ಬಳ್ಳಾರಿ,ಮೇ 21
ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕನೊಬ್ಬ ನಾಪತ್ತೆಯಾಗಿದ್ದು, ಬಾಲಕನ ಪತ್ತೆಗಾಗಿ ಪೊಲೀಸರು ಮನವಿ ಮಾಡಿದ್ದಾರೆ.
ಮೂಲತಃ ಹೈದರಾಬಾದ್‌ನಿಂದ ಬಂದು ಕಳೆದ ಮೂರು ತಿಂಗಳಿAದ ಬಳ್ಳಾರಿ ತಾಲ್ಲೂಕಿನ ಬಂಡಿಹಟ್ಟಿ ಗ್ರಾಮದಲ್ಲಿ ವಾಸವಿದ್ದ ಕೆ. ವೆಂಕಟೇಶ್ ಎಂಬುವವರ ಮಗ ಕೆ.ಆದಿತ್ಯ (13 ವರ್ಷ) ಮೇ 18 ರಂದು ನಾಪತ್ತೆಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಚಹರೆ ಗುರುತು:
ಎತ್ತರ ಅಂದಾಜು 4.5 ಅಡಿ, ದೃಢಕಾಯ ಮೈಕಟ್ಟು, ಸಾಧಾರಣ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಬಲಕಿವಿ ಪಕ್ಕದಲ್ಲಿ ಸಣ್ಣ ಕರಿಮಚ್ಚೆ ಇರುತ್ತದೆ. ಕಾಣೆಯಾದಾಗ ಕಿತ್ತಲೆ ಬಣ್ಣದ ಟಿ-ಶರ್ಟ್ ಮತ್ತು ಹಸಿರು ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಬಾಲಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಬಳ್ಳಾರಿ ಕಂಟ್ರೋಲ್ ರೂಂ 08392-258100, ಪಿ.ಐ. ಕೌಲ್ ಬಜಾರ್ ಠಾಣೆ ಮೊ.9480803047, ಪಿ.ಎಸ್.ಐ ಮೊ.94808203085 ಗೆ ಕರೆಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕೌಲ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
