ನೋಯ್ದ. ಜೂ. 08:: ಉತ್ತರ ಪ್ರದೇಶದಲ್ಲಿ ನಡೆದ ವಾಯು ಮಾಲಿನ್ಯ ತಡೆಗಟ್ಟುವ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅಖಿಲ ಭಾರತ ಮೇಯರ್ಗಳು ಮತ್ತು RWA' ಸಮ್ಮೇಳನದಲ್ಲಿ ಬಳ್ಳಾರಿಯ ಪೂಜ್ಯ ಮಹಾಪೌರ ಪಿ ಗಾದೆಪ್ಪ ಸಮ್ಮೇಳನದಲ್ಲಿ ವಾಯು ಮಾಲಿನ್ಯದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಂತ್ರಿಯಾದ ಮಾನ್ಯ ಡಾ. ಸೋಮೆಂದ್ರ ತೋಮರ್ ಅವರು, ಯಮುನಾ ನಗರದ ಮಹಾಪೌರಾರಾದ ಸುಮನ್ ಬಹ್ಮನಿ ಅವರು, ಮತ್ತು ದೆಹಲಿ ಮಹಾಪೌರರಾದ ಪ್ರವೇಶ್ ವಹಿ ಅವರು, ಹಾಗೂ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ವಾಯು ಮಾಲಿನ್ಯದ ಕುರಿತು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿರ್ಧಾರವನ್ನು ಕೈಗೊಂಡರು. ಹಾಗೂ ಇದೆ ಸಂದರ್ಭದಲ್ಲಿ ಬಳ್ಳಾರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಖಾನೆಗಳು ಹೆಚ್ಚಾಗಿರುವುದರಿಂದ ವಾಯು ಮಾಲಿನ್ಯದಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು ಕಾರಣ ಪೂಜ್ಯ ಮಹಾಪೌರರಉದ್ಘಾಟಿಸಿದ ನಂತರ ನಡೆದ ಚರ್ಚೆಯಲ್ಲಿ ಬಳ್ಳಾರಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಾಯು ಮಾಲಿನ್ಯವು ಹೆಚ್ಚಿನಿಂದ ಕೂಡಿದ್ದು ಇದರ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಚರ್ಚಿಸಿದ್ದು ಇಂತಹ ಒಂದು ವಿಚಾರ ಸಂಕೀರ್ಣವು ಯಾವ ಪ್ರದೇಶದಲ್ಲಿ ಹೆಚ್ಚಿನ ವಾಯು ಮಾಲಿನ್ಯ ಇದೆ ಅಂತಹ ಪ್ರದೇಶದಲ್ಲಿ ಇಂತಹ ವಿಚಾರ ಸಂಕಿರಣಗಳು ಏರ್ಪಡಿಸಿದರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಈ ಸಭೆಯು ನಮ್ಮ ಮನವಿಯನ್ನು ಅಂಗೀಕರಿಸಿ ಮುಂದಿನ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಇದೇ ರೀತಿಯ ವಿಚಾರ ಸಂಕೀರ್ಣವನ್ನು ನಡೆಸಲು ನಮ್ಮ ಮನವಿಗೆ ಸಭೆಯು ಅಂಗೀಕರಿಸಿ ಹಾಗೂ ಈ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು ಕೆಲವು ವಾಯು ಮಾಲಿನ್ಯದ ಬಗ್ಗೆ ಚರ್ಚಿಸಿ ಕೆಲವು ವಿಷಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಈ ಸಭೆಯು ತೀರ್ಮಾನಿಸಲಾಯಿತು ಮತ್ತು ಈ ಸಂಕೀರ್ಣದಲ್ಲಿ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.