ಬಳ್ಳಾರಿ, ಏ.27::
ನಾರಿ ಶಕ್ತಿ ಫೋರಂ ಬಳ್ಳಾರಿ ವತಿಯಿಂದ ನಾರಿ ಶಕ್ತಿ ವಂದನಾ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಜಾರಿಗೆ ಒತ್ತಾಯಿಸಿ ಹಾಗೂ ಅದನ್ನು ತಡೆಯಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ವಿರುದ್ಧ ನಗರದಲ್ಲಿ ಜನಾಕ್ರೋಶ ಜಾಥಾ ಹಮ್ಮಿಕೊಳ್ಳಲಾಗಿದೆ.
ಶನಿವಾರ ಸಂಜೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ರಾಯಲ್ ಸರ್ಕಲ್ ವರೆಗೆ ಪ್ರತಿಭಟನೆ ಹಾಗೂ ಜಾಥಾ ನಡೆಯಲಿದ್ದು, ಮಹಿಳೆಯರಿಗೆ 33% ಮೀಸಲಾತಿ ಅನಿವಾರ್ಯವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಮಹಿಳಾ ಸಬಲೀಕರಣ ಹಾಗೂ ರಾಜಕೀಯದಲ್ಲಿ ಸಮಾನ ಅವಕಾಶಗಳಿಗಾಗಿ ಈ ಜಾಥಾ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಹಂಪಿ ರಮಣ್ಣ, ರಾಜ್ಯ ಕಾರ್ಯಕಾರಣಿ ಸದಸ್ಯೆ ಡಾ. ಅರುಣಾ, ರಾಜ್ಯ ಉಪಾಧ್ಯಕ್ಷೆ ಕೆ.ಆರ್. ವಿಜಯಲಕ್ಷ್ಮಿ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ಸೇರಿದಂತೆ ಸ್ವಾಗತ್ಯಘಿ, ಸಾಹನಾ ಹಿರೇಮಠ್, ಡಾ. ರೇಣುಕಾ, ಗ್ರಾಯತಿ ರೆಡ್ಡಿ, ಪುಷ್ಪಲತಾ, ಚಂದಾನಿ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು