ಘಟಪ್ರಭಾ :
ನಗರದ ವಿವಿಧ ಕಡೆ ಮಹರ್ಷಿ ಭಗೀರಥ ಜಯಂತಿಯನ್ನು ಆಚರಣೆ ಮಾಡಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪುರ ಪಿ ಜಿ, ಘಟಪ್ರಭಾ, ಪುರಸಭೆ ಕಾರ್ಯಾಲಯ, ಭಗೀರಥ ವೃತ್ತ, ಶಿವ ಭಗೀರಥ ಸೌಹಾರ್ದ ಸೊಸೈಟಿ ,ಸೇರಿದಂತೆ ವಿವಿಧ ಕಡೆಗಳಲ್ಲಿ ಮಹರ್ಷಿ ಭಗೀರಥ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಶೃದ್ಧಾ ಭಕ್ತಿ ಗೌರವಗಳಿಂದ ಆಚರಿಸಲಾಯಿತು.
ಹಿರಿಯರಾದ ರಾಮಣ್ಣ ಹುಕ್ಕೇರಿ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ, ಶಿಕ್ಷಕರಾದ ರವೀಂದ್ರ ಉಪ್ಪಾರ ಗುರುಗಳು ಭಗೀರಥ ಮಹಾರಾಜರ ಕುರಿತು ಮಾತನಾಡಿದರು, ಕನ್ನಡ ರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ, ಅರವಿಂದ ಬಡಕುಂದ್ರಿ ವಕೀಲರು, ಮಲ್ಲೇಶ್ ,ನಾಯಿಕ, ಉಮೇಶ್ ನಾಯಿಕ, ನಾಗರಾಜ್ ನಾಯಿಕ, ಕರವೇ ರಾಜ್ಯ ಉಸ್ತುವಾರಿ ಅಧ್ಯಕ್ಷರಾದ ತಮ್ಮಣ್ಣ ಅರಭಾವಿ, ಕಿಚಡಿ (ಪೋಲೀಸ್ ಇಲಾಖೆ) , ಪುಟ್ಟು ಖಾನಾಪುರೆ, ಮಡ್ಡಪ್ಪ ರಾಜಪುರೆ, ಕಾಡಪ್ಪ ನಾಯಕ್, ದುಂಡಪ್ಪ ನಾಯಕ್, ಕೆಂಪಣ್ಣ ನಾಯ್ಕ್, ಮಾದೇವ್ ನಾಯಕ್ (ಪೂಜಾರಿ), ಸಂಜು ನಾಯಕ್, ಪರಸಪ್ಪ ಸೊಲ್ಲಾಪುರ, ಶಂಕರ್ ನಾಯ್ಕ , ಗೋಪಾಲ್ ನಾಯ್ಕ್, ರಮೇಶ್ ನಾಯಕ್, ಶಶಿ ಚೌಕಶಿ ,ಕಳಸಣ್ಣವರ ಟೀಚರ್, ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಸರ್ವ ಸಮಾಜಗಳ ಮುಖಂಡರು ಭಾಗವಹಿಸಿದ್ದರು.