Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

             ಪದಕ ಪ್ರದಾನ ಕಾರ್ಯಕ್ರಮ

                   
ಬೀಳಗಿ,ಜೂ,೨೬ : ಬೀಳಗಿ ತಾಲೂಕಿನ ಶ್ರೀ ಬನಶಂಕರಿದೇವಿ ವಿದ್ಯಾ ಸಂಸ್ಥೆ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ಬಿ.ಎನ್.ಖೋತ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಅನಗವಾಡಿಯಲ್ಲಿ "ಪ್ರಜೆಗಳೇ ಪ್ರಭುಗಳಾಗುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ೨೦೨೬-೨೭ನೇ ಸಾಲಿನ ಈ ಶಾಲಾ ಸಂಸತ್ತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಅಭ್ಯರ್ಥಿಗಳಿಗೆ ಪದಕ ಪ್ರದಾನ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಖಜಾಂಚಿಯವರಾದ ವಿಕ್ರಮಕುಮಾರ ಖೋತರವರು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯ ಸ್ಥಾನವನ್ನು ಅಲಂಕರಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರಾದ ಸುರೇಶ ಹವಾಲ್ದಾರವರು ವಿದ್ಯಾರ್ಥಿಗಳಿಗೆ ಶಾಲೆಯ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಸರ್ವಾಂಗೀಣ ಪ್ರಗತಿಯ ಕಡೆಗೆ ಗಮನ ಕೊಡುತ್ತಾ ತಮ್ಮ ಕೀರ್ತಿಯನ್ನು ಎಲ್ಲೆಡೆ ಪಸರಿಸಬೇಕೆಂದು ಮತ್ತು ಶಾಲಾ ಸಂಸತ್ತಿನ ಕಾರ್ಯದಕ್ಷತೆಯ ಮಹತ್ವವನ್ನು ತಿಳಿಸಿ, ಈ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯವೆಂದು ವಿದ್ಯಾರ್ಥಿಗಳು ತಮ್ಮ ಬದುಕನ್ನು ಸಾರ್ಥಕಗೊಳಿಸಬೇಕೆಂದು ಶುಭ ಹಾರೈಸಿ, ಅಭಿನಂದನೆ ಕೋರಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಉಪನ್ಯಾಸಕರಾದ ಅನಿಲ ಕೋರಿಯವರು ಮಾತನಾಡುತ್ತಾ ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡು ಶಾಲೆಯ ನಿಯಮಗಳಿಗೆ ಬದ್ಧರಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕೆಂದು ಹೇಳಿದರು.
      ಶಾಲೆಯ ಶಾಲಾ ನಾಯಕ ವಿದ್ಯಾರ್ಥಿ ಅಭ್ಯರ್ಥಿ ಶಿವಂ ಉಡೋಶಿ, ಉಪನಾಯಕ ವಿದ್ಯಾರ್ಥಿ ಅಭ್ಯರ್ಥಿ ವೈಭವ ಹಂಚಾಟೆ, ಸಾಂಸ್ಕೃತಿಕ ವಿಭಾಗಕ್ಕೆ ನಾಯಕಿ ವಿದ್ಯಾರ್ಥಿನಿ ಅಭ್ಯರ್ಥಿ ಕಲ್ಪಿತಾ ದೇಸಾಯಿ,  ಉಪನಾಯಕ ವಿದ್ಯಾರ್ಥಿ ಅಭ್ಯರ್ಥಿ ಮನೋಜ ಮಾಳಗೊಂಡ, ಕ್ರೀಡಾ ವಿಭಾಗಕ್ಕೆ ನಾಯಕ ವಿದ್ಯಾರ್ಥಿ ಅಭ್ಯರ್ಥಿ ದಿಕ್ಷಿತ ರಾಠೋಡ, ಉಪನಾಯಕಿ ವಿದ್ಯಾರ್ಥಿನಿ ಅಭ್ಯರ್ಥಿ ಖುಷಿ ತೇಲಿ, ಪ್ರಾರ್ಥನಾ ಸಭೆ ವಿಭಾಗಕ್ಕೆ ನಾಯಕ ವಿದ್ಯಾರ್ಥಿ ಅಭ್ಯರ್ಥಿ ಮನೋಜ ಕೊಪ್ಪದ, ಉಪನಾಯಕಿ ವಿದ್ಯಾರ್ಥಿನಿ ಅಭ್ಯರ್ಥಿ ಸೌಮ್ಯ ಗಡದಾನ ಶಾಲೆಯ ಗುಪ್ತಾ ತಂಡದ ನಾಯಕ ಉಲ್ಲಾಸರೆಡ್ಡಿ ಕಣೆಕಲ್, ಉಪನಾಯಕ ವಿಶ್ವನಾಥ ಪತ್ತಾರ, ಮೌರ್ಯ ತಂಡದ ನಾಯಕ ಆಕಾಶ ವಾಲ್ಮೀಕಿ, ಉಪನಾಯಕಿ ಪ್ರತೀಕ್ಷಾ ಹೆರಕಲ್, ಕದಂಬ ತಂಡದ ನಾಯಕಿ ಸಾಕ್ಷಿ ಯಳಗಿ ಉಪನಾಯಕಿ ಸೃಷ್ಠಿ ಬೋರಡ್ಡಿ, ಚಾಲುಕ್ಯ ತಂಡದ ನಾಯಕ ಸಮರ್ಥ ನಾನಪ್ಪಗೋಳ, ಉಪನಾಯಕಿ ಆರಾಧ್ಯ ನಾಯಕ, ಆಯ್ಕೆಯಾದ ವಿದ್ಯಾರ್ಥಿ ಅಭ್ಯರ್ಥಿಗಳಿಂದ ಶಾಲಾ ಸಂಸತ್ತಿನ ರಚನೆಯನ್ನು ಮಾಡಿ, ಶಾಲು ಹೊದಿಸಿ, ಪದಕ ನೀಡಿ, ಹಾರ್ದಿಕ ಅಭಿನಂದನೆಗಳನ್ನು ಕೋರಲಾಯಿತು.
      ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಅಭ್ಯರ್ಥಿಗಳಿಗೆ ಶಾಲೆಯ ಹಿರಿಯ ವಿಭಾಗದ ಸಂಯೋಜಕಿಯರಾದ ರಶ್ಮೀ ರಾವಳ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿನಿ ಸಮೃದ್ಧಿ ಹಂಚಿನಾಳ ಚುನಾವಣೆಯ ವರದಿಯನ್ನು ಮಂಡಿಸಿದಳು. ವಿದ್ಯಾರ್ಥಿನಿ ಐಶ್ವರ್ಯ ತೇವರ ಇವಳಿಂದ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿಲಾಯಿತು. ವರುಣ ದಳವಾಯಿ ಸ್ವಾಗತ, ನೇಹಾ ಮೋಕಾಶಿ ವಂದನಾರ್ಪಣೆ, ಕರುಣಾ ಗೌಡರ, ಮತ್ತು ಐಶ್ವರ್ಯ ಕಂದಗಲ್ ನಿರೂಪಣೆಯನ್ನು ನಿರ್ವಹಿಸಿದರು. ಶಾಲೆ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ