Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ಸರಳತೆ ಶರಣರ ಧ್ಯೇಯ: ಬೇವಿನಗಿಡದ

ಮುದ್ದೇಬಿಹಾಳ: ಯಜ್ಞ, ಯಾಗಾದಿಗಳು, ಅದ್ದೂರಿ, ಆಡಂಬರದ ಖರ್ಚುಗಳ ಮೂಲಕ  ಜನಸಾಮಾನ್ಯರಿಗೆ ನಿಲುಕದ ಗಗನ ಕುಸುಮವಾಗಿದ್ದ  ದೇವರ ಅಸ್ತಿತ್ವವನ್ನು12 ನೇ ಶತಮಾನದ ಬಸವಾದಿ ಶರಣರು ತಮ್ಮ ನಡೆ, ನುಡಿ, ವಚನಗಳ ಮೂಲಕ ಸರಳಗೊಳಿಸಿದರು ಎಂದು ಮಹಾಮನೆ ಬಳಗದ ಅಧ್ಯಕ್ಷರಾದ ಎಸ್.ಎ.ಬೇವಿನಗಿಡದ ಹೇಳಿದರು. ಅವರು ಪಟ್ಟಣದ ವಿಶ್ವಕರ್ಮ ಬಡಾವಣೆಯಲ್ಲಿರುವ ಮಹಾಬಲೇಶ್ವರ ಗಡೇದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ 1057 ನೇ "ಮಹಾಮನೆ" ಕಾರ್ಯಕ್ರಮದಲ್ಲಿ ಶರಣ ಗುರುಪುರದ ಮಲ್ಲಯ್ಯನವರ ವಚನ ವಿಶ್ಲೇಷಿಸಿ ಮಾತನಾಡಿದರು. 
12 ಶತಮಾನ, ಕನ್ನಡದ ನೆಲದಲ್ಲಿ ಅಚ್ಚಳಿಯದ ತಿರುವು ಪಡೆದುಕೊಂಡ ಯುಗ. ಸಾಮಾಜಿಕ, ಧಾರ್ಮಿಕ ಚಿಂತನೆಗಳಿಗೆ ತಿರುವು ಕೊಟ್ಟ ಕಾಲವಿದು. ಶ್ರೀಮಂತರ ಸ್ವತ್ತಾಗಿದ್ದ ದೇವರು, ಆಚಾರ, ವಿಚಾರ, ಸಂಪ್ರದಾಯ, ಆಧ್ಯಾತ್ಮಿಕ ನೆಲೆಯನ್ನು ಶರಣರು ಬದಲಿಸಿದರು. ಏನೊಂದೂ ಓದದ ಜನ ಸಾಮಾನ್ಯರು, ಮಹಿಳೆಯರು ಶ್ರೇಷ್ಠ ಮಟ್ಟದ ವಚನಗಳನ್ನು ಬರೆದರು. ಬರೆದಂತೆಯೇ ತಮ್ಮ ಜೀವನ ರೂಪಿಸಿಕೊಂಡರು ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ  "ಕಾಯಕ ಯೋಗಿ" ಪ್ರಶಸ್ತಿ ಪಡೆದ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಶರಣಬಸಪ್ಪ ಗಡೇದ, ಮಾತನಾಡಿದರು. ಕಾರ್ಯಕ್ರಮದಲ್ಲಿ  ದಾನಪ್ಪ ನಾಗಠಾಣ, ಹಸಿರು ತೋರಣ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಎನ್.ಎಸ್.ಹಿರೇಮಠ, ಬಸವರಾಜ ನಾಲತವಾಡ, ಬಸವರಾಜ ಕೋರಿ, ಎಸ್.ಎಚ್.ಪಾಟೀಲ, ಎಚ್.ಬಿ.ದಳವಾಯಿ, ಸಂಗಣ್ಣ ಕಂಚ್ಯಾಣಿ,  ಎಸ್.ಆರ್.ಗೌಡರ,  ಎಂ.ಎಸ್.ಬಿರಾದಾರ,  ಚಂದ್ರಶೇಖರ ಪ್ಯಾಟಿಗೌಡರ, ಶ್ರೀಶೈಲ ಕತ್ತಿ, ಕೆ.ಆರ್.ಕಾಮಟೆ, ಬಿ.ಎಂ.ಪಲ್ಲೇದ, ಎನ್.ಎಸ್.ಮಠ, ಜಿ.ಆರ್.ಕಲಬುರ್ಗಿ, ಈರಣ್ಣ ಶಿರವಾಳ, ಅಶೋಕ ರೇವಡಿ, ನಾಗಭೂಷಣ ನಾವದಗಿ, ರವಿ ಗೂಳಿ, ಶ್ರೀ ಶೈಲ ಮರೋಳ, ಅಮರೇಶ ಐಹೊಳೆ, ಬಸಲಿಂಗಪ್ಪ ಕಟ್ಟಿ, ಎಂ.ಬಿ. ಪಾಟೀಲ, ದೇವೇಂದ್ರ ಪತ್ತಾರ,  ಡಾ.ಬೋರಮ್ಮ ಪೊಲೀಸ್ ಪಾಟೀಲ, ಸುಲೋಚನ ಸಜ್ಜನ ಮತ್ತಿತರರು ಇದ್ದರು.  ಸಂಗಮೇಶ ಶಿವಣಗಿ, ಬಾಪುಗೌಡ ಪಾಟೀಲ, ಎನ್.ಆರ್.ಮೊಕಾಶಿ ಮತ್ತು ಎಸ್.ಎಸ್.ಹುನಗುಂದ ಬಸವ ನೆನಹು, ಪ್ರಾರ್ಥನೆ ನಡೆಸಿದರು.  ಮಲ್ಲಿಕಾರ್ಜುನ ಗಡೇದ ಸ್ವಾಗತಿಸಿದರು. ಬಿ.ಎಸ್.ಮೇಟಿ ನಿರೂಪಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಯೂರವರ್ಮನ ನಾಡಪ್ರೇಮ ಅಮರವಾಗಲಿಪ್ರಭು ತುಮ್ಮರಗುದ್ದಿ, ನಾರಾಯಣ ಪಾಟೀಲ   ಸೇವಾ ನಿವೃತ್ತಿ ಝಳಕಿ : ಅನುಮಾನಾಸ್ಪದವಾಗಿ ನಾಲ್ಕು ಕುರಿಗಳ ಸಾವು.ಬಕ್ರೀದ ತ್ಯಾಗ ಬಲಿದಾನದ ಸಂಕೇತಗ್ರಾಮ ಆಡಳಿತ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ : ಆಯುಕ್ತೆ ಜಾನಕಿ ಕೆ. ಎಂ.ಮಹಾಲಿಂಗಪುರದಲ್ಲಿ ಬಲಿದಾನ ಸಂಕೇತ ಬಕ್ರಿದ್ ಹಬ್ಬ ಆಚರಣೆ ಅಡಿವೆಪ್ಪ ದೊಡಮನಿ ಅವರಿಗೆ ವಲಯ ಅರಣ್ಯಾಧಿಕಾರಿ ಹುದ್ದೆಗೆ ಪದೋನ್ನತಿ: ಗ್ರಾಮಸ್ಥರಿಂದ ಸನ್ಮಾನಗಾಂಧಾರಿ ವಿದ್ಯೆ ಪ್ರದರ್ಶನ ಹಾಗೂ ಪುಣ್ಯಾರಾಧನೆ ಪೂರ್ವಭಾವಿ ಸಭೆ ಯಶಸ್ವಿಜಾತಿ-ಧರ್ಮ ಭೇದ ನಿವಾರಣೆಗೆ ಅಂಬೇಡ್ಕರ್ ಪಂಚಲೋಹದ ಪುತ್ಥಳಿ ಅನಾವರಣ : ಗೋಪಿನಾಥ ಮೀಸಿ'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ಸರಳತೆ ಶರಣರ ಧ್ಯೇಯ: ಬೇವಿನಗಿಡದ