ಬಳ್ಳಾರಿ,ಮೇ 18 ಬಳ್ಳಾರಿ ರೈಲ್ವೇ ಪೊಲೀಸ್ ನಿಲ್ದಾಣ ವ್ಯಾಪ್ತಿಯ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರು ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಬಳ್ಳಾರಿ ರೈಲ್ವೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಘಟನೆಯ ವಿವರ:
ತಮಿಳುನಾಡಿನ ಕೊಯಮತ್ತೂರಿನ ಶಿವನಂದಪುರA ಗ್ರಾಮದ ಸರ್ವಣಪಟ್ಟಿಯ 4ನೇ ವಾರ್ಡ್ ನ ನಿವಾಸಿ ಆರ್. ಆರ್ಮುಗಂ ಎಂಬುವವರ ತಂದೆಯಾದ ಸಿ. ರಾಮು (70 ವರ್ಷ) ನಾಪತ್ತೆಯಾದ ವೃದ್ಧರಾಗಿದ್ದಾರೆ. ಕಳೆದ ಏಪ್ರಿಲ್ 12 ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಇವರನ್ನು ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಿಡಲಾಗಿತ್ತು. ತಿರುಪತಿಗೆ ಹೋಗಿ ಅಲ್ಲಿಂದ ಕೊಯಮತ್ತೂರಿಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಇದುವರೆಗೆ ಅವರು ಮನೆಗೆ ಮರಳಿ ಬಂದಿಲ್ಲ.
ವೃದ್ಧನ ಚಹರೆ ವಿವರ: ಎತ್ತರ 4.7 ಅಡಿ, ಸಾಧಾರಣ ಮೈಕಟ್ಟು, ಕಪ್ಪು ವರ್ಣ ಹೊಂದಿದ್ದು, ಎಡಗಣ್ಣಿನ ಪಕ್ಕದಲ್ಲಿ ಸಣ್ಣ ಕಪ್ಪು ಮಚ್ಚೆ ಇದೆ. ತಲೆಯಲ್ಲಿ ಕೂದಲಿಲ್ಲ (ಬೋಳು ತಲೆ), ಬಿಳಿ ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾರೆ.
ಕಾಣೆಯಾದ ಸಂದರ್ಭದಲ್ಲಿ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಪಂಚೆ ಧರಿಸಿರುತ್ತಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ಬಳ್ಳಾರಿ ರೈಲ್ವೆ ಪಿ.ಎಸ್ ದೂ.08392-276063, ಮೊ.9480802131, ಬೆಂಗಳೂರು ರೈಲ್ವೆ ಕಂಟ್ರೋಲ್ ರೂಮ್ ಮೊ.9480802140 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
One attachment • Scanned by Gmail
