Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾತೃಶ್ರೀ ವಾತ್ಸಲ್ಯ ಕಿಟ್ ವಿತರಣೆ: ಜಿಲ್ಲಾ ನಿರ್ದೇಶಕ ರೋಹಿತಾಕ್ಷರಿಂದ ಹಸ್ತಾಂತರ





ಬಳ್ಳಾರಿ. ಫೇ. 06.: ತಾಯಿ ಮಮತೆಯ, ವಾತ್ಸಲ್ಯ ಹೃದಯದ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ, ಮಾಶಾಸನ ಪಡೆಯುತ್ತಿರುವ  ರತ್ನಮ್ಮನವರಿಗೆ ಜಿಲ್ಲಾ ನಿರ್ದೇಶಕರಾದ ಮಾನ್ಯ ಶ್ರೀ ರೋಹಿತಾಕ್ಷ ಅವರು 'ವಾತ್ಸಲ್ಯ ಕಿಟ್' ವಿತರಣೆ ಮಾಡಿ ಮಾತನಾಡಿದರು.


 ಅವರು ಇಂದು ಬಳ್ಳಾರಿ ನಗರದ ಗಾಂಧಿನಗರ ವಲಯದ ದೇವಿನಗರ ಕಾರ್ಯಕ್ಷೇತ್ರದ ನಿವಾಸಿಗಳಾದ  ರತ್ನಮ್ಮನವರು, ಯೋಜನೆಯಿಂದ ಕಳೆದ 3 ವರ್ಷಗಳಿಂದ ಪ್ರತಿ ತಿಂಗಳು 1000 ರೂ. ಮಾಶಾಸನ ಪಡೆಯುತ್ತಿದ್ದಾರೆ. ಇವರಿಗೆ ಇಂದು ಅಧಿಕಾರಿಗಳು ಕಿಟ್ ಹಸ್ತಾಂತರಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಸಾವಿರಾರು ದುರ್ಬಲ ವರ್ಗದ, ಅಶಕ್ತ, ನಿರ್ಗತಿಕ ಮತ್ತು ಕಡು ಬಡವರ ಕುಟುಂಬಗಳಿಗೆ ಪ್ರತಿ ತಿಂಗಳು 1000 ರೂ. ಮಾಶಾಸನವನ್ನು ನೀಡಲಾಗುತ್ತಿದೆ. ಯೋಜನೆಯ ಕಾರ್ಯಕರ್ತರು ಗ್ರಾಮಗಳಲ್ಲಿ ಸರ್ವೆ ನಡೆಸಿ, ದುಡಿಯಲು ಅಶಕ್ತರಾದವರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಸಂಬಂಧಿಕರಿಲ್ಲದೆ ಅನಾಥರಾಗಿರುವ ನಿರ್ಗತಿಕರನ್ನು ಗುರುತಿಸಿ, ಅವರ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು 1000 ರೂ. ಹಣವನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.

ಪ್ರಸ್ತುತ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ 188 ಮಾಶಾಸನ ಪಡೆಯುತ್ತಿರುವ ಸದಸ್ಯರಿಗೆ ಒಟ್ಟು 1,95,000 ರೂ. ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳಿಗೆ ನೀಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಮಂಜೂರಾತಿ ನೀಡಿರುತ್ತಾರೆ. ಅದರಂತೆ ಬಳ್ಳಾರಿ-1 ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 34 ಜನ ಸದಸ್ಯರಿಗೆ 34,000 ರೂ. ಮೊತ್ತದ ಮಾಶಾಸನವನ್ನು ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿದೆ.

"ಅಷ್ಟೇ ಅಲ್ಲದೆ, ಮಾಶಾಸನ ಪಡೆಯುವ ಸದಸ್ಯರಿಗೆ ಯೋಜನೆಯಿಂದ ಚಾಪೆ, ದಿಂಬು, ಹೊದಿಕೆ, ಚಮಚ, ಸೀರೆ, ಬಟ್ಟೆ, ಸೋಪ್, ಪ್ಲೇಟ್, ಚಂಬು, ಲೋಟ, ಕೊಡಪಾನ, ಬೆಡ್ ಶೀಟ್, ಟವಲ್ ಮತ್ತು ಪೌಷ್ಟಿಕ ಆಹಾರವನ್ನೊಳಗೊಂಡ ವಾತ್ಸಲ್ಯ ಕಿಟ್ ನೀಡಲಾಗುತ್ತಿದೆ. ಹೀಗೆ ಒಂದು ಕುಟುಂಬದ ನಿರ್ವಹಣೆಗೆ ಅತಿ ಅವಶ್ಯಕವಾಗಿ ಬೇಕಾಗಿರುವ ವಸ್ತುಗಳನ್ನು ಹಾಗೂ ಮನೆ ಇಲ್ಲದ ಫಲಾನುಭವಿಗಳಿಗೆ 'ವಾತ್ಸಲ್ಯ ಮನೆ' ನಿರ್ಮಾಣವನ್ನೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಲಾಗುತ್ತಿದೆ," ಎಂದು ಬಳ್ಳಾರಿ-1 ತಾಲ್ಲೂಕಿನ ಯೋಜನಾಧಿಕಾರಿಗಳಾದ ಶ್ರೀ ಬಸವರಾಜ ಕೆ. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗಾಂಧಿನಗರ ವಲಯದ ಮೇಲ್ವಿಚಾರಕರಾದ ಮಹಮ್ಮದ್ ರಫೀಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ  ಆಶಾ, ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸೇವಾಪ್ರತಿನಿಧಿ  ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.




Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ