ಬಳ್ಳಾರಿ:08.. ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಕಲಾಪ್ರದರ್ಶನ ಬೆಳೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಹಾಯಧನವನ್ನು ನೀಡುವುದರ ಮೂಲಕ ಮಕ್ಕಳ ಅಭಿನಯ ಕಲಾ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಹೇಳಿದರು.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಲಕ್ಷ್ಮಿ ನಗರ ಕ್ಯಾಂಪ್ ಮುದ್ದಟನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾಗರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್ ಎಂ ನಾಗರಾಜ ಸ್ವಾಮಿ ಕಾರ್ಯಕ್ರಮ ಉದ್ಘಾಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಬಯಲಾಟ ನಾಟಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ತೀಚಿಗೆ ಕಡಿಮೆಯಾಗುತ್ತೇವೆ. ಇಂದಿನ ಯುವ ಪೀಳಿಗೆಯ ಮಕ್ಕಳಲ್ಲಿ ಇಂತಹ ಸುಗಮ ಸಂಗೀತ, ಡೊಳ್ಳು ಕುಣಿತ, ಸಮೂಹ, ನೃತ್ಯ, ರಂಗಗೀತೆ, ಕಿರು ನಾಟಕ, ಹಾಸ್ಯ, ಪೌರಾಣಿಕ ಬಯಲಾಟ, ನಾಟಕ, ವೀರಗಾಸೆ, ಯಕ್ಷಗಾನ, ಹೀಗೆ ಇಂತಹ ಹಲವಾರು ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ಕಲಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಕಲಾ ಟ್ರಸ್ಟ್ ವೇದಿಕೆಗಳು ಸಹಕಾರಿಯಾಗಿವೆ ಎಂದರು.
ಗ್ರಾಮದ ಮುಖಂಡ ಎಸ್.ಎಂ ಅಡಿವೆಯ್ಯ ಸ್ವಾಮಿ ಮಾತನಾಡಿ, ಸಿರಿಗೇರಿ ಕಲೆಗಳ ತವರೂರು. ಪ್ರತಿಯೊಬ್ಬರು ಕಲಾವಿದರನ್ನು ಗೌರವಿಸಿ ಕಲೆಗೆ ಪ್ರೋತ್ಸಾಹ ನೀಡಿ ಅವರನ್ನು ಸ್ಮರಿಸುವ ಮತ್ತು ಗೌರವಿಸುವ ಕೆಲಸ ನಿಮ್ಮ ನಮ್ಮೆಲ್ಲರದಾಗಬೇಕು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಧಾತ್ರಿರಂಗ ಸಂಸ್ಥೆ ವಿಶ್ವ ಗುರು ಬಯಲಾಟ ಕಲಾ ಟ್ರಸ್ಟ್, ಹೆಜ್ಜೆ ಗೆಜ್ಜೆ ಹಾಗೂ ಅನ್ನಪೂರ್ಣ ಪ್ರಕಾಶನ ಉತ್ತಮ ಕಲಾಪ್ರದರ್ಶನ ನೀಡುತ್ತಿದೆ ಎಂದು ಸ್ಮರಿಸಿದರು.
ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹೂಗಾರ್ ಬಸವರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸುಗಮ ಸಂಗೀತ, ರಂಗ ಗೀತೆ, ಡೊಳ್ಳು ಕುಣಿತ, ಸಮೂಹ ನೃತ್ಯ, ಹಾಗೂ ಸಾಮಾಜಿಕ ನಾಟಕ ಸಂಸಾರದಲ್ಲಿ ಸನಿದಪ ಪ್ರದರ್ಶನಗಳು ನೆರೆದಿದ್ದ ಸಾರ್ವಜನಿಕರನ್ನು ನಗೆಗಡಲೆಯಲ್ಲಿ ತೇಲಿಸಿದವು.
ಮುಖಂಢರಾದ ಎಸ್.ಎನ್. ವಿರುಪಾಕ್ಷಗೌಡ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಸೋಮಶೇಖರಪ್ಪ, ಕುಂಬಾರ್ ಬಸವರಾಜ್, ವಿಶ್ವಗುರು ಬೈಲಾಟಗಳ ಟ್ರಸ್ಟ್ ಅಧ್ಯಕ್ಷ ಏಳಬೆಂಚಿ ಮಲ್ಲಿಕಾರ್ಜುನಗೌಡ, ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ, ಕಲಾತಂಡದ ಕಲಾವಿದರಾದ ಎಸ್ ಆರ್. ಎಂ ಶರಣಬಸವರಾಜ ಸಿದ್ದರಾಂಪುರ, ತಬಲವಾದನ ಉಮೇಶ್ ಸಂಡೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ. ವೀಣಾ ಕುಮಾರಿ ಬಳ್ಳಾರಿ, ರಾಜಶೇಖರ್ ಸಿರಿಗೇರಿ, ಜಯಣ್ಣ ಬಳ್ಳಾರಿ, ಸ.ನಿ.ದ.ಪ ತಂಡದ ಜೆ.ಯಂ ವಿಜಯಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರನ್ನು ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.