಚೇಂಬರ್ ಆಫ್ ಕಾಮರ್ಸ್ ನ ಕಾರ್ಯದರ್ಶಿ ಕೆ.ಸಿ.ಸುರೇಶ್ ಬಾಬು, ಪದಾಧಿಕಾರಿಗಳು, ಸದಸ್ಯರು ಇದ್ದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ