ಕಾಗವಾಡ: ಹಿಂದೂ-ಮುಸ್ಲಿA ಬಾಂಧವರು ಸೌಹಾರ್ದಕ್ಕೆ ಧಕ್ಕೆಯಾಗದಂತೆ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಮತ್ತು ಸಿಪಿಐ ಸಂತೋಶ ಹಳ್ಳೂರ ಹೇಳಿದ್ದಾರೆ.
ಅವರು, ಶುಕ್ರವಾರ ದಿ. 19 ರಂದು ಸಂಜೆ ಪಟ್ಟಣದ ಪೊಲೀಸ ಠಾಣೆಯ ಆವರಣದಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾರ್ವಜಕರಿಗೆ ಯಾವುದೇ ತೊಂದರೆಯಾಗದAತೆ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಮುನ್ನೆಚ್ಚರಿಕೆ ವಹಿಸಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಪಿಎಸ್‌ಐ ರಾಘವೇಂದ್ರ ಖೋತ, ಎಎಸ್‌ಐ. ಎಸ್.ವ್ಹಿ. ಹಂಜಿ, ಸುರೇಶ ನದೀವಾಲೆ, ಅಸ್ಲಾಂ ಜಮಾದಾರ, ಅಮೀನ ಶೇಖ, ಸಲೀಮ ಸೈಯದ, ಇರ್ಷಾದ ಮುಜಾವರ ಸೇರಿದಂತೆ ಹಿಂದೂ-ಮುಸ್ಲಿA ಬಾಂಧವರು ಹಾಗೂ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.