ಬಳ್ಳಾರಿ, ಜೂ.17: ಬಳ್ಳಾರಿ ಹಾಗೂ ವಿಜಯನಗರ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಂ ವಿರುದ್ಧ ಜಿಲ್ಲೆಯ ಬಿಜೆಪಿ ನಾಯಕರು ಇಂದು ಮಂಗಳವಾರ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ತುಕಾರಾಂ ಪ್ರತಿಕೃತಿ ಧಹಿಸಿ ಅಕ್ರೋಶ ವ್ಯಕ್ತಪಡಿಸದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಳಪೆ ಆಗಿದೆಂದು ಡಣಾಪುರ ಬಳಿ ವ್ಯಕ್ತಿಯೋರ್ವ ವೀಡಿಯೋ ಮಾಡಿ ಪ್ರಶ್ನೆ ಮಾಡಿದ್ದಕ್ಕಾಗಿ ಆತನಿಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದರು, ಈ ಅಶ್ಲೀಲ ಪದಗಳ ಬಳಕೆಯನ್ನು ಖಂಡಿಸಿ ಈ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಘಟಕ ಪ್ರತಿಭಟನೆಯನ್ನು ನಡೆಸಿ, ಸಮಾಜದ ಒಬ್ಬ ಜವಾಬ್ದಾರಿ ನಾಯಕನಾಗಿರುವ ತುಕಾರಾಂ ಈ ರೀತಿಯ ಪದ ಬಳಕೆ ಮಾಡುವುದು ಸರಿಯಲ್ಲ ಸಾರ್ವಜನಿಕರು ಪ್ರಶ್ನೆ ಮಾಡುವುದೇ ತಪ್ಪು ಎನ್ನುವಂತೆ ಅವರು ನಡೆದುಕೊಂಡಿದ್ದಾರೆ ಅವರ ನಿಂದನೆ ರೀತಿ ಖಂಡನೀಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿ ವೀಡಿಯೋ ಮಾಡಿದ್ದ ಯುವಕನ ಬಗ್ಗೆ ಕಳ್ಳಮುಂಡೆ ಮಕ್ಕಳು ಏನೇನೂ ಮಾಡ್ತಾರೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದಿದ್ದರು. ಅಲ್ಲದೇ ವಿಡಿಯೋ ಮಾಡಿದ ಯುವಕನನ್ನು ಕರೆಸಿ ಬೈದಿದ್ದರಂತೆ ತುಕಾರಾಂ ಅವರು.
ಅದಕ್ಕಾಗಿ ತುಕಾರಾಂ ವಿರುದ್ದ ಘೋಷಣೆಕೂಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮತ್ತು ಅವಾಚ್ಯ ಶಬ್ದ ಬಳಸಿದ ಅವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಅನಿಲಾಯ್ಡು, ಮಹಿಳಾ ಘಟಕದ ಹಂಪಿ ರಮಣ, ಪುಷ್ಪ ಚಾಂದಿನಿ ಅರುಣಕಾಮಿನಿ ರೂಪಶ್ರೀ
ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್.ದಿವಾಕರ್,ಜಿಲ್ಲಾ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ, ಮೊದಲಾದವರು ಪಾಲ್ಗೊಂಡಿದ್ದರು.