LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Sports News

"ಸೆ. 10 ರಂದು ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ "

ಮೂಡಲಗಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ 2026-27ನೇ ಸಾಲಿನ 'ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟದ,ಸ್ಪರ್ಧೆಗಳನ್ನು ಸೆ.10ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಜರುಗಿಸಲು ನಿರ್ಧರಿಸಲಾಗಿದ್ದು,  ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ.10ರಂದು ಬೆಳಿಗ್ಗೆ 9.00 ಗಂಟೆಗೆ ಹಾಜರಿದ್ದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ ಎಂದು ಯುವ ಸಂಘಟಕ ಸಿದ್ದಣ್ಣ ದುರದುಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸ್ಪರ್ಧೆಗಳ ವಿವರ : 

ಅಥ್ಲೆಟಿಕ್ಸ್‌ (ಪುಷರಿಗಾಗಿ) : 100ಮೀ, 200ಮೀ, 400ಮೀ, 800ಮೀ, 1500ಮೀ, 5000ಮೀ, 10,000ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ , ಡಿಸ್ಕಸ್ ಥ್ರೋ, 110ಮೀ ಹರ್ಡಲ್ಸ್, 4x100ರಿಲೇ, 4x400 ರಿಲೇ . 

ಅಥ್ಲೆಟಿಕ್ಸ್‌ (ಮಹಿಳೆಯರಿಗಾಗಿ) : 100ಮೀ, 200ಮೀ, 400ಮೀ, 800ಮೀ, 1500ಮೀ, 3000 ಮೀ ಓಟ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 4x100ರಿಲೇ, 4x400 ರಿಲೇ . 

ಗುಂಪು ಆಟಗಳು : ವಾಲಿಬಾಲ್, ಪುಟ ಬಾಲ್, ಖೋಖೋ,  ಕಬಡ್ಡಿ, ಥ್ರೋ ಬಾಲ್ , ಯೋಗ (ಪುರುಷ ಮತ್ತು ಮಹಿಳೆಯರಿಗಾಗಿ). 

ನಿಯಮಗಳು : ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮೂಡಲಗಿ ತಾಲೂಕಿನ ರಹವಾಸಿಯಾಗಿರಬೇಕು. ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ. ಈ ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು, ಯುವಕ/ತಿ ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಭಾಗವಹಿಸಬಹುದು. ಕ್ರೀಡಾಪಟುಗಳು ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ತಾಲೂಕಿನಲ್ಲಿ ಭಾಗವಹಿಸತಕ್ಕದ್ದಲ್ಲ. ಒಂದು ವೇಳೆ ಭಾಗವಹಿಸಿದಲ್ಲಿ ಅಂತವರ ಆಯ್ಕೆಯನ್ನು ರದ್ದುಗೊಳಿಸಲಾಗುವುದು. ಗುಂಪು ಸ್ಪರ್ಧೆಗಳಲ್ಲಿ ಸಂಪೂರ್ಣ ತಂಡವನ್ನು ರದ್ದುಗೊಳಿಸಲಾಗುವುದು. ನಿರ್ಣಾಯಕರ ನಿರ್ಣಯವೇ ಅಂತಿಮವಾಗಿದ್ದು, ಕ್ರೀಡಾಕೂಟದಲ್ಲಿ ಅಸಭ್ಯವಾಗಿ ವರ್ತಿಸಿದ ಕ್ರೀಡಾಪಟು ಆಥವಾ ತಂಡಗಳನ್ನು ಅನರ್ಹಗೊಳಿಸಲಾಗುವುದು. ಭಾಗವಹಿಸುವ ಕ್ರೀಡಾಪಟುಗಳಿಗೆ ಇಲಾಖೆಯ ವತಿಯಿಂದ ಯಾವುದೇ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಯನ್ನು ನೀಡಲಾಗುವುದಿಲ್ಲ. 

ಹೆಚ್ಚಿನ ಮಾಹಿತಿಗಾಗಿ ಜೂಡೋ ತರಬೇತಿದಾರ ರೋಹಿಣಿ ಪಾಟೀಲ ಮೋ, 8618169003ಗೆ ಅಥವಾ 8618851121 ಸಂಪರ್ಕಿಸಬಹುದಾಗಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತರ ಕರ್ನಾಟಕದಿಂದಲೇ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ : ಭೀಮಪ್ಪ ಗಡಾದ ಧರ್ಮಸ್ಥಳ ಗ್ರಾಮೀಣ ಸಂಘದಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮಇಂಡಿ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಆಗ್ರಹ: ಝಳಕಿ ಹೆದ್ದಾರಿಯಲ್ಲಿ ರೈತರ ಬೃಹತ್ ಪ್ರತಿಭಟನೆಸೆ.೬ರಂದು ಶ್ರೀ ಉಳವೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವಶ್ರೀ ಎಚ್.ಎಸ್. ಪಾಟೀಲ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಐನಾಪುರ: ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರ ಸಂಘದಿಂದ ಬೃಹತ್ ರಕ್ತದಾನ ಶಿಬಿರಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಭೆಹೂವು–ಬೊಕ್ಕೆ ಬದಲು ರಕ್ತದಾನ: ಕಿತ್ತೂರಿನಲ್ಲಿ ವಿಭಿನ್ನ ಶಿಕ್ಷಕರ ದಿನಾಚರಣೆರಾಮದುರ್ಗ: ಅಕ್ರಮ ಗೋಹತ್ಯೆ ತಡೆಗೆ ಆಗ್ರಹಿಸಿ ವಿಎಚ್‌ಪಿ, ಭಜರಂಗದಳದಿಂದ ಮನವಿ89 ಗ್ರಾಮಗಳ ದಾಖಲೆಗಳ ಇಂಡೆಕ್ಸ್, ಕ್ಯಾಟಲಾಗ್ ಸಿದ್ಧತೆ; 80 ಸರ್ವೇಯರ್‌ಗಳಿಂದ ಮೂರು ದಿನಗಳ ಕಾರ್ಯಾಚರಣೆ, ರೈತರಿಗೆ 24 ಗಂಟೆಯೊಳಗೆ ಭೂ ದಾಖಲೆ ಪೂರೈಸುವ ಗುರಿ