Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಗಾರು ಹಂಗಾಮು ಪ್ರಾರಂಭ; ರೈತರು ಮಾಗಿ ಉಳುಮೆ ಅನುಸರಿಸಿ: ಸೋಮಸುಂದರ್


ಬಳ್ಳಾರಿ,ಮೇ 12 ಪ್ರಸ್ತಕ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವುದರಿAದ ರೈತರು ತಮ್ಮ ಜಮೀನಿನಲ್ಲಿ ಮಾಗಿ ಉಳುಮೆ ಮಾಡಿಕೊಂಡು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ತಮ್ಮ ಜಮೀನುಗಳಿಗೆ ಸೇರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
ಮಾಗಿ ಉಳುಮೆ ಎಂದರೆ ಎಂ.ಬಿ.ನೇಗಿಲು, ಡಿಸ್ಕ್ ಪ್ಲೋ ಅಂತಹ ಯಂತ್ರೋಪಕರಣಗಳನ್ನು ಬಳಸಿ, ಇಳಿಜಾರಿನ ಅಡ್ಡಕ್ಕೆ ಹೊಲವನ್ನು ಆಳವಾದ ಉಳುಮೆ, ಮಣ್ಣಿನ ಹೊರಪದರವನ್ನು ತೆರೆದು ಸೂರ್ಯನ ಕಿರಣಗಳಿಂದ ಸೋಂಕುರಹಿತಗೊಳಿಸಲು ಕೆಳಗಿನ ಮಣ್ಣನ್ನು ತಿರುಗಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.
*ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು:*
ಮಾಗಿ ಉಳುಮೆಯಿಂದ ಮಣ್ಣಿನ ಗಟ್ಟಿಯಾದ ಹೊರಪದರವನ್ನು ಒಡೆದು ಆಳವಾದ ಉಳುಮೆ ಮಾಡುವುದರಿಂದ ನೀರಿನ ಇಂಗುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಣ್ಣು ಹೆಚ್ಚಿನ ನೀರನ್ನು ಹಿಡಿದುಕೊಂಡು ಸುಲಭವಾಗಿ ಗಿಡಗಳಿಗೆ ದೊರೆಯುವಂತೆ ಮಾಡುತ್ತದೆ.
ಮಾಗಿ ಉಳುಮೆಯಲ್ಲಿ ಪರ್ಯಾಯ ಬಿಸಿಲಿನಿಂದ ಒಣಗಿಸುವಿಕೆ ಹಾಗೂ ಗಾಳಿಯಿಂದ ತಂಪಾಗಿಸುವಿಕೆಯಿAದಾಗಿ ಮಣ್ಣಿನ ರಚನೆಯು ಸುಧಾರಿಸುತ್ತದೆ. ಮಣ್ಣಿನ ಗಾಳಿಯನ್ನು ಸುಧಾರಿಸುವುದರಿಂದ ಸೂಕ್ಷö್ಮಜೀವಿಗಳ ಉತ್ಪತ್ತಿಯು ಹೆಚ್ಚಾಗಿ ಸಾವಯವ ಗೊಬ್ಬರಗಳು ಕರಗಿ ಪೋಷಕಾಂಶಗಳ ಲಭ್ಯತೆಯು ಹೆಚ್ಚುತ್ತದೆ ಎಂದಿದ್ದಾರೆ.
ಮಳೆಯನ್ನು ಹೀರಿಕೊಳ್ಳುವ ಮಣ್ಣಿನ ಸಾಮರ್ಥ್ಯವು ಬೆಳೆದಂತೆ ವಾತಾವರಣದಲ್ಲಿ ಲಭ್ಯವಿರುವ ಸಾರಜನಕ ನೀರಿನಲ್ಲಿ ಕರಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಣ್ಣಿನಡಿಯಲ್ಲಿ ಅಡಗಿರುವ ಅನೇಕ ಕೀಟಗಳ ಮೊಟ್ಟೆ, ಮರಿಹುಳು ಮತ್ತು ಕೋಶಗಳು ಸೂರ್ಯನ ಅತಿಯಾದ ಬಿಸಿಲಿನ ಶಾಖದಿಂದ ಸತ್ತುಹೊಗಿ ಮುಂದಿನ ಬೆಳೆಗಳ ಮೇಲೆ ಕೀಟಗಳ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಸಿಲಿನ ಶಾಖಕ್ಕೆ ಅನೇಕ ಬ್ಯಾಕ್ಟೀರಿಯಾ ಬೀಜಕಗಳು, ಶಿಲೀಂದ್ರಗಳು ಮತ್ತು ಸೂಕ್ಷö್ಮಜೀವಿಗಳು ಸಾಯುತ್ತವೆ, ಇದರಿಂದ ಮುಂದಿನ ಬೆಳೆಗಳಿಗೆ ಉಂಟಾಗುವ ರೋಗಗಳನ್ನು ತಪ್ಪಿಸಿ ಕೀಟ ಮತ್ತು ರೋಗನಾಶಕಗಳಿಗೆ ತಗಲುವ ವೆಚ್ಚವನ್ನು ಉಳಿಸುತ್ತದೆ. ಮಾಗಿ ಉಳಿಮೆಯಿಂದ ನೆಮಟೋಡ್ ಬಾಧೆಯನ್ನು ತಪ್ಪಿಸಬಹುದು. ಮಾಗಿ ಉಳುಮೆಯು ಕಳೆಗಳು ಮೊಳಕೆಯೊಡೆಯುವುದನ್ನು ತಡೆಯುತ್ತದೆ ಇದರಿಂದ ಕಳೆಗಳ ನಿಯಂತ್ರಣವನ್ನು ಮಾಡಬಹುದು.
ಮಾಗಿ ಉಳುಮೆಯಿಂದ ಹೆಚ್ಚಿನ ಮಳೆ ನೀರು ಸಂಗ್ರಹಣೆ, ಪೋಷಕಾಂಶಗಳ ಸಮತೋಲನ ಮತ್ತು ಮಣ್ಣಿನ  ಗುಣಧರ್ಮಗಳ ಸುಧಾರಣೆಯಿಂದ ಹೆಚ್ಚಿನ ಬೆಳೆ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಹಾಗಾಗಿ ರೈತ ಬಾಂಧವರು ಮಾಗಿ ಉಳುಮೆಯ ಈ ಎಲ್ಲಾ ಪ್ರಯೋಜನೆಗಳಿಂದ ಕಡಿಮೆ ಖರ್ಚು ಮಾಡಿ ಹೆಚ್ಚಿನ ಇಳುವರಿ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ