ಇಂಡಿ: ತಾಲೂಕಿನ ಲಚ್ಯಾಣ ಮಾರ್ಗವಾಗಿ ಸೋಲಾಪೂರಕ್ಕೆ ಹೋಗುವ ನೂತನ ಬಸ್‌ಗೆ ಗ್ರಾಮಸ್ಥರು ಶ್ರೀ ಸಿದ್ಧಲಿಂಗ ಮಹಾರಾಜರ ಮಠದ ಆವರಣದಲ್ಲಿ ಸ್ವಾಗತಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಬಸ್ ಚಾಲಕ ನಿರ್ವಾಹಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಲಚ್ಯಾಣದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸೋಮನಾಥ ಹಿರೇಮಠ, ಲಚ್ಯಾಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಭೀಮರಾಯ ತೇಲಿ, ಸುರೇಶ ವಾಲಿ, ರಮೇಶ ಚವ್ಹಾಣ, ಗ್ರಾಮಸ್ಥರಾದ ಶಿವಾನಂದ ಬಿರಾದಾರ, ಧನರಾಜ್ ಮುಜಗೊಂಡ, ಈರಣ್ಣ ಬಿರಾದಾರ, ಮಲಕಣ್ಣಾ ಗುಬ್ಯಾಡ, ನಿವೃತ್ತ ಶಿಕ್ಷಕ ಹಣಮಂತಗೌಡ ಪಾಟೀಲ, ವಿಜಯಕುಮಾರ ಶಹಾ, ಅಪ್ಪಾಶ ಮೈದರಗಿ, ಬಸವರಾಜ ಲಾಳಸೇರಿ, ವಿಠ್ಠಲ ಚೋರಗಿ, ಮಲ್ಲು ಮಜಗೊಂಡ, ಕಲ್ಲಪ್ಪ ದೊಡಮನಿ, ಮಂಜುನಾಥ ನಿಂಬರಗಿ, ಸಿದ್ದಣ್ಣ ಬಿರಾದಾರ, ಸಿದ್ದು ಸಂಭಾಜಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
