ಮಲ್ಲಾಪೂರ ಅರ್ಬನ್ ಬ್ಯಾಂಕ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರಿಗೆ ಶುಭ ಕೋರಿದ ಮಲ್ಲಿಕಾರ್ಜುನ ಶ್ರೀಗಳು
ಘಟಪ್ರಭಾ. ಇಲ್ಲಿನ ಪ್ರತಿಷ್ಠಿತ ದಿ. ಮಲ್ಲಾಪೂರ ಅರ್ಬನ್ ಕೋ ಆಪ ಕ್ರೆಡಿಟ್ ಬ್ಯಾಂಕ ಲಿ. ಘಟಪ್ರಭಾ ಇದರ ಅಧ್ಯಕ್ಷರಾಗಿ ರಮೇಶ ಮಲ್ಲಪ್ಪ ತುಕ್ಕಾನಟ್ಟಿ ಹಾಗೂ ಉಪಾಧ್ಯಕ್ಷರಾಗಿ ಹೊನ್ನಜ್ಜ ಚ. ಕೋಳಿ ಇವರು ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ಇಲ್ಲಿನ ಪ್ರತಿಷ್ಠಿತ ಕೆಂಪಯ್ಯ ಸ್ವಾಮಿ ಗುಬ್ಬಲಗುಡ್ಡ ಮಠದ ಮ ನಿ ಪ್ರ ಸ್ವ ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಬೆಟ್ಟಿಯಾಗಿ ಆಶೀರ್ವಾದ ಪಡೆದರು.
ಎಲ್ಲರಿಗೂ ಶುಭ ಕೋರಿ ಶ್ರೀ ಮಲ್ಲಿಕಾರ್ಜುನ. ಮಹಾಸ್ವಾಮಿಗಳು ಮಾತನಾಡಿ ಸಹಕಾರ ಕ್ಷೇತ್ರದಿಂದ ಜನರ, ರೈತರ ಅಭಿವೃದ್ಧಿ ಸಾಧ್ಯ ಬ್ಯಾಂಕಿನ, ಗ್ರಾಹಕರ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಮಾತನಾಡಿ ಬ್ಯಾಂಕಿನ ಸರ್ವಂಗಿನ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಹಕಾರದೊಂದಿಗೆ ಶ್ರಮಿಸುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಸುಭಾಸಚಂದ್ರ ಶೆ. ಕಾಡದವರ, ರಾಜಶೇಖರ ಗೊ. ತುಕ್ಕಾನಟ್ಟಿ, ಮಹಾದೇವ ಕಾ. ಬಟನೂರೆ, ಶ್ರೀಶೈಲ ಮ. ಮಗದುಮ್ಮ, ಸತೀಶ ಬೀ ಹತ್ತರವಾಟ, ಮಹಾವೀರ ಕಾ ಹುಲ್ಲೋಳಿ, ಶ್ರೀಮತಿ ರೇವಕ್ಕ ಶಂ. ಕಮತ, ಶ್ರೀಮತಿ ಶೃತಿ ಮಂ. ಮಟಗಾರ, ಆನಂದ ದುಂ. ಕಬಾಡಗಿ, ಕಲ್ಲೋಳೆಪ್ಪಾ ಹ. ಜಮಖಂಡಿ, ರಾಮಪ್ಪ ಬ. ನಾಯಿಕ, ವ್ಯವಸ್ಥಾಪಕರಾದ ರಮೇಶ ಮುರಗೋಡ ಸೇರಿದಂತೆ ಅನೇಕರು ಇದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.