Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೇಸರಗಿ, ನಾಗನೂರ ಜಿ ಪಂ. ಕ್ಷೇತ್ರದ ನೀರಾವರಿ ಯೋಜನೆ ಕಾರ್ಯಾರಂಭ:ಸತೀಶ ಜಾರಕಿಹೊಳಿ 





ನೇಸರಗಿ. ನೇಸರಗಿ ಹಾಗೂ ನಾಗನೂರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಒಂದು ನೀರಾವರಿ ಯೋಜನೆ ಇಲ್ಲದೆ ರೈತರು ಹೀನಾಯ ಪರಿಸ್ಥಿತಿ ಅನುಭವಿಸುತ್ತಿದ್ದರು. ಕಳೆದ 15 ವರ್ಷಗಳ ಹೋರಾಟದ ಫಲ ಹಾಗೂ ಈ ಭಾಗದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಛಲ ಬಿಡದ ಹೋರಾಟದ ಪಲವಾಗಿ ಇಂದು ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆ ಸುಮಾರು 520 ಕೋಟಿ ಅನುಧಾನದ ನೀರಾವರಿ ಯೋಜನೆಗೆ ಇಂದು  200 ಕೋಟಿ ರೂಪಾಯಿ ಅನುಧಾನ ಸಿಕ್ಕಿದ್ದು ನೀರಾವರಿ ಯೋಜನೆ ಕಾರ್ಯ 3 ವರ್ಷಗಳಲ್ಲಿ  ರೈತರಿಗೆ ನೀರು ಸಿಗಲಿದೆ ಎಂದು  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

   ಅವರುಸೋಮವಾರದಂದು  ಗ್ರಾಮದ ಎ ಪಿ ಎಮ್ ಸಿ ಆವರಣದಲ್ಲಿ  ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಹಿಂದಿನ ಸರ್ಕಾರದಲ್ಲಿ ಗೊತ್ತು ಗುರಿಯಿಲ್ಲದೇ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅದಕ್ಕೆ ಬಜೆಟ್ ಅನುಮೋಧನೆ ಸಹಿತ ಇರಲಿಲ್ಲ. ಹೀಗಾಗಿ ಅವು ಕಾರ್ಯರೂಪಕ್ಕೆ ಬರಲಿಲ್ಲ. ನೀರಾವರಿ ಯೋಜನೆ ಅನುಷ್ಠಾನಕ್ಕೆ ಶಾಸಕ ಬಾಬಾಸಾಹೇಬ ಪಾಟೀಲರು ಶ್ರಮಿಸಿದ್ದು ಅವರ ಶ್ರಮದ ಪಲವಾಗಿ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯ ಗೋಕಾಕ ಕಣಗಾವಿ ಹತ್ತಿರ 2 ಎಕರೆ ಜಾಗೆಯಲ್ಲಿ ಜಿಲ್ಲಾ ಮಟ್ಟದ 2 ನೇ ಜಿಲ್ಲಾಸ್ಪತ್ರೆ ಪ್ರಾರಂಬ ಅಗಲಿದ್ದು ಅದರ ಸದುಪಯೋಗ ತಮಗೂ ಸಿಗಲಿದೆ ಎಂದರು. ಎಲ್ಲ ಕ್ಷೇತ್ರದಲ್ಲಿ ಸಿದ್ರಾಮಯ್ಯ ಸರ್ಕಾರ ಕಾರ್ಯ ಮಾಡುತ್ತಿದ್ದು  ಹಿಂದೆ ಡಿ ಬಿ ಇನಾಮದಾರ ಅವರ ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆ ಇಂದು ಈಡೇರಿದೆ ಎಂದರು. ನೂತನ ಜಿಲ್ಲಾಧಿಕಾರಿ ಕಚೇರಿ,ಬೆಳಗಾವಿ  ಚನ್ನಮ್ಮನ  ಸೆರ್ಕಲದಿಂದ ಸಂಕಮ ಹೋಟೆಲವರೆಗೆ 200 ಕೋಟಿ ವೆಚ್ಚದಲ್ಲಿ ಡಬ್ಬಲ್ ಡೆಕ್ಕರ ರಸ್ತೆ, ಗೋಕಾಕ ಪಾಲ್ಸ್ ಪ್ರವಾಸಿ ಕ್ಷೇತ್ರದ ಮಾಡಲು ಕೇಬಲ್ ಕಾರ್ ಮೂಲಕ ವೀಕ್ಷಣೆಗೆ ವ್ಯವಸ್ಥೆ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ 200 ಕೋಟಿ ರೂಪಾಯಿಗಳ ಅನುಧಾನ,ಕ್ಯಾನ್ಸರ ಆಸ್ಪತ್ರೆ, ನೇಗಿನಹಾಳ ರಸ್ತೆ, ಗಟಾರ್, ಲೈಟ್ ಬಳಕೆಗೆ ಕ್ರಮ, ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ ಗಳ ಪ್ರತಿ ವರ್ಷ ಅನುಧಾನ, ಟೀಮ್ ಪಾರ್ಕ್ ನಿರ್ಮಾಣಕ್ಕೆ 55 ಕೋಟಿ ರೂ. ನೇಸರಗಿ ಬೈಲವಾಡ  ಜತ್ತ ಜಂಬೋಟಿ ಡಬ್ಬಲ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿ, ಈ ಭಾಗದ ಜನರಿಗೆ ನೀರಾವರಿ ಸೌಲಭ್ಯ ಸಿಕ್ಕು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುತ್ತದೆ ಇದ್ದರಿಂದ ಈ ಭಾಗದ ರೈತರು ಆರ್ಥಿಕವಾಗಿ ಸಾದ್ರದರಾಗುತ್ತಾರೆ ಎಂದರು.

     ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಈ ಒಂದು ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆ ಪ್ರಾರಂಭವಾಗಲು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸಹಾಯ ಸಹಕಾರ  ಬಹಳ ಇದ್ದು, ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣಿಭೂತರಾಗಿದ್ದಾರೆ. ಈ ಭಾಗ ಮಳೆ ನೀರಾವರಿ ಆಶ್ರಯಿತ ಕ್ಷೇತ್ರವದ ಈ ಭಾಗಕ್ಕೆ ನೀರಾವರಿ ಯೋಜನೆಯಿಂದ ರೈತರ ಬೆಳವಣಿಗೆಗೆ ಅಡಿಪಾಯ ಆಗುತ್ತದೆ. ಮತ್ತು ಈ ಒಂದು ಯೋಜನೆಗೆ ಸಿ ಎಮ್ ಸಿದ್ರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ ಸಹಕಾರವು ಇದೆ ಎಂದರು. ಒಟ್ಟು 520 ಕೋಟಿ ರೂಪಾಯಿಗಳ ನೀರಾವರಿ ಯೋಜನೆ ಕಾಮಗಾರಿಯ ಅನುಧಾನದಲ್ಲಿ 200 ಕೋಟಿ ರೂ. ಮಂಜೂರಾಗಿದ್ದು ನಾಳೆಯಿಂದಲೇ 11600 ಹೆಕ್ಟರ್ ಭೂಮಿಗಳಿಗೆ ನೀರು ಒದಗಿಸುವ ಯೋಜನೆ ಪ್ರಾರಂಭವಾಗಲಿದೆ ಎಂದರು. ಮೊದಲ ಹಂತದ 18 ಕಿಲೋ ಮೀಟರ್  ಉದ್ದದ ಪೈಪ್ ಲೈನ್ ಕೆಲಸ ಆರಂಭ ಆಗಲಿದೆ ಎಂದರು. ಈ ಕಾರ್ಯವನ್ನು ಜೆ ಎನ್ ಇನಪಾಸ್ಟ್ರಚರಲ ಕಂಪನಿ ಕೆಲಸ ಮಾಡುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ನೇಸರಗಿ ಮಲ್ಲಾಪುರ  ಗಾಳೆಶ್ವರ  ಮಠದ ಚಿದಾನಂದ ಶ್ರೀಗಳು, ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಎಸ್ ಬಿ ರುದ್ರಾಮ ಮಾತನಾಡಿದರು.

   ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ, ಯುವ ಮುಖಂಡ ನಾನಾಸಾಹೇಬ ಪಾಟೀಲ, ಸಚಿನ ಪಾಟೀಲ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಅಡಿವಪ್ಪ   ಮಾಳಣ್ಣವರ, ಶಿವನಗೌಡ  ಪಾಟೀಲ, ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾವಸಾಹೇಬ ಪಾಟೀಲ,ಬರಮಣ್ಣ ಸತ್ತೇನ್ನವರ,ರವಿ ಸಿದ್ದಮ್ಮನವರ, ಅಬ್ಬಾಸ ಪಿರಜಾದೆ, ಅಶೋಕ ಯರಗೋಪ್ಪ  , ಉಮೇಶ ಪಾಟೀಲ, ಸತೀಶ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಮಲಗೌಡ ಪಾಟೀಲ, ಶಂಕರ ಹೊಳಿ,ನಿಂಗಪ್ಪ ತಳವಾರ,ರಮೇಶ ಮೇಲಿನಮನಿ, ಮಂಜುನಾಥ್ ಹುಲಮನಿ, ಮಲ್ಲಿಕಾರ್ಜುನ ಕಲ್ಲೋಳಿ, ಪ್ರಕಾಶ ಮುಂಗರವಾಡಿ, ಶಿವಾನಂದ ಕುಂಕುರ,ಆದರ್ಶ ರಾಚನಾಯ್ಕ,ಸೇರಿದಂತೆ ನೇಸರಗಿ ಹಾಗೂ ನಾಗನೂರ ಜಿಲ್ಲಾ ಪಂಚಾಯತ ಮತಕ್ಷೇತ್ರದ   ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು  ಉಪಸ್ಥಿತರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ