Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧಾರವಾಡದಲ್ಲಿ ಬೆಳಗಿನ ಜಾವ ಪತ್ರಿಕಾ ವಿತರಕರ ದಿನಾಚರಣೆ

ಧಾರವಾಡ:  ಧಾರವಾಡ ನಗರದ ಆಜಾದ್ ಪಾರ್ಕ ಹತ್ತಿರದ ಬೆಳಗಿನ ಜಾವಪತ್ರಿಕಾ ವಿತರಕರ ದಿನವನ್ನು ಆಚರಿಸಲಾಯಿತು. ನಗರದ ಎಲ್ಲ ಪತ್ರಿಕಾ ವಿತಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪತ್ರಿಕಾ ದಿನಾಚರಣೆ ನಿಮಿತ್ಯ ಕೇಕ್ ಕತ್ತರಿಸಿ ಸಿಹಿಯೊಂದಿಗೆ ಎಲ್ಲ ಪತ್ರಿಕಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂತಸ ಹಂಚಿಕೊಂಡು, ಬಳಿಕ ಎಲ್ಲ ವಿತರಕರಿಗೂ ಶುಭ ಕೋರಲಾಯಿತು.


ಪ್ರಸಕ್ತ ವರ್ಷದ ಸತತ ಮಳೆಯನ್ನು ಲೆಕ್ಕಿಸದೇ ಪತ್ರಿಕಾ ವಿತರಣೆ ಕೆಲಸ ಮಾಡುತ್ತಿದ್ದಾರೆ, ಆದರೆ ಪತ್ರಿಕಾ ವಿತರಕರ ಹಾಗೂ ವಿತರಣೆ ಮಾಡುವವರಿಗೆ ಜೀವ ವಿಮೆ ಮಾಡಿಸಲು ನಾಗರಾಜ ಕುಲಕರ್ಣಿ ಜಿಲ್ಲಾಡಳಿತಕ್ಕೆ ವಿನಂತಿಸಿದರು.

ಪತ್ರಿಕಾ ವಿತರಕರಿಗೂ ವಿಮಾ ಸೌಲಭ್ಯ ಕಲ್ಪಿಸಬೇಕು. ಅಲ್ಲದೇ, ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಕೆಲಸದ ವೇಳೆಯಲ್ಲಿ ಮೃತಪಟ್ಟರೆ ಕುಟುಂಬಕ್ಕೆ ೧೦ ರೂ. ಲಕ್ಷ ಪರಿಹಾರ ನೀಡಬೇಕು. ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ವೈದ್ಯಕೀಯ ಚಿಕಿತ್ಸೆ ಮತ್ತು ಅಪಘಾತದ ಪರಿಹಾರ ಮತ್ತು ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಸರ್ಕಾರದಿಂದ ಪರಿಹಾರ ಕಂಡುಕೊಳ್ಳಲು ಸಹಾಯ ನೀಡಬೇಕು ಮತ್ತು ಪತ್ರಿಕೆ ಹಂಚುವ ವಿತರಕರಿಗೆ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಧನ ನೀಡಬೇಕು ಹಾಗೂ ಶೂನ್ಯ ಬಡ್ಡಿ ದರದಲ್ಲಿ ವಾಹನ ಖರೀದಿಸಲು ಸಹಾಯ ಧನ ನೀಡಬೇಕು ಎಂದು ಪತ್ರಿಕಾ ವಿತರಕರು ವಿನಂತಿಸಿದರು.


ಈ ಸಂದರ್ಭದಲ್ಲಿ ನಾಗರಾಜ ಕುಲಕರ್ಣಿ, ಶಿವರಾಮ್ ಶಿರಗುಪ್ಪಿ, ಕೃಷ್ಣ ಕುಲಕರ್ಣಿ, ಶಶಿ ಕಬ್ಬೂರು, ಶಿವಪ್ರಸಾದ ಹಲಗಿ, ಜಿ.ಎ. ಬಾದಾಮಿ, ಪತ್ರೆಪ್ಪ ಇಂಗದಾಳ, ಸುರೇಶ ಸುಣಗಾರ, ಶ್ರೀಧರ ಪಾಸ್ತೆ, ಮಂಜುನಾಥ ಹಿರೇಮಠ, ಶಶಿಕಾಂತ ನೀಲಾಕರಿ, ಮನೋಹರ ಮಠಪತಿ, ವೆಂಕಟೇಶ ಮೋದಲಿಯಾರ್, ಜಗದೀಶ ಅವಗಾನ್, ಶೇಖರ ಬೇಲೂರ, ರಾಜು ಮಂಟೆದ, ಗಿರೀಶ್ ಮ್ಯಾಗೇರಿ, ರವಿ ಮಲ್ಲಿಗವಾಡ, ಅಯೂಬ್ ಮಕಾಂದಾರ, ಸಂತೋಷ ರೋಕಡೆ, ಶಿವು ಕಠಾರೆ, ಮಂಜು ಕಠಾರೆ, ಕಾರ್ತಿಕ, ನಿರಂಜನ್ ಇನ್ನಿತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ