Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಪಾಪಿಗಳಿಗೆ ಗುಂಡು ಹೊಡೆಯಬೇಕಾಗಿದೆ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ






ಸವದತ್ತಿ: ನಮ್ಮ ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಮಾಹಿತಿ ನೀಡುವ ಪಾಪಿಗಳಿಗೆ ಮೊದಲು ಗುಂಡು ಹೊಡೆಯಬೇಕಾಗಿದೆ ಎಂದು ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಗುಡುಗಿದರು.

ಆಪರೇಷನ್ ಸಿಂಧೂರ್ ಕಾರ್ಯಾಚರ ಣೆಯ ನಂತರ ದೇಶದ ಸೈನಿಕರ ಆತ್ಮಸ್ಥೆರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸವದತ್ತಿ ನಗರದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷರು ವಿರೂಪಾಕ್ಷ ಮಾಮನಿ ನೇತೃತ್ವದಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮೊಂಡ, ಲಂಡ ಮತ್ತು ಭಂಡ ದೇಶ ಪಾಕಿಸ್ತಾನ. ಅದಕ್ಕೆ ಇನ್ನೂ ಬುದ್ದಿ ಬಂದಿಲ್ಲ. ದೇಶದ ಸೈನಿಕರಿಗೆ ಶಕ್ತಿಯಿದೆ. ಪಾಕಿಸ್ತಾನ ನಾಶಕ್ಕೆ ಅವರು ಸನ್ನದ್ದರಾಗಿದ್ದಾರೆ ಎಂದರು.

ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಯ ಸಂಘದ ಅಧ್ಯಕ್ಷ ಕುಮಾರ ಹಿರೇಮಠ ಮಾತನಾಡಿ, ೧೯೭೦ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರನ್ನು. ಅಂದು ಗೆದ್ದಿದ್ದ ಪ್ರದೇಶವನ್ನು ಇಂದಿರಾ ಗಾಂಧಿ ಸರ್ಕಾರ ವಾಪಸು ಕೊಡಬಾರದಿತ್ತು. ನೀರು ಹರಿದಂತೆ ನಮ್ಮ ಸೈನಿಕರ ರಕ್ತ ಅಂದಿನ ಯುದ್ಧದಲ್ಲಿ ಹರಿದಿತ್ತು ಎಂದು ನೆನಪಿಸಿದರು

ಇಲ್ಲಿಯ ಎಪಿಎಂಸಿ ಬಾಗಿಲಿನಿಂದ ಆರಂಭವಾದ ಯಾತ್ರೆ ಕಡಕೋಳ ಬ್ಯಾಂಕ್, ಆನಿ ಅಗಸಿ, ಸಂಗೋಳ್ಳಿ ವೃತ್ತದ ಮೂಲಕ ಮಾಮನಿ ಕಲ್ಯಾಣ ಮಂಟಪ ತಲುಪಿತು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಅಟೋರಿಕ್ಷಾ ಚಾಲಕರ ಸಂಘಟನೆ, ವಕೀಲರ ಸಂಘ, ವೈದ್ಯರ ಸಂಘ, ಮಹಿಳಾ ಸಂಘ, ಹಾಗೂ ಬಿಜೆಪಿ ಕಾರ್ಯಕರ್ತರು ತಿರಂಗಾ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿ ದ್ದರು. ೨೦೦ ಮೀಟರ್ ಉದ್ದದ ರಾಷ್ಟ್ರ ಧ್ವಜ ವನ್ನು ನಾಗರಿಕರು, ವಿದ್ಯಾರ್ಥಿಗಳು ಹಿಡಿದು ಸಾಗಿದ್ದು ವಿಶೇಷವಾಗಿತ್ತು.

ಈ ವೇಳೆ ಚಿದಂಬರೇಶ್ವರ ಮಠದ ನಟೇಶ ದೀಕ್ಷಿತ್, ಸಿಂದೋಗಿಯ ವೀರಯ್ಯ ಶಾಸ್ತ್ರಿ, ರತ್ನಾ ಮಾಮನಿ, ಡಾ ನಯನಾ ಭಸ್ಮ, ಜಗದೀಶ್ ಶಿಂತ್ರಿ, ಬಸವರಾಜ್ ಪುಟ್ಟಿ, ನರಸಿಂಹ ಕುಲಕರ್ಣಿ, ಈರಣ್ಣ ಚಂದರಗಿ, ಪಂಚನಗೌಡ ದ್ಯಾಮನಗೌಡರ, ಶಂಕರ ವನ್ನೂರ, ಎಪ್ ಎಸ್ ಸಿದ್ದನಗೌಡರ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಮಹಾದೇವಪ್ಪ ವೆಂಕನಕೊಪ್ಪ, ಬಸವರಾಜ ಕಾರದಗಿ, ಸಿ ವಿ ಸಂಬಯ್ಯನಮಠ ಸೇರಿದಂತೆ ಅನೇಕರು ಇದ್ದರು.

ಹೇಳಿಕೆ:ಸಿಂಧೂರ ಬಗ್ಗೆ ನಮ್ಮ ದೇಶಕ್ಕೆ ಅಷ್ಟೇ ಗೊತ್ತಿತ್ತು.ಮೋದಿಯವರು ಜಗತ್ತಿಗೆ ಪರಿಚಯ ಮಾಡಿಸಿದರು. ನಮ್ಮದೇಶದ ಮಹಿಳೆಯರ ಸಿಂಧೂರ ಅಳಿಸಿದ ಪಾಕಿಸ್ತಾನ ನಮ್ಮ ಸೈನಿಕರು ಹಾಗೂ ನಾಯಕರು ತಕ್ಕ ಪಾಠ ಕಳಿಸುತ್ತಿದ್ದಾರೆ.- ಶ್ರೀ ವಿರೂಪಾಕ್ಷ ಮಾಮನಿ, ಬಿಜೆಪಿ ಮಂಡಳ ಅಧ್ಯಕ್ಷರು, ಸವದತ್ತಿ




Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ