Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀಟ್‌ ಪ್ರಶ್ನೆ ಪ್ರತಿಕೆ ಸೋರಿಕೆ ; ಕೇಂದ್ರ ಸರ್ಕಾರ ನೇರ ಹೊಣೆ - ಕುಮಾರ ಆಲಗೂರ

 

, ಜಮಖಂಡಿ;ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಕೇಂದ್ರಸರ್ಕಾರವೇ ನೇರ ಹೊಣೆಯಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕುಮಾರ ಆಲಗೂರ ಆರೋಪಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ನೀಟ್‌ ಪರಿಕ್ಷೆಗಳನ್ನು ರದ್ದು ಮಾಡಲಾಗಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ. ವೈದ್ಯಕೀಯ ಕೋರ್ಸಗಳ ಪ್ರವೇಶಕ್ಕಾಗಿ ಮೇ.3 ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರಿಕ್ಷೆ ( ನೀಟ್‌) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆಯಾಗಿದೆ ಹಾಗೂ ಸರ್ಕಾರದ ವೈಫಲ್ಯವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು,

ನೀಟ್‌ ಅತ್ಯಂತ ಕಷ್ಟಕರ ಪರಿಕ್ಷೆ ಎಂದು ವಿದ್ಯಾರ್ಥಿಗಳು ಸಾಕಷ್ಟು ಶ್ರಮ ವಹಿಸಿ ಸಿದ್ಧತೆ ಮಾಡಿಕೊಂಡು ಪರಿಕ್ಷೆಗೆ ಹಾಜರಾಗುತ್ತಾರೆ. ಇಂಥಹ ಘಟನೆಗಳು ಪರಿಕ್ಷೆ ಬರೆದ ವಿಧ್ಯಾರ್ಥಿಗಳಿಗೆ ಆಘಾತ ಉಂಟು ಮಾಡಿದೆ. ಕೇಂದ್ರ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಉದ್ದೇಶ ದಿಂದ ನೀಟ್‌ ಪರಿಕ್ಷೇ ರದ್ದು ಗೊಳಿಸಿ ಮರು ಪರಿಕ್ಷೆ ಮಾಡುವದಾಗಿ ತಿಳಿಸಿದೆ. ಪರಿಕ್ಷೆಗಳನ್ನು ಶಿಸ್ತು ಬದ್ಧವಾಗಿ ನಡೆಸ ಬೇಕಾಗಿರುವದು ಕೇಂದ್ರದ ಕರ್ತವ್ಯವಾಗಿದೆ ಎಂದ ಅವರು ನಿರ್ಲಕ್ಷ ತನದಿಂದ ಪರಿಕ್ಷೆ ನಡೆಸಿದರೆ ವಿದ್ಯಾರ್ಥಿಗಳ ಗತಿ ಏನಾಗಬೆಕು ಎಂದು ಪ್ರಶ್ನಿಸಿದರು. ಪರಿಕ್ಷೆಯ ವಿಶ್ವಾಸಾರ್ಹತೆ ಎಲ್ಲಿದೆ. ಎರಡು ವರ್ಷಗಳ ಹಿಂದೆಯೂ ಇದೇ ರಿತಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿತ್ತು. ಆದರೂ ಕೇಂದ್ರ ಸರ್ಕಾರ ಎಚ್ಚೆತ್ತು ಕೊಂಡಿಲ್ಲ. ಕೆಲವು ರಾಜ್ಯಗಳಲ್ಲಿ ನೀಟ್‌ ಪರಿಕ್ಷೆ ಎದುರಿಸಲು ಸಾಧ್ಯ ವಾಗದೇ ವಿದ್ಯಾರ್ಥಿಗಳು ಆತ್ನ ಹತ್ಯೆಗೆ ಮುಂದಾಗಿರುವ ಘಟನೆಗಳು ನಡೆದಿವೆ ಈ ಎಲ್ಲ ಗೊಂದಲಗಳಿಗೆ ಯಾರು ಹೋಣೆಗಾರರು ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST