ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಲಕ್ಷ್ಮಿ ಈ ವಿಷಯ ತಿಳಿಸಿದರು.ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಅವರ ಪುತ್ರ ಮೃಣಾಲ್ ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ 1.78 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
'ಬೆಳಗಾವಿಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಈ ಬಾರಿ ಬಿಜೆಪಿ ಮತ್ತು ಎಂಇಎಸ್ ಒಟ್ಟಿಗೆ ಬಂದಂತೆ ಕಾಣುತ್ತಿದೆ' ಎಂದು ಲಕ್ಷ್ಮಿ ಹೇಳಿದರು.
'ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರದಲ್ಲಿ ಎಂಇಎಸ್ 45 ಸಾವಿರ ಮತಗಳನ್ನು ಪಡೆದಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ 4 ಲಕ್ಷ ಮತ ಪಡೆದಿದ್ದರೆ, ಎಂಇಎಸ್ 1.30 ಲಕ್ಷ ಮತ ಪಡೆದಿತ್ತು. ಈ ಬಾರಿ ಎಂಇಎಸ್ ಅಭ್ಯರ್ಥಿ ಕೇವಲ 9 ಸಾವಿರ ಮತ ಪಡೆದಿದ್ದಾರೆ' ಎಂದು ಹೇಳಿದರು. ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದನ್ನು ಲಕ್ಷ್ಮಿ ಸಮರ್ಥಿಸಿಕೊಂಡಿದ್ದಾರೆ.