Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೈಕ್ಲಿಂಗ್‌ ಅಸೋಷಿಯೇಷನ್‌ ಅಧ್ಯಕ್ಷರಾಗಿ ಮುತ್ತಣ್ಣ ಮೇತ್ರಿ ಆಯ್ಕೆ

ಜಮಖಂಡಿ; ಕರ್ನಾಟಕ ರಾಜ್ಯ ಅಮೆಚೂರ್‌ ಸೈಕ್ಲಿಂಗ್‌ ಅಸೋಷಿಯೇಷನ್‌ನ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಹಿರಿಯ ಸೈಕ್ಲಿಂಗ್ ಪಟು ಮುತ್ತಣ್ಣ ಮೇತ್ರಿ ಅವರು 2026ರಿಂದ 2030ರ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ರಮಾ ನಿವಾಸ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಯಂಕಪ್ಪ ಎಂಟೆತ್‌ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಮುತ್ತಣ್ಣ ಮೇತ್ರಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಭವ್ಯ ರೋಡ್‌ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ಆಯೋಜಿಸಲು ಮುಂದಾಗಬೇಕು ಎಂದು ಕರೆ ನೀಡಿದರು.ಸಭೆಯಲ್ಲಿ ಶ್ರೀಶೈಲ ಕುರಣಿ, ಸಿ.ಕೆ. ಚನ್ನಾಳ, ಭೀಮಶಿ ಮದರಖಂಡಿ, ಚಿನ್ನಪ್ಪ ಆಲಗೂರು, ವಿಠಲ ಭೋರ್ಜಿ, ಸಿದ್ದು ಸಾರವರಿ, ಪರಶುರಾಮ ಗುದಗಿ, ಮಾದೇವ ಪಾಟೀಲ, ಈಶ್ವರ ಗುಳೇದ, ಪರಸಪ್ಪ ಸವಳತೋಟ, ಗಿರೀಶ ಬೂದಿಹಾಳ, ಅಡಿವೆಪ್ಪ ಅವಟಿ, ಗುರುಪಾದಯ್ಯ ಮಠಪತಿ, ಸೋಮಲಿಂಗ ಗಾಳಿ, ರಾಚಪ್ಪ ಕಿತ್ತೂರು, ಸಚಿನ ಮಠಪತಿ, ಸಚಿನ ಪೂಜಾರಿ, ಶಂಕರ ಕೋರನ್ನವರ ಸೇರಿದಂತೆ ಜಿಲ್ಲಾ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ 50ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST