Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೆಟರೈಜಿಯಂ ಬಳಸಿ ಗೊಣ್ಣೆ ಹುಳು ನಿರ್ವಹಿಸಿ: ಡಾ. ಮಂಜುನಾಥ ಚೌರಡ್ಡಿ

ನೇಸರಗಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕೃಷಿ ಚಿಂತಕರಾದ ಮಾನ್ಯ ಡಾ. ಪ್ರಭಾಕರ ಬ. ಕೋರೆಯವರ ೭೮ ನೇ ಹುಟ್ಟುಹಬ್ಬದ ಅಂಗವಾಗಿ ದಿನಾಂಕ ೨೨.೦೭.೨೦೨೫ ರಂದು ಮತ್ತಿಕೊಪ್ಪದಲ್ಲಿರುವ ಕೆಎಲ್‌ಇ ಸಂಸ್ಥೆಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ೨೪ ನೇ ಕಾರ್ಯಕ್ರಮವಾಗಿ ಕಬ್ಬು ಬೆಳೆ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಕಾರ್ಯಕ್ರಮದ ಉದ್ಘಾಟನೆಗೊಳಿಸಿದರು.

ನಂತರ ಮಾತನಾಡಿದ ಅವರು, ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆಯು ತೀವ್ರವಾಗಿದ್ದು, ಕೀಡೆಯು ಬೇರನ್ನು ತಿನ್ನುವುದರ ಮೂಲಕ ಬೆಳೆ ಹಾನಿ ಮಾಡುತ್ತವೆ. ಈ ಹುಳುವಿನ ಜೀವನ ಚಕ್ರವನ್ನು ಪರಿಚಯಿಸಿ ಮುಂಗಾರು ಹಂಗಾಮಿನಲ್ಲಿ ಮೊದಲ ಬಾರಿ ಮಳೆಯಾದಾಗ ದುಂಬಿಗಳು ಮಣ್ಣಿನಿಂದ ಹೊರಗಡೆ ಬಂದು ಗಿಡದ ಮೇಲೆ ಕೂರುತ್ತವೆ. ಈ ಹಂತದಲ್ಲಿ ಬದುಗಳ ಮೇಲೆ ಬೆಂಕಿ ಹಚ್ಚಿದಾಗ ಕೀಡೆಗಳು ಬೆಂಕಿಯಲ್ಲಿ ಬಿದ್ದು ನಾಶ ಹೊಂದುತ್ತವೆ. ಗೊಣ್ಣೆ ಹುಳು ಬಾಧಿತ ಜಮೀನುಗಳಲ್ಲಿ ಕಬ್ಬು ನಾಟಿ ಮಾಡುವುದಕ್ಕಿಂತ ಪೂರ್ವದಲ್ಲಿ ಜೈವಿಕ ಕೀಟನಾಶಕವಾದ ಮೆಟರೈಜಿಯಂ ಅನಿಸೊಪ್ಲಿಯೆಯನ್ನು ಎಕರೆಗೆ ೫ ಕೆಜಿಯಂತೆ ಬಳಸಿ ಕೀಡೆಯನ್ನು ಬೆಳೆಯದಂತೆ ನಾಶಮಾಡಬಹುದಾಗಿದೆ ಎಂದರು. ಅದೇರೀತಿ, ಕಬ್ಬು ಬೆಳೆಯಲ್ಲಿ ಬರುವ ಬಿಳಚಿ ಪರಾವಲಂಬಿ ಕಳೆಯನ್ನು ನಿಯಂತ್ರಿಸಲು ಹೆಚ್ಚು ನೀರನ್ನು ಜಮೀನಿನಲ್ಲಿ ನಿಲ್ಲಿಸಬೇಕು ಹಾಗೂ ಏಕದಳ ಬೆಳೆಯನ್ನು ಬೆಳೆಯದೇ ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯದ ಬೆಳೆ ಅದರಲ್ಲೂ ಪ್ರಮುಖವಾಗಿ ಅಲಸಂದಿ ಬೆಳೆಯಿಂದ ಕಾಲಗೈ ಮಾಡುವುದರಿಂದ ಈ ಕಳೆಯನ್ನು ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಡಾ. ಎಸ್. ಎಸ್. ಹಿರೇಮಠ, ವಿಜ್ಞಾನಿ ಸಸ್ಯ ಸಂರಕ್ಷಣೆ ಮಾತನಾಡಿ, ಸಮಗ್ರ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಎಸ್. ಎಮ್. ವಾರದ ಸಮಗ್ರ ಪೋ?ಕಾಂಶಗಳ ನಿರ್ವಹಣೆ, ಜಿ. ಬಿ. ವಿಶ್ವನಾಥ ಬೇಸಾಯ ಕ್ರಮಗಳ ಕುರಿತು ಹಾಗೂ ಪ್ರವೀಣ ಯಡಹಳ್ಳಿ ಬಾಳೆ ಬೆಳೆ ಕುರಿತು ರೈತರೊಂದಿಗೆ ಚರ್ಚಿಸಿದರು. ರಾಮದುರ್ಗ ತಾಲೂಕಿನ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗೋವಿಂದರೆಡ್ಡಿ ಜಾಯಿಯವರು ಆತ್ಮ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಮದುರ್ಗ ತಾಲೂಕಿನ ೬೦ ಜನ ರೈತರು ಭಾಗವಹಿಸಿ ಮಾಹಿತಿ ಪಡೆದರು. ಮಂಜುನಾಥ ಚೌರಡ್ಡಿ
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ