LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ರೈತರ ಹೋರಾಟಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲ

ಬರಗಾಲ ಘೋಷಣೆಗೆ ಆಗ್ರಹಿಸಿ ೧೨ನೇ ದಿನವೂ ಧರಣಿ




ತಾಳಿಕೋಟೆ,   ಪಟ್ಟಣದಲ್ಲಿ ಪ್ರವಾಸಿ ಮಂದಿರದ ಪಕ್ಕದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬರಗಾಲ ಘೋಷಣೆಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ೧೨ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸ್ಥಳಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭೇಟಿ ನೀಡಿ ಹೋರಾಟ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.
         ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಇದೇ ತಿಂಗಳ ೨೧ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಬರಗಾಲ ಘೋಷಣೆ ಕುರಿತು ಸರ್ಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು. ಸರ್ಕಾರ ಬರಗಾಲ ಘೋಷಣೆಯಿಂದ ಹಿಂದೆ ಸರಿದರೆ ಸದನದೊಳಗೆ ಮಾತ್ರವಲ್ಲದೆ, ರೈತರ ಪರವಾಗಿ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತ ಮುಖಂಡರಿಗೆ ಭರವಸೆ ನೀಡಿದರು.
          ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸರ್ಕಾರ ರೈತರ ಹೋರಾಟಕ್ಕೆ ಮಣಿಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
          ಧರಣಿಯಲ್ಲಿ ಸಂಘಟನೆಯ ಶ್ರೀನಿವಾಸ ಗೋತಗುಣಿಕೆ, ಮಡಿವಾಳಪ್ಪ, ಕಲಬುರಗಿ ಶರಣಗೌಡ ಕೊಡಗಾನೂರ, ಶಿವಾನಂದ ಚಿಂಚೋಳಿ, ರಾಮನಗೌಡ ಯಾಳವಾರ, ಶಾಂತಗೌಡ ಬಿರಾದಾರ, ಜಗನ್ನಾಥ ಮಸರಕಲ್, ಸಂಗಣ್ಣ ಉಪ್ಪನದೊಡ್ಡಿ, ವಿಶ್ವನಾಥ ಹಾದಿಮನಿ, ಶಿವಪ್ಪ ನಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.
       ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ತಾಳಿಕೋಟೆ ಸೇರಿದಂತೆ ಬರಪೀಡಿತ ತಾಲೂಕುಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಸ್ಪರ ಸಹಾಯ ಸಹಕಾರದಿಂದ ದೇವಸ್ಥಾನಗಳ ಅಭಿವೃದ್ಧಿ :ಬಾಬಾಸಾಹೇಬ ಪಾಟೀಲ ಶ್ರೀ ವೇಮನ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಗೆ 3.06 ಕೋಟಿ ರೂ. ಲಾಭ : ಸಂತೋಷ ಸೋನವಾಲ್ಕರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಮತ್ತು ಅಭಿಯಂತರರ ಪಾತ್ರ ಮಹತ್ವಪೂರ್ಣವಾದುದು :  ಡಾ.ಅಲ್ಲಮಪ್ರಭು ಮಹಾಸ್ವಾಮಿಗಳುಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು ಕಾಲಮಿತಿಯೊಳಗೆ ಜನರಿಗೆ ತಲುಪಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶಿಕ್ಷಣ ಇಲಾಖೆಯಿಂದ ಅಭಿನಂದನಾ ಪತ್ರಅಭಿಯಂತರರು ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿ : ಶಾಸಕರಾದ ವಿನಯ ಕುಲಕರ್ಣಿಪ್ರಜಾಪ್ರಭುತ್ವ ಉಳಿಸಲು ಯುವಜನತೆ ನಾಯಕತ್ವ ಗುಣ ಬೆಳೆಸಿಕೊಳ್ಳಿ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಕರೆ            ’ವಕ್ರತುಂಡ’ ಚಿತ್ರದ ಧಮಾಕಾ : ’ಜೈ ಗಣೇಶ’ ಟೈಟಲ್ ಟ್ರ್ಯಾಕ್ ಸಾಂಗ್ ಭರ್ಜರಿ ಸದ್ದು  ಮಹಿಳೆ ಕಾಣೆ: ಪತ್ತೆಗೆ ಮನವಿಕಲ್ಯಾಣ ಕರ್ನಾಟಕ ಉತ್ಸವ: ಬಳ್ಳಾರಿಯಲ್ಲಿ ಸಚಿವ ಟಿ. ರಘುಮೂರ್ತಿ ಅವರಿಂದ ಧ್ವಜಾರೋಹಣ