Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಸ್ಪಂದಿಸುವ ನಾಯಕರನ್ನು ಆಯ್ಕೆ ಮಾಡಿ:  ಸಚಿವ ಸತೀಶ್‌ ಜಾರಕಿಹೊಳಿ





ತಾಲೂಕಿನ ಹರಗಾಪೂರ ಗ್ರಾಮದಲ್ಲಿ  ಅಬ್ಬರ ಪ್ರಚಾರ ನಡೆಸಿದ ಸಚಿವರು


ಹುಕ್ಕೇರಿ: ಜನರಿಗೆ, ರೈತರಿಗೆ ಸ್ಪಂದಿಸುವ ನಾಯಕರನ್ನು ಆಯ್ಕೆ ಮಾಡಿದಾಗ ಮಾತ್ರ  ಈ ಭಾಗದ ಅಭಿವೃದ್ಧಿಯಾಗಲು ಸಾಧ್ಯ, ಹೀಗಾಗಿ   ನಿಮ್ಮೆಲ್ಲರ ಕನಸು ನನಸಾಗಬೇಕಾದರೆ  ದಿ. ಅಪ್ಪಣಗೌಡ ಪಾಟೀಲ್‌ ಪೆನಲ್‌ ಗೆ ಬೆಂಬಲ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ  ಅವರು ಮನವಿ ಮಾಡಿಕೊಂಡರು.


ತಾಲೂಕಿನ ಹರಗಾಪೂರ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಬಾಗಿಯಾಗಿ,   ಅಬ್ಬರ  ಪ್ರಚಾರ ನಡೆಸಿ ಅವರು ಮಾತನಾಡಿದರು, ದಿ. ಅಪ್ಪಣಗೌಡ ಪಾಟೀಲ್‌ ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿ ಇತ್ತು, ಹೀಗಾಗಿ ವಿದ್ಯುತ್‌ ಸಹಕಾರಿ ಸಂಘ ನಿರ್ಮಿಸಿ, ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ಆದರೆ,  30 ವರ್ಷದ ಕತ್ತಿಯವರ  ಆಡಳಿತದಲ್ಲಿ  ಈ  ಭಾಗದಲ್ಲಿ ಹೇಳಿಕೊಳ್ಳವಷ್ಟು ಕೆಲಸ ನಡೆದಿಲ್ಲ.  ರೈತರು ಆರ್ಥಿಕವಾಗಿ ಸದೃಢರಾಗಬೇಕಾದರೆ   ದಿ. ಅಪ್ಪಣಗೌಡ ಪಾಟೀಲ್‌ ಪೆನಲ್‌ ಗೆ ನೀವೆಲ್ಲರೂ  ಬೆಂಬಲ ಸೂಚಿಸಬೇಕು. ನಿಮ್ಮ ಕೆಲಸಗಳಿಗೆ ಧ್ವನಿಯಾಗಲು ಮಾಜಿ ಸಂಸದ  ಅಣ್ಣಾ ಸಾಹೇಜ್‌ ಜೊಲ್ಲೆ,  ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ  ರಾಜೇಂದ್ರ ಪಾಟೀಲ, ಹಿರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಅಜ್ಜಪ್ಪಾ ಕಲ್ಲಹಟ್ಟಿ ಹಾಗೂ ಅಪ್ಪಸಾಹೇಬ್‌ ಸಿರಕೋಳಿ ಅವರು ಸದಾ ಮುಂದಾ ಇದ್ದಾರೆ. ನೀವು ಆಶೀರ್ವಾದ ಮಾಡಿದರೆ ನಿಮ್ಮ ಕನಸುಗಳು ಈಡೇರಲಿವೆ ಎಂದು ಹೇಳಿದರು.


ಕಳೆದ ಮೂರು ತಿಂಗಳ ಅವಧಿಯಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಲ್ಲಿ  ಒಳ್ಳೆಯ ಕೆಲಸಗಳನ್ನು ಮಾಡಲಾಗಿದೆ. ಟಿಸಿ ಅಳವಡಿಕೆ, ನಿರಂತರ ಜ್ಯೋತಿ, ರೈತರಿಗೆ ಸ್ಪಂದಿಸುವ ಕಾರ್ಯವಾಗಿದೆ. ಇದು ಮುಂದುವರೆಬೇಕು,  ರೈತರ ಪರವಾಗಿ ಸಂಸ್ಥೆ ಇರಬೇಕೆಂಬ ಉದ್ದೇಶದಿಂದ  ಮುಂದಿನ ಐದು ವರ್ಷದ ವರೆಗೂ  ನಿಮ್ಮ ಸೇವೆ ಮಾಡಲು ಅವಕಾಶ ಮಾಡಕೊಡಬೇಕು. ಇದೇ ತಿಂಗಳು ಸೆ. 28 ರಂದು ನಡೆಯಲಿರುವ ಚುನಾವಣೆಯಲ್ಲಿ ದಿ. ಅಪ್ಪಣಗೌಡ ಪಾಟೀಲ್‌ ಪೆನಲ್‌ ಗೆ ಬೆಂಬಲಿಸಬೇಕೆಂದು ಕರೆ ನೀಡಿದರು.


ಈ ಸಂದರ್ಭದಲ್ಲಿ  ಮಾಜಿ ಸಚಿವ ಶಶಿಕಾಂತ ನಾಯಿಕ,  ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್‌ ಚಿಂಗಳೆ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ, ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ  ರಾಜೇಂದ್ರ ಪಾಟೀಲ, ಹಿರಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಅಜ್ಜಪ್ಪಾ ಕಲ್ಲಹಟ್ಟಿ ಹಾಗೂ ಅಪ್ಪಸಾಹೇಬ್‌ ಸಿರಕೋಳಿ ಹಾಗೂ ಇತರರು ಇದ್ದರು.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ