Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಯಂದಿರ ದಿನದ ವಿಶೇಷ ' ಅಮ್ಮ'



ಮೇ 12ರಂದು ತಾಯಂದಿರ ದಿನಾಚರಣೆ ಮದರ್ ಡೇ ದಿನದ ಅರ್ಥ ಮತ್ತು ತಾಯಂದಿರ ಮಹತ್ವವನ್ನು ತಿಳಿದುಕೊಳ್ಳಬೇಕು. ತಾಯಿ ದೇವರ ಸಮಾನ. ಅಮ್ಮ ಎಂದರೆ ಜನನಿ. ಜನ್ಮ ನೀಡುವಳು ಮಗುವಿಗೆ ತಾಯಿ. ಮಕ್ಕಳನ್ನು ಸಾಕಿ ಬೆಳಸುವಳು ತಾಯಿ.


ಮಮತೆಯ ಕಡಲು ತಾಯಿ ತನ್ನ ಮಕ್ಕಳ ಜೀವನವನ್ನು ರೂಪಿಸುವಳು ತಾಯಿ. ಮನೆಯಲ್ಲಿ ಏನೇ ಕೆಲಸವಿದ್ದರೂ ಅಮ್ಮ ನಮ್ಮನ್ನು  ಒಂಬತ್ತು ತಿಂಗಳು ಹೊತ್ತು ಹೆತ್ತಿರುತ್ತಾಳೆ.  ಅಮ್ಮನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ತಾಯಿಯ ಸ್ಥಾನ ಮತ್ತು ಅಮ್ಮನ ಪ್ರೀತಿ ಅತ್ಯಮೂಲ್ಯವಾದದ್ದು. ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವಳು ಅಮ್ಮ.


ಅಂತಹ ತಾಯಿಗೆ ನಾವು ಯಾವಗಲೂ ಗೌರವದಿಂದ ಕಾಣಬೇಕು. ಅದು ನಮ್ಮ ಕರ್ತವ್ಯ ಕೂಡ. ಅಮ್ಮ ನೀ ದೇವರು ಈ ಜಗವೆಲ್ಲಾ ನೀನೆ ಅಮ್ಮ. ಅಮ್ಮ ಎಂಬ ಎರಡಕ್ಷರ ಪವಿತ್ರವಾದ ಸಂಕೇತ. ಹೌದು ತಾಯಿ ದೇವರ ಸ್ವರೂಪ. ನಾವು ದೇವರನ್ನು ಎಷ್ಟು ಭಯ ಭಕ್ತಿಯಿಂದ ಗೌರವದಿಂದ ಪೂಜಿಸಿ ಆರಾದಿಸುತ್ತೇವೆಯೋ ಹಾಗೇಯೇ  ಅಮ್ಮನ  ಭಯ ಭಕ್ತಿಯಿಂದ ಗೌರವದಿಂದ ನೋಡಿಕೊಳ್ಳಬೇಕು. ಅಮ್ಮ ಇಲ್ಲದ ಪ್ರಪಂಚವಿಲ್ಲ.ಎಲ್ಲಾ ಮಕ್ಕಳಿಗೂ ತಾಯಿಯ

ಆಶೀರ್ವಾದ ಬೇಕು ಅವರಿಂದಲೇ ನಾವು.  ತಾಯಿ ಮೊದಲ ಗುರು ಮನೆಯ ಮೊದಲ ಪಾಠ ಶಾಲೆ ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ.


ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವೂ ಅಮ್ಮ.  ತಾಯಿ ತನ್ನ ಮಕ್ಕಳಿಗೆ ಇಡೀ ಜೀವನವನ್ನು ತ್ಯಾಗ ಮಾಡುತ್ತಾರೆ. ತನ್ನ ಇಡೀ ಜೀವನವನ್ನು ನಮಗೆ ಅರ್ಪಿಸುತ್ತಾಳೆ.ಅಮ್ಮ ಯಾವಗಲೂ ತನ್ನ ದುಃಖಗಳನ್ನು ಮರೆತು ಮಕ್ಕಳ ಜೀವನ ಸಂತೋಷದ ಬಗ್ಗೆ ಯೋಚಿಸುತ್ತಾರೆ. ಮಕ್ಕಳು ಸಂತೋಷವಾಗಿರುವುದು ನೋಡಿ ಅವರು ಸಂತೋಷವಾಗಿರುತ್ತಾರೆ.


ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ ಆದ್ದರಿಂದ ನಾವು ನಮ್ಮ ತಾಯಿಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು ನಮ್ಮ  ವ್ಯಕ್ತಿತ್ವವನ್ನು ಹೆಚ್ಚಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಜೀವನದ ಪ್ರತಿಯೊಂದು ಸಂತೋಷವನ್ನು ನಾವು ತಾಯಿ ತಂದೆಗೇ ನೀಡಬೇಕು. ಅಮ್ಮ ಐ ಲವ್ ಯೂ... ಅಮ್ಮ ನಾ ಕಂಡ ಮೊದಲ ಮುಖ ನಾ ಕೇಳಿದ ಮೊದಲ ಧ್ವನಿ ನಾ ಪೂಜಿಸು ಮೊದಲನೇ ದೇವರು ನೀನೇ ಅಮ್ಮ. ಅಮ್ಮ  ಐ ಲವ್ ಯೂ..!

             -

♦ವಿ.ಎಂ.ಎಸ್.ಗೋಪಿ

ಲೇಖಕರು, ಸಾಹಿತಿಗಳು

ಬೆಂಗಳೂರು.





Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ