Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಷ್ಟ್ರದ ಭದ್ರತೆ ಮೇ7ರಂದು ಮತದಾನ ಮಾಡೋಣ : ಹುಲ್ಲುಮನಿ ತಿಮ್ಮಣ್ಣ

ರನ್ನ ಬೆಳಗಲಿ: ಏ.24., ಸ್ಥಳೀಯ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟೆ ಮತ್ತು ತಾಲೂಕ ಆಡಳಿತ, ತಾಲೂಕ ಸ್ವೀಪ್ ಸಮಿತಿ ಮುಧೋಳ ಹಾಗೂ ಸ್ಥಳೀಯ ಪಟ್ಟಣ ಪಂಚಾಯತ ಕಾರ್ಯಾಲಯ ರನ್ನ ಬೆಳಗಲಿ ಆಶ್ರಯದಲ್ಲಿ ಮತದಾನ ಜಾಗೃತಿಗಾಗಿ ಸೈಕಲ್ ಜಾತಾ ಮತ್ತು ಪ್ರತಿಜ್ಞಾವಿಧಿ
ಬೋಧನಾ ಕಾರ್ಯಕ್ರಮ ಜರುಗಿತು.

ಮತದಾನ ಜಾಗೃತಿಯ ಸೈಕಲ್ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹುಲ್ಲುಮನಿ ತಿಮ್ಮಣ್ಣ ಮುಧೋಳ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳು ಮೇ ೭ ರಂದು ತಪ್ಪದೆ ಮತದಾನ ಮಾಡೋಣ ರಾಷ್ಟ್ರದ ಭದ್ರತೆಗೆ ಕೈಜೋಡಿಸೋಣ, ಚುನಾವಣೆ ಪ್ರಜಾ ಪ್ರಭುತ್ವದ ಮಹತ್ವದ ಘಟ್ಟವಾಗಿದೆ.

ಆದರಿಂದ ಇಲ್ಲಿ ಸೇರಿದ ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಅದರೊಂದಿಗೆ ಮತದಾನ ಮಾಡುವಂತೆ ಎಲ್ಲರನ್ನು ಪ್ರೇರೇಪಿಸಬೇಕು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳಲಾರದೆ. ಸಂವಿಧಾನ ನೀಡಿದ ಮಹತ್ವದ ವರದಾನವಾದ ಮತದಾನದ ಹಕ್ಕನ್ನು, ಎಲ್ಲರೂ ಮತ ದಾನ ಮಾಡುವ ಮೂಲಕ, ದೇಶದ
ಭದ್ರತೆಗೆ ಕೈಜೋಡಿಸೋಣ ಎಂಬ ವಿಚಾರವನ್ನು ತಿಳಿಸಿದರು.

ಮುಧೋಳ ತಾಲೂಕ ದಂಡಾಧಿಕಾರಿಗಳಾದ ವಿನೋದ ಹತ್ತಳ್ಳಿ ತಶಿಲ್ದಾರರು ಮಾನವ ಸರಪಳಿಯ ನಿರ್ಮಿಸಿ, ಸೇರಿದ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿ ಸಮೂಹಕ್ಕೆ, ಅಧಿಕಾರಿ ಮತ್ತು ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು, ನಂತರ ವಿದ್ಯಾರ್ಥಿಗಳ ಜೊತೆಗೆ ಎಲ್ಲಾ ಅಧಿಕಾರಿಗಳು ಸೈಕಲ್ ತುಳಿಯುತ್ತಾ ಮತದಾನ ಜಾಗೃತಿಯ ಘೋಷವಾಕ್ಯಗಳನ್ನು
ಹೇಳುತ್ತಾ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ವಿಶೇಷ ಮತಗಟ್ಟೆಗಳಿಗೆ ಭೇಟಿಕೊಟ್ಟು
ಮತಗಟ್ಟೆಗಳ ವ್ಯವಸ್ಥೆಯನ್ನ ವೀಕ್ಷಣೆ ಮಾಡಿದರು.

ರನ್ನ ಬೆಳಗಲಿಯ ಪಟ್ಟಣದಲ್ಲಿ &quoಣ;ಪ್ರತಿಶತ ಮತದಾನ ರನ್ನ ಬೆಳಗಲಿ ಪಟ್ಟಣದ ವಾಗ್ದಾನ&quoಣ; ಎಂದು ಹೇಳಿ ಎಲ್ಲರೂ ಕಡ್ಡಾಯ ವಾಗಿ ಮತದಾನ ಮಾಡಲು ಪ್ರೇರೇಪಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ನಾಮದೇವ ಲಮಾಣಿ, ಚುನಾವಣಾ ಸೆಕ್ಟರ್ ಆಫೀಸರಾದ ಎಸ್.ಎಂ. ಸುತಾರ, ಗ್ರಾಮ ಆಡಳಿತಾಧಿಕಾರಿಯದ ಬಿ .ಎಂ. ಪಾಟೀಲ, ಸ್ಕೌಟ್ ಮಾಸ್ಟರ್ ಎಸ್.ಬಿ.ರಡರಟ್ಟಿ, ಪಿ.ಡಿ.ನಾಗನೂರು, ಎಸ್.ಎಲ್.ಕಟಾರಿ, ಆರ್.ಎ. ತಳವಾರ, ರಮೇಶ ಪಾಟೀಲ, ಬಾಬು ಜಕಾತಿ, ರಾಜು ಮುಗಳಖೊಡ,ಸಚಿನ ಕಾಸರ, ಎಸ್.ಬಿ.ಚೌದ್ರಿ, ವಿಠ್ಠಲ ಪೂಜೇರಿ, ರವಿ ಭಜಂತ್ರಿ, ಬಾಳಪ್ಪ ಹೊಸೂರ, ಸೈದು ಮಾಂಗ, ಗಿರೀಶ ಮೇತ್ರಿ, ಪುಟ್ಟು ದೊಡ್ಡಮನಿ ಮತ್ತು ಪತ್ರಕರ್ತರಾದ ರಾಘವೇಂದ್ರ ನೀಲಣ್ಣವರ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಅಧಿಕಾರಿಗಳು,ಸಾರ್ವಜನಿಕರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ