Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲೆಯಿಂದ ನಾಡು ನುಡಿ ನೆಲೆಗಟ್ಟು ಉಳಿದಿದೆ: ವೆಂಕಟೇಶ್ ಪ್ರಸಾದ್

 ಬಳ್ಳಾರಿ: 19:.ನಾಡುನುಡಿ ನೆಲೆಗಟ್ಟು ಉಳಿದಿರುವದು ಸಾಂಸ್ಕೃತಿಕ ಕಲಾಪ್ರಕಾರಗಳಿಂದ. ಇವು ನಿರಂತರವಾಗಿ ನಡೆದಲ್ಲಿ ಮನೋರಂಜನೆ ಜೊತೆಗೆ ಹಬ್ಬದ ದಿನಗಳಲ್ಲಿ ಪ್ರಚಲಿತದಲ್ಲಿ ಕಂಡುಬರುತ್ತವೆ. ಇದಕ್ಕೆ ಸಹಕಾರ ಸದಾ ನಮ್ಮಿಂದ ಇರುತ್ತದೆ  ಎಂದು ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್ ಹೇಳಿದರು. 
ನಗರದ ಬಂಡಿಹಟ್ಟಿಯಲ್ಲಿ ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಾಮಾನ್ಯ ಯೋಜನೆಯಡಿ ಹಮ್ಮಿಕೊಂಡಿದ್ದ ಬಯಲಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ ನಾಗರಾಜ್ ಮಾತನಾಡಿ, ಸಪ್ತ ಸ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ನಿರಂತರ ಕಾರ್ಯಕ್ರಮ ಪರಿಗಣಿಸಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರೋತ್ಸಾಹಧನ ನೀಡುತ್ತಿದೆ. ಕಲಾಪ್ರಕಾರಗಳ ಉಳಿವಿಗಾಗಿ ಶ್ರಮಿಸುತ್ತಿದೆ. ಇವು ನಿರಂತರವಾಗಿರಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ 32 ನೇ ವಾರ್ಡ್ ಸದಸ್ಯರಾದ  ಮಂಜುಳಾ ಉಮಾಪತಿ ಮಾತನಾಡಿ ಇಲಾಖೆಯ ಧನಸಹಾಯ ಸದುಪಯೋಗಪಡಿಸಿಕೊಂಡು ಜಿಲ್ಲೆಯ ಎಲ್ಲಾ ಕಲಾಪ್ರಕಾರಗಳು ಪ್ರದರ್ಶನಗೊಳ್ಳುವಂತಾಗಲಿ ಜಿಲ್ಲೆಯಕೀರ್ತಿ ಹೆಚ್ಚಿಸಲಿ ಎಂದು ಹಾರೈಸಿದರು.
ಅತಿಥಿಗಳಾಗಿ ಡಾ.ಕೆ.ಬಸಪ್ಪ, ಬಿ.ವೀಣಾಕುಮಾರಿ, ಹೆಚ್.ಪಾಂಡುರಂಗಪ್ಪ, ಕೆ.ಪರಮೇಶ್, ಈ.ರಂಗಯ್ಯ, ಈ.ಬಸಪ್ಪ, ಈ.ಸಿದ್ದಪ್ಪ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಲಂಬಾಷಾ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಅಧ್ಯಕ್ಷರು ಹಾಗು ಬಯಲಾಟ ರಂಗ ನಿರ್ದೇಶಕ ಹನುಮಾವ ಧೂತ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಗಮಸಂಗೀತವನ್ನು ಸಂಗೀತ ಶಿಕ್ಷಕ ಶಿವಕುಮಾರ್ ಕೆ ಜಿ . ಬಂಡಿಹಟ್ಟಿ ಅವರು ನಡೆಸಿಕೊಟ್ಟರು.
ಜಾನಪದ ಗಾಯನ ಎಸ್.ಎಂ ಹುಲುಗಪ್ಪ ತಂಡ ಬಳ್ಳಾರಿ ಇವರಿಂದ ನಡೆಯಿತು. ಪ್ರಕಾಶ್ ಮತ್ತವರ ತಂಡ ತಂಡದಿಂದ ಸಮೂಹ ನೃತ್ಯ ನಡೆಯಿತು.
ರಂಗಭೂಮಿ ಕಲಾವಿದೆ ಜಿ.ಗೀತಾ ಕೂಡ್ಲಿಗಿ ಅವರಿಂದ ರಂಗಗೀತೆ ಗಾಯನ ನಡೆಯಿತು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST