Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಎಸ್ಸಿ ಭೂವಿಜ್ಞಾನ ಪದವೀಧರನ ನೈಸರ್ಗಿಕ ಕೃಷಿ ಕ್ರಾಂತಿ


ಬಳ್ಳಾರಿ,ಮೇ 09 : ಇಂದಿನ ಆಧುನಿಕ ಯುಗದಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ, ಓದಿದ ಪದವಿಗೂ ತಾನು ಮಾಡುವ ಕಾಯಕಕ್ಕೂ ನಂಟು ಬೆಸೆದು, ರಾಸಾಯನಿಕ ಮುಕ್ತ ಕೃಷಿಯ ಮೂಲಕ ಹೊಸ ಹಾದಿ ನಿರ್ಮಿಸಿದ್ದಾರೆ ಬಳ್ಳಾರಿ ತಾಲೂಕಿನ ಜಾಲಿಬೆಂಚಿ ಗ್ರಾಮದ ಈಶ್ವರ್ ರೆಡ್ಡಿ.
ಬಿಎಸ್ಸಿ ಭೂವಿಜ್ಞಾನ ಪದವೀಧರರಾದ ಇವರು, ಭೂಮಿಯ ಪದರಗಳ ಜ್ಞಾನದೊಂದಿಗೆ ನೈಸರ್ಗಿಕ ಕೃಷಿಯಲ್ಲಿ ತೊಡಗಿ ಜಿಲ್ಲೆಯಾದ್ಯಂತ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.
*ವೈವಿಧ್ಯಮಯ ಬೆಳೆಗಳ ನಂದನವನ:*
ತಮ್ಮ 11 ಎಕರೆ ಜಮೀನನ್ನು ಈಶ್ವರ್ ರೆಡ್ಡಿ ಅವರು ಕೇವಲ ಒಂದು ಬೆಳೆಗೆ ಸೀಮಿತಗೊಳಿಸದೆ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳಾಗಿ 6 ಎಕರೆಯಲ್ಲಿ ತೆಂಗು (320), ಬಾಳೆ (600), ಕೋಕೋ (600) ಮತ್ತು ನುಗ್ಗೆ (600) ಗಿಡಗಳನ್ನು ಬೆಳೆಸಿದ್ದಾರೆ.
ಅರಣ್ಯ ಕೃಷಿಯಲ್ಲಿ ಮಹಾಗನಿ (500), ಹೆಬ್ಬೇವು (300), ಹುಣಸೆ, ಸೀತಾಫಲ, ಪೇರಲ ಮತ್ತು ಕರಿಬೇವು ಸೇರಿದಂತೆ ವಿವಿಧ ಮರಗಳನ್ನು ಬೆಳೆಸಿ ಪರಿಸರ ಸಮತೋಲನ ಕಾಪಾಡಿದ್ದಾರೆ. ಇದಕ್ಕೆ ಅಂತರ ಬೆಳೆಗಳಾಗಿ 2 ಎಕರೆಯಲ್ಲಿ ಮೆಕ್ಕೆಜೋಳ ಮತ್ತು ತೊಗರಿಯನ್ನು ವೈಜ್ಞಾನಿಕವಾಗಿ ಬೆಳೆದಿದ್ದಾರೆ. ನರ್ಸರಿ ಮೂಲಕ 2 ಎಕರೆಯಲ್ಲಿ ಮೆಣಸಿನಕಾಯಿ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸುತ್ತಿದ್ದಾರೆ.
*ಕೃಷಿಯ ‘ಪಂಚಾಮೃತ'ಗಳು: ಸಾವಯವವೇ ಇವರ ಬ್ರಹ್ಮಾಸ್ತç:*
ರಾಸಾಯನಿಕ ಗೊಬ್ಬರಗಳಿಗೆ ಈಶ್ವರ್ ರೆಡ್ಡಿ ಅವರ ಹೊಲದಲ್ಲಿ ಪ್ರವೇಶವಿಲ್ಲ. ಮನೆಯಲ್ಲೇ ಇರುವ 4 ಗಿರ್ ಆಕಳುಗಳು ಇವರ ಕೃಷಿ ಸಾಮ್ರಾಜ್ಯದ ಶಕ್ತಿ. ಜೀವಾಮೃತ ಹಾಗೂ ಗೋಕೃಪಾಮೃತಗಳ ಮೂಲಕ ಮಣ್ಣಿನ ಜೀವಾಣುಗಳನ್ನು ಹೆಚ್ಚಿಸಲು ಬಳಸುತ್ತಾರೆ. ಬೇವಿನೆಲೆ, ಹೊಂಗೆ, ಸೀತಾಫಲ, ತುಳಸಿ ಸೇರಿದಂತೆ 20ಕ್ಕೂ ಹೆಚ್ಚು ಸಸ್ಯಗಳ ಎಲೆಗಳಿಂದ ತಯಾರಿಸಿದ ದಶಪರ್ಣಿ ಅರ್ಕವೇ ಬೆಳೆಗಳ ರಕ್ಷಣಾ ಕವಚ. ಮೀನು ಮತ್ತು ಮೊಟ್ಟೆಯಿಂದ ತಯಾರಿಸಿದ ಫಿಶ್ ಹಾಗೂ ಎಗ್ ಅಮೈನೋ ಆಸಿಡ್ ಈ ನೈಸರ್ಗಿಕ ದ್ರಾವಣಗಳು ಸಸ್ಯಗಳಿಗೆ ಸಾರಜನಕ ಒದಗಿಸಿ, ಹೂವು-ಹಣ್ಣು ಬಿಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಕೃಷಿ ತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ದ್ರವ ಗೊಬ್ಬರ ತಯಾರಿಸಲು ಬಯೋ ಡೈಜೆಸ್ಟರ್ ಬಳಸುತ್ತಿದ್ದಾರೆ.
*ನೀರಿನ ಮಿತವ್ಯಯ ಮತ್ತು ಉಪಕಸುಬು:*
ನೀರಿನ ಅಭಾವ ನೀಗಿಸಲು ಕೃಷಿ ಇಲಾಖೆಯ ನೆರವಿನಿಂದ ಮುಕ್ಕಾಲು ಎಕರೆಯಲ್ಲಿ ಬೃಹತ್ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ 40,000 ಮೀನುಮರಿಗಳನ್ನು ಬಿಡುವ ಮೂಲಕ ಮೀನುಗಾರಿಕೆಯಲ್ಲೂ ಆದಾಯ ಕಂಡುಕೊAಡಿದ್ದಾರೆ. ಅಲ್ಲದೆ, ಸರ್ಕಾರದ ‘ಪಿಎಂ ಕುಸುಮ್' ಯೋಜನೆಯಡಿ ಸೌರಪಂಪು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಇಂಧನ ಬಳಕೆಗೆ ಮುಂದಾಗಿದ್ದಾರೆ.
*ಮಾರುಕಟ್ಟೆ ಮತ್ತು ಯಶಸ್ಸು:*
ಇವರು ಬೆಳೆದ ಬಾಳೆಹಣ್ಣು ಮತ್ತು ನುಗ್ಗೆಕಾಯಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಪ್ರತಿದಿನ 40-50 ಕೆಜಿ ಬಾಳೆಹಣ್ಣು ಹಾಗೂ ನುಗ್ಗೆಯನ್ನು ನೇರವಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಪೂರೈಸುವ ಮೂಲಕ ಲಾಭದಾಯಕ ಮಾರುಕಟ್ಟೆ ಕಂಡುಕೊAಡಿದ್ದಾರೆ. ಭೂಮಿಯ ಫಲವತ್ತತೆ ಹೆಚ್ಚಿಸಲು ವರ್ಷಕ್ಕೆ 10 ಟ್ರಾö್ಯಕ್ಟರ್‌ಗಳಷ್ಟು ಸಗಣಿ ಗೊಬ್ಬರವನ್ನು ಮಣ್ಣಿಗೆ ಬೆರೆಸುತ್ತಿರುವುದು ಇವರ ಕೃಷಿ ಪ್ರೇಮಕ್ಕೆ ಸಾಕ್ಷಿ.
ಈಶ್ವರ್ ರೆಡ್ಡಿ ಅವರ ಸಾಧನೆಯನ್ನು ಗುರುತಿಸಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಜಯ ಕರ್ನಾಟಕ ಸಂಸ್ಥೆಯಿAದ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಹಾಗೂ ದೂರದರ್ಶನ ಸೇರಿದಂತೆ ಪ್ರಮುಖ ಮಾಧ್ಯಮಗಳು ಇವರ ಕೃಷಿ ಭೂಮಿಗೆ ಭೇಟಿ ನೀಡಿ ಸಂದರ್ಶನ ನಡೆಸಿರುವುದು, ಈಶ್ವರ್ ರೆಡ್ಡಿ ಅವರ 'ಹಸಿರು ಕ್ರಾಂತಿ' ಜಿಲ್ಲೆಗೆ ಮಾದರಿಯಾಗಿದೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಇವರ ಕ್ಷೇತ್ರವನ್ನು ರಾಷ್ಟಿçÃಯ ನೈಸರ್ಗಿಕ ಕೃಷಿ ಅಭಿಯಾನದಡಿ ‘ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರ' ವಾಗಿ ಆಯ್ಕೆ ಮಾಡಲಾಗಿದೆ.
“ಯುವಜನತೆ ಕೇವಲ ಉದ್ಯೋಗದ ಬೆನ್ನತ್ತದೆ, ಭೂಮಿತಾಯಿಯ ಒಡಲನ್ನು ಕೆಡಿಸದೆ ನೈಸರ್ಗಿಕ ಕೃಷಿಯತ್ತ ಮುಖ ಮಾಡಬೇಕು. ವಿಷಮುಕ್ತ ಆಹಾರ ಬೆಳೆಯುವುದೇ ನಾವು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ” ಎಂದು ಹೇಳುತ್ತಾರೆ ರೈತ ಈಶ್ವರ್ ರೆಡ್ಡಿ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಾಯೋಗಿಕ ಅಧ್ಯಯನಕ್ಕೆ ಬಾಗಲಕೋಟೆ ಆಯ್ಕೆ : ಡಿಸಿ ಸಂಗಪ್ಪಮುಗಳಖೋಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಅರ್ಪಿತಾ ಹಾಗೂ ಸಾಧನೆ ಗೈದ ವಿದ್ಯಾರ್ಥಿಗಳಿಗೆ  ಸತ್ಕಾರ ಪೊಲೀಸರ ಕಾರ್ಯಾಚರಣೆ ಕಳೆದುಹೋದ 27 ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರರೈತರಿಗೆ ಶೇ.೯೭ ರಷ್ಟು ಬಿಲ್ ಪಾವತಿ : ಬಾಕಿ ಪಾವತಿಗೆ ಗಡುವುಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ" ಕೂಡಿ ಬಂತು ಕಂಕಣ ಬಲ" ನಾಟಕ ಪ್ರಯೋಗ, ಮತ್ತು ನಾಟಕದ ಕೃತಿ ಬಿಡುಗಡೆ   ಯೂಟ್ಯೂಬ್ ರೈತನ ಯಶೋಗಾಥೆ: ಸಾವಯವ ಕೃಷಿಯಲ್ಲಿ ನಿತೀಶ್ ರೆಡ್ಡಿ ಸಾಧನೆಬರಡಾಗಿದ್ದ ಭೂಮಿಯಲ್ಲಿ ಕೃಷಿ ಕ್ರಾಂತಿ: ಮೋಕಾ ಹೋಬಳಿಯ ರೈತ ಭೋಗಾ ರೆಡ್ಡಿಗೆ ‘ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ' ಪ್ರಶಸ್ತಿಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರಬಿಎಸ್ಸಿ ಭೂವಿಜ್ಞಾನ ಪದವೀಧರನ ನೈಸರ್ಗಿಕ ಕೃಷಿ ಕ್ರಾಂತಿ