LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
International News

ಭಾರತದಲ್ಲಿ ಬಂಡವಾಳ ದ್ವಿಗುಣ: ಜಪಾನ್‌ನಲ್ಲಿ ಮೋದಿ ಮಾತು

ಟೋಕಿಯೋ: ಎರಡು ದಿನಗಳ ಪ್ರವಾಸಕ್ಕಾಗಿ ಜಪಾನ್​ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಒತ್ತಿ ಹೇಳಿದ್ದಾರೆ.

ಭಾರತದಲ್ಲಿ ಬಂಡವಾಳ ಬೆಳವಣಿಗೆ ಕಾಣುವುದು ಮಾತ್ರವಲ್ಲ, ದ್ವಿಗುಣಗೊಂಡಿದೆ. ರಾಜಕೀಯ ಸ್ಥಿರತೆ ಮತ್ತು ಪಾರದರ್ಶಕತೆ ಇದಕ್ಕೆ ಕಾರಣ. ದೇಶ ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದರು.

ಭಾರತದಲ್ಲಿ ಕಳೆದ 11 ವರ್ಷದಲ್ಲಿ ಬೆಳವಣಿಗೆ ಮತ್ತು ಸಾಕಷ್ಟು ಸುಧಾರಣೆಗಳು ಆಗುತ್ತಿರುವುದರ ಬಗ್ಗೆ ನಿಮಗೆ ಅರಿವಿದೆ. ದೇಶ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದ್ದೇವೆ. ಜಾಗತಿಕ ಜಿಡಿಪಿಗೆ ನಮ್ಮ ಕೊಡುಗೆ ಶೇ.18ರಷ್ಟಿದೆ. ಸುಧಾರಣೆ, ಪರಿವರ್ತನೆ ಮತ್ತು ಕಾರ್ಯಕ್ಷಮತೆಯ ನಮ್ಮ ವಿಧಾನ ಈ ಎಲ್ಲಾ ಪ್ರಗತಿಗೆ ಚಾಲನೆ ನೀಡುತ್ತಿದೆ ಎಂದು ಭಾರತ-ಜಪಾನ್​ ಜಂಟಿ ಆರ್ಥಿಕ ವೇದಿಕೆಯಲ್ಲಿ ಮೋದಿ ಮಾತನಾಡಿದರು.

ಕಳೆದೊಂದು ದಶಕದಿಂದ ಭಾರತ ಮುಂದಿನ ಪೀಳಿಗೆಯ ಚಲನಶೀಲನತೆ ಮತ್ತು ಲಾಜಿಸ್ಟಿಕ್​ ಮೂಲಸೌಕರ್ಯದಲ್ಲಿ ಅದ್ಬುತ ಪ್ರಗತಿ ಕಾಣುತ್ತಿದೆ. ನಮ್ಮ ಬಂದರು ಸಾಮರ್ಥ್ಯ ದುಪ್ಪಟ್ಟಾಗಿದೆ. ಜಪಾನ್​ ಸಹಕಾರದಿಂದಾಗಿ ಮುಂಬೈ-ಅಹಮದಾಬಾದ್​ ಹೈ ಸ್ಪೀಡ್​ ರೈಲು ಯೋಜನೆ ಕಾರ್ಯ ನಿರ್ವಹಣೆ ಮಾಡಲಿದೆ. ನಮ್ಮ ಪ್ರಯಾಣ ಇಲ್ಲಿಗೆ ನಿಲ್ಲುವುದಿಲ್ಲ ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ಮುದ್ದೇಬಿಹಾಳ ಬರಪೀಡಿತ ತಾಲೂಕು ಘೋಷಣೆ: ರೈತರಿಗೆ ಸಿಹಿ ಸುದ್ದಿಇಂದು ಅನಂತಪೂರ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಸಭೆ ವ್ಯಾಪಾರಸ್ಥರಿಗೆ ಆಧುನಿಕ ಮಳಿಗೆ, ಗ್ರಾಹಕರಿಗೆ ವಾಹನ ನಿಲುಗಡೆ ವ್ಯವಸ್ಥೆ; ₹15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ: ಶಾಸಕ ನಾಡಗೌಡ