Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಮೇ.12: ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಮಂಗಳವಾರ ವಿವಿಧ ವಾರ್ಡುಗಳಲ್ಲಿ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 21ರ ಹರಿಪ್ರಿಯ ನಗರದಲ್ಲಿ 5 ಕೋಟಿ ರೂ.ಗಳ ಅನುದಾನದ ವೆಚ್ಚದಲ್ಲಿ ಬೀದಿ ದೀಪ, ಚರಂಡಿ, ಒಳ ಚರಂಡಿ, ಪೇವರ್ಸ್ ಅಳವಡಿಕೆ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾಜಿ ಮೇಯರ್ ರಾಜೇಶ್ವರಿ, ಚಾನಾಳ್ ಶೇಖರ್, ಶಿವಶಂಕರಗೌಡ, ಯಾಳ್ಪಿ ಪಂಪನಗೌಡ, ತಿಮ್ಮನಗೌಡ, ನಾಗೇಶ್ವರ ರಾವ್, ರವಿ, ಶಶಿಧರ ಮೇಟಿ, ಗುತ್ತಿಗನೂರು ವಿರೂಪಾಕ್ಷಗೌಡ, ಅಂಗಡಿ ಪಂಪಾಪತಿ, ಮೇಟಿ ದಿವಾಕರಗೌಡ, ಶ್ಯಾಮ್, ಯುಧಿಷ್ಠಿರ, ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ತದನಂತರ ಇದೇ ವಾರ್ಡಿನ ಸಿದ್ಧಾರ್ಥ ನಗರದಲ್ಲಿ 50 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾಜಿ ಮೇಯರ್ ರಾಜೇಶ್ವರಿ, ಸಿರಿಗೆರೆ ಪನ್ನರಾಜ್, ಹಿರೇಮಠ್, ಪ್ರಭಾಕರ್ ರೆಡ್ಡಿ, ಚಾನಾಳ್ ಶೇಖರ್, ವಿಜಯಲಕ್ಷ್ಮೀ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ಬಳಿಕ ವಾರ್ಡ್ ಸಂಖ್ಯೆ 24ರ ಬ್ರಹ್ಮಯ್ಯ ಕಾಲೋನಿಯಲ್ಲಿ 50 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ನಾರಾ ವಿನಯ್ ರೆಡ್ಡಿ, ವೀರೇಂದ್ರ, ಪೋಲಕ್ (ಹನಮಂತ) ರೆಡ್ಡಿ,  ಚಾನಾಳ್ ಶೇಖರ್, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ತದನಂತರ ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 34ರ ವಿದ್ಯಾನಗರ 7ನೇ ಅಡ್ಡ ರಸ್ತೆಯ ಬಳಿ 81.93 ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರು ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಿಷ್ಣು ಬೋಯಪಾಟಿ, ಮಲ್ಲಿ, ಯೋಗಾನಂದ ರೆಡ್ಡಿ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ಯೋಗೇಂದ್ರ ಕಟ್ಟ, ಇಟ್ಟಾವರಂ ಮಲ್ಲಿಕಾರ್ಜುನ, ಲಾಲ್ ಮೋಹನ್, ಭತ್ರಿ ಮಂಜು, ರಘು ಕಟ್ಟ, ಹರ್ಷ, ಸತೀಶ್ ಮತ್ತಿತರರು ಹಾಜರಿದ್ದರು.
ಬಳಿಕ ವಾರ್ಡ್ ಸಂಖ್ಯೆ 04ರ ಗುಗ್ಗರಹಟ್ಟಿಯ ಮುಖ್ಯ ರಸ್ತೆ 1.50 ಕೋಟಿ ರೂ.ಗಳ ವೆಚ್ಚದಲ್ಲಿ ಪಾಂಡುರಂಗ ಗುಡಿಯಿಂದ ಹೆಚ್ಎಲ್ ಕಾಲುವೆ ಹೊನ್ನಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಡಿ.ಸೂರಿ, ಸುಬ್ಬರಾಯುಡು, ಗುಗ್ಗರಹಟ್ಟಿ ಅನ್ವರ್, ಎಂಎನ್ಟಿ ಮಾಬು, ಸಿ.ಡಿ. ಹೊನ್ನೂರಸ್ವಾಮಿ,  ಪರಶುರಾಮುಡು, ಹೊನ್ನಪ್ಪ, ಮತ್ತಿತರರು ಹಾಜರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ