ಬಳ್ಳಾರಿ. ಆ. 28 : ಸಮಾಜದಲ್ಲಿ ವಿಷ ಆಹಾರ ಪದಾರ್ಥಗಳಿಂದ ಮಾನವನು ಹಲವಾರು ರೋಗರು ಜಿಲ್ಲೆಗಳಿಂದ ಬಳಲುತ್ತಿದ್ದಾನೆ ಅದರಲ್ಲೂ ಮುಖ್ಯವಾಗಿ ಪ್ರತಿ ಐದು ಜನರಲ್ಲಿ ಒಬ್ಬರಂತೆ ಕ್ಯಾನ್ಸರ್ ಮಧುಮೇಹ ರಕ್ತದೊತ್ತಡ ಸೇರಿದಂತೆ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಜೀವನವನ್ನು ನರಕ ಮಾಡಿಕೊಂಡಿದ್ದಾನೆ, ಇಂಥವರನ್ನು ವಿಷಯುಕ್ತ ಆಹಾರಗಳಿಂದ ದೂರ ಮಾಡಿ ವಿಷಮುಕ್ತ ರಸಾಯನಿಕ ಮುಕ್ತ ಆಹಾರ ಪದಾರ್ಥಗಳ ನೀಡುವ ನಿಟ್ಟಿನಲ್ಲಿ ಇಂದು ನಾವು ನಮ್ದು ಸಂತೆಯನ್ನು ಆರಭಿಸಿದ್ದೇವೆ, ಈಗಾಗಲೇ ಇಂತಹ ಸಂತೆಗಳನ್ನು ಬೆಂಗಳೂರಿನ ಆರ್ ಆರ್ ನಗರದಲ್ಲಿ, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಸಲಾಗುತ್ತಿದೆ ಇಂದಿನಿಂದ ಬಳ್ಳಾರಿ ನಗರದಲ್ಲಿ ಆರಂಭಿಸಿ ಪ್ರತಿ ಬುಧವಾರದಂದು ನಡೆಸಲಾಗುವದುಎಂದು ಸಿಕ್ಕಿ ನಂಜುಂಡಸ್ವಾಮಿ ತಿಳಿಸಿದರು. ಅವರು ಬುಧವಾರದಂದು ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೀರೆ ವತಿಯಿಂದ ಹಮ್ಮಿಕೊಳ್ಳಲಾದ
ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರ ಜತೆಗೆ, ಗ್ರಾಹಕರಿಗೆ ತಾಜಾ, ಗುಣಮಟ್ಟದ ಹಾಗೂ ವಿಷಮುಕ್ತ ಆಹಾರ ಪದಾರ್ಥಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ನಮ್ದು ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು
ಇಂತಹ ಉತ್ತಮ ಕಾರ್ಯಕ್ರಮವನ್ನು ಆರಂಭಿಸುವ ಸಂದರ್ಭದಲ್ಲಿ ಆರಂಭದಲ್ಲಿ ಕೆಲವೊಂದು ಕಷ್ಟಗಳು ಎದುರಾಗಬಹುದು. ಆದರೆ ರೈತರೊಂದಿಗೆ ಬಳ್ಳಾರಿ ಮಹಾನಗರ ಪಾಲಿಕೆ ಸದಾ ಕೈಜೋಡಿಸಲಿದೆ. ರೈತ ಸಂತೆ ನಿರಂತರವಾಗಿ ನಡೆಯಲು ಸೂಕ್ತ ಸ್ಥಳವನ್ನು ಗುರುತಿಸಿ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಮುಂದಿನ ಪೀಳಿಗೆಗೆ ಆರೋಗ್ಯಕರ ಬದುಕು ನೀಡಬೇಕಾದರೆ ವಿಷಮುಕ್ತ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರು ನೈಸರ್ಗಿಕ ಕೃಷಿಯತ್ತ ಹೆಚ್ಚಿನ ಒಲವು ತೋರುವುದರ ಜತೆಗೆ, ಸಾರ್ವಜನಿಕರು ಸ್ಥಳೀಯ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಬಳಕೆದಾರರಿಗೆ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಲಿದ್ದು, ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯಲಿವೆ. ‘ವಿಷಮುಕ್ತ ಭೂಮಿ, ವಿಷಮುಕ್ತ ಆಹಾರದಿಂದ ಆರೋಗ್ಯವಂತ ಭಾರತ ನಿರ್ಮಾಣ’ ಎಂಬ ಆಶಯದೊಂದಿಗೆ ರೈತ ಸಂತೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ರೈತ ಸಂತೆ ಕೇವಲ ಮಾರಾಟದ ವೇದಿಕೆಯಾಗದೆ, ರೈತ ಮತ್ತು ಬಳಕೆದಾರರ ನಡುವಿನ ನೇರ ಸಂಪರ್ಕವನ್ನು ಬಲಪಡಿಸುವ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಶಾಶ್ವತ ವೇದಿಕೆಯಾಗಬೇಕು ಎಂಬ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಬಸವರಾಜ ಸ್ವಾಮಿ, ಕಲ್ಯಾಣ ಸ್ವಾಮಿ, ಮಲ್ಲಿಕಾರ್ಜುನ್ ಬಳ್ಳಾರಿ,ಶಶಿಕಾಂತ್, ರವಿ S, ಮಹೇಶ್ವರ ಸ್ವಾಮಿ, ಹೊನ್ನೂರ್, ಪ್ರಕಾಶ್,ಚುಕ್ಕಿ ನಂಜುಂಡ ಸ್ವಾಮಿ, ಗಣಪಲ್ ಏನಾಥ್ ರೆಡ್ಡಿ, DR ನಾಗಬುಷನ್,ವಿಶ್ವೇಶ್ವರ ಸಜ್ಜನ್,ಸೇರಿದಂತೆ ಗಣ್ಯರು ಕರೀಕ್ರಮದಲ್ಲಿ ಉಪಸ್ಥಿತರಿದ್ದರು.