ಯರಗಟ್ಟಿ:
ಸಮೀಪದ ನುಗ್ಗಾನಟ್ಟಿ ಗ್ರಾಮಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದ್ದು, ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದಭ೯ದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ ಮಾತನಾಡಿ, ಗ್ರಾಮಕ್ಕೆ ಮುಖ್ಯ ಹೆದ್ದಾರಿಯಿಂದ ೧ ಕಿ.ಮೀ ದೂರ ಇದ್ದು ಬಹುದಿನಗಳಿಂದ ಶಾಲಾ ಕಾಲೇಜು ಮಕ್ಕಳು, ವೃದ್ಧರಿಗೆ ತುಂಬಾ ತೊಂದರೆ ಆಗುತ್ತಿತ್ತು. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಶಾಸಕ ವಿಶ್ವಾಸ ವೈದ್ಯ ಸಮಸ್ಯಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಸಿದ್ದಾರೆ ಎಂದು ಹೇಳಿದರು.
ಚಾಲಕ್ ಹಾಗೂ ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡ , ಬಸಲಿಂಗಯ್ಯ ಹಿರೇಮಠ, ಅದೃಶ ಶೀಲವಂತರ, ರಾಮನಗೌಡ ಪಾಟೀಲ. ಮುದಕಪ್ಪ ಅರಸಿಗುಡಿ, ಮಾರುತಿ ಕೊದನ್ನವರ, ಗಂಗಪ್ಪ ಶೀಲವಂತರ, ಮಹಂತೇಶ ಹಡಪದ, ದೆವಪ್ಪ ಸನ್ನಮ್ಮನವರ, ಶಿವಾನಂದ ಮುರಗೋಡ, ಮಹಾಂತೇಶ ನೇಸರಗಿ, ಶೇಖರ ಶೀಲವಂತರ ಮತ್ತಿತರಿದ್ದರು.
