Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಿಲ್ಲಾ ದಿ.06 ರಂದು " ಮೊಹರಂ ಹಬ್ಬ "

ಕಿಲ್ಲಾ ತೊರಗಲ್ಲ- 05, ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದಲ್ಲಿ ರವಿವಾರ ದಿ.06 ರಂದು ಹಿಂದೂ - ಮುಸ್ಲಿಮರ  " ಸೌಹಾರ್ದತೆ ಹಾಗೂ ಭಾವೈಕ್ಯತೆಯ " ಪ್ರತೀಕವಾಗಿರುವ ' ಮೊಹರಂ ಹಬ್ಬದ ' ಆಚರಣೆಯು ಸಡಗರ , ಸಂಭ್ರಮಗಳೊಂದಿಗೆ ನೆರವೇರಲಿದೆ.


   ಸ್ವಾತಂತ್ರ್ಯ ಪೂರ್ವದಲ್ಲಿ ಕಿಲ್ಲಾ ತೊರಗಲ್ಲ ಸಂಸ್ಥಾನ ಕಾಲದಲ್ಲಿ ಹಿಂದೂ , ಮುಸ್ಲೀಮ್, ಜೈನ, ಮರಾಠಾ  ಹೀಗೆ ಅನೇಕಾನೇಕ ರಾಜ ಮಹಾರಾಜರು, ಆಳರಸರು ಸಂಸ್ಥಾನವನ್ನು ಆಳಿ , ಅಳಿದು ಹೋಗಿದ್ದರೂ ಕೂಡ ಜಾತಿಯ ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುವ ಈ ಕಿಲ್ಲಾ ತೊರಗಲ್ಲ ಗ್ರಾಮವು ಶತ ಶತಮಾನಗಳ ಹಿಂದಿನ ಸಾಮರಸ್ಯ , ಸೌಹಾರ್ದತೆ ಮತ್ತು ಭಾವೈಕ್ಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ , ಕಾರಣ ಈ  ಪವಿತ್ರ ಮಣ್ಣಿನಲ್ಲೇ ಅಂಥಹ ದಿವ್ಯವಾದ ಅಧ್ಯಾತ್ಮಿಕ ಮಹಾನ್ ಶಕ್ತಿಯು ಮಿಳೀತಗೊಂಡಂತಿದೆ.  ಮಹಾ .. ಮಹಾ ಶಿವ ಶರಣರು , ಆಧ್ಯಾತ್ಮಿಕ ಸಾಧಕರು ,  ತಪಸ್ವಿಗಳು,  ಸೂಫೀ ಸಂತರು, ಫಕೀರರು  ನಡೆದಾಡಿರುವ ಪುಣ್ಯಭೂಮಿ ಮಾತ್ರವಲ್ಲ,  ಅವರೆಲ್ಲರ ತಪಸ್ಸು, ಆಧ್ಯಾತ್ಮಿಕ ಸಾಧನೆಗಳೆಲ್ಲ ಈ ಮಣ್ಣಿನೊಂದಿಗೆ ಬೆರೆತುಕೊಂಡಿದೆ ಎನ್ನಬಹುದು.  ಕಾಲಗರ್ಭದಲ್ಲಿ ಹುದುಗಿ ಹೋದ ನೂರಾರು ಜಾತಿ , ಮತ, ಪಂಥಗಳ ಸಂಘರ್ಷಗಳಿಗೆ ಜಗತ್ತೇ " ರಂಗ " ಒದಗಿಸಿಕೊಟ್ಟಿದ್ದರೂ ಕೂಡ ನಮ್ಮ ಈ ತೊರಗಲ್ಲ ಗ್ರಾಮವು ಮಾತ್ರ ತನ್ನ ಮೌನ ಮುರಿದಿಲ್ಲ ಎಂಬುದು ಸಮಾಧಾನಕರ ಸಂಗತಿ.



" ಮೋಹರಂ ಹಬ್ಬವು " ಹಿಂದೂ - ಮುಸ್ಲಿಮರ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿರುವ ಹಬ್ಬಗಳಲ್ಲಿ ಪ್ರಮುಖವಾದದ್ದು  ಎಂದು ಬೇರೆ ಹೇಳಬೇಕಿಲ್ಲ.  ಯಾವುದೇ ತೆರನಾದ ತಾರತಮ್ಯ ಇಲ್ಲದೇ ಈ ಹಬ್ಬದಲ್ಲಿ ಎಲ್ಲರೂ ಒಂದಾಗಿ ಪಾಲ್ಗೊಂಡು ಆಚರಿಸುವ ಗ್ರಾಮೀಣ ಪ್ರದೇಶದ  " ಹಬ್ಬವು " ಇದಾಗಿದ್ದು,  ಇದಕ್ಕೆ ' ಅಲ್ಹಾಬ್ ಹಬ್ಬ ' ಅಂತಲೂ ಕರೆಯುವ ವಾಡಿಕೆಯು ಜನ ಜನೀತವಾಗಿದೆ.
ಹತ್ತು ದಿನಗಳಿಂದ ನಡೆಯುತ್ತಿರುವ ಈ " ಮೋಹರಂ ಹಬ್ಬದ " ಆಚರಣೆಯ ಪ್ರಯುಕ್ತ ಸಂಸ್ಥಾನದ ಕಾಲದಿಂದಲೂ ಸಂಸ್ಥಾನದ ಮಹರಾಜರ ಅರಮನೆಯಿಂದ ಊರಲ್ಲಿನ ಪ್ರಮುಖ ಮಸೀದಿಗಳಿಗೆ " ಲಾಡಿ,  ಸಕ್ಕರೆ, ಊದು " ನಿತ್ಯ  ಕಳಿಸುವ ಪರಂಪರೆಯು ಅನಾದಿಕಾಲದಿಂದಲೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಗುರುವಾರ ದಿ.03 ರಂದು " ಲಾಲಸಾಬ ದೇವರು " ಏಳುವುದರೊಂದಿಗೆ ಆರಂಭವಾದ ಮೋಹರಂ ಹಬ್ಬ,  ಶನಿವಾರ ದಿ.05 ರಂದು ಊರೊಳಗಿನ " ಕಾಸೀಮಸಾಬ ದೇವರು " ಕತ್ತಲ ರಾತ್ರಿಯ ಬೆಳಗಿನ ಜಾವ ಏಳುವುದು. ಈ ಸಂದರ್ಭದಲ್ಲಿ ತೊರಗಲ್ಲ-ವ- ಖಾನಪೇಠ ಗ್ರಾಮದ ಜನತೆ ಮಾತ್ರವಲ್ಲದೇ ಪರ ಊರಿನಿಂದಲೂ ಅಸಂಖ್ಯಾತ ಜನರು ಬಂದು ಸೇರುತ್ತಾರೆ.



ಮಾರನೆಯದಿನ ರವಿವಾರ ದಿ. 06 ರಂದು ಬೆಳಗಿನ ಜಾವದಿಂದ ಸಾಯಂಕಾಲ ವರೆಗೆ ಎಲ್ಲಾ ಮಸೀದಿಗಳಲ್ಲಿನ " ದೇವರ ಪಂಜಾ,  ಹಾಗೂ ಡೋಲಿಗಳು " ಏಳುತ್ತವೆ.  ಅದೇ ದಿನ  ಸಾಯಂಕಾಲ 5.30 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ದೇವರು ಹೊಳೆಗೆ ಹೋಗುವ ದೃಶ್ಯವು ದೂರದೂರಿನಿಂದ ಆಗಮಿಸಿದ ಭಕ್ತಾಧಿಗಳ ಕಣ್ಮನ ಸೆಳೆಯುತ್ತದೆ,  ಈ  ಕಾರಣದಿಂದಲೇ ವರ್ಷದಿಂದ ವರ್ಷಕ್ಕೆ " ತೊರಗಲ್ಲ ಮೋಹರಂ ಹಬ್ಬವನ್ನು " ನೋಡಲು ಬರುವ ಪರ  ಊರಿನ ಭಕ್ತಾಧಿಗಳ ಸಂಖ್ಯೆಯು ಹೆಚ್ಚುತ್ತಲೇ ಸಾಗಿದೆ.



ಕಿಲ್ಲಾ ತೊರಗಲ್ಲ ಗ್ರಾಮವು,  ರಾಮದುರ್ಗ ದಿಂದ ಬೆಳಗಾವಿಯ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು , ರಾಮದುರ್ಗ ಹಾಗೂ ಕಟಕೋಳದಿಂದ ಕೇವಲ 11 ಕಿ.ಮೀ.  ಅಂತರದಲ್ಲಿದೆ, ಇಲ್ಲಿಗೆ ಬಂದು  ಹೋಗಲು ಸಾಕಷ್ಟು ಅಟೋ,  ಬಸ್ಸುಗಳ ಸಾರಿಗೆ ಸಂಪರ್ಕದ ವ್ಯವಸ್ಥೆಯು ಇರುವುದು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ