Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಹಿತ್ಯಕ್ಕೆ ಪ್ರಾಸ ಛಂದಸ್ಸು ಇರಬೇಕೆಂದಿಲ್ಲ, ಆಡು ಭಾಷೆಯಲ್ಲಿದ್ದರೆ ಒಳಿತು : ಡಾ. ನಂಜುಂಡ




ಬಳ್ಳಾರಿ. ಆ. 25: ಸಾಹಿತ್ಯದಲ್ಲಿ ಮೂರು ಪ್ರಕಾರಗಳಿವೆ ಆ ಮೂರು ಪ್ರಕಾರಗಳಲ್ಲಿ ಯಾವುದನ್ನೇ ಆಯ್ದುಕೊಂಡು  ಸಾಹಿತ್ಯ ರಚನೆಗೆ ಮುಂದಾಗಬಹುದು, ಛಂದಸ್ಸು ಪ್ರಾಸ ಇರಬೇಕೆಂದೇನೂ ಇಲ್ಲ ಎಂದು ನಂಜುಂಡ ಡಿ  ಅಭಿಪ್ರಾಯಪಟ್ಟರು.


   ಅವರು ಇಂದು ನಗರದ ಬಿ ಪಿ ಎಸ್ ಸಿ ಶಾಲೆಯಲ್ಲಿ ಜರುಗಿದ ಎರಡನೇ ದಿನದ ಭಾರತೀಯ ವೈದ್ಯರ ಸಂಘ ಕನ್ನಡ ವೈದ್ಯ ಬರಹಗಾರರ ಆರನೇ ರಾಜ್ಯ ಸಮ್ಮೇಳನದ ಆರನೇ ಗೋಷ್ಠಿಯ  ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾವ್ಯದ ಪ್ರಕಾರಗಳು ಮತ್ತು ಸಾಮಾನ್ಯ ವ್ಯಾಕರಣ ಬಳಕೆ ವಿಷಯದ ಕುರಿತು  ಮಾತನಾಡುತ್ತಾ, ಗದ್ಯಾ, ಪದ್ಯ ಮತ್ತು ಚಂಪೂ ಕಾವ್ಯಗಳಲ್ಲಿ ಸಾಹಿತ್ಯವನ್ನು ರಚಿಸಬಹುದು ವಾಕ್ಯವನ್ನು ಅಥವಾ ಪದ್ಯವನ್ನು ಕಟ್ಟುವ ಶೈಲಿಯನ್ನು ಕವಿ ತಿಳಿದುಕೊಂಡಿರಬೇಕು ಹಾಗಾದರೆ ಮಾತ್ರ ಸರಳವಾದ ಸಾಹಿತ್ಯ ರಚಿಸಬಹುದು, ಕನ್ನಡದ ಖ್ಯಾತ ಕವಿಗಳು ತಮಗಿಷ್ಟವಾದ ರೀತಿಯಲ್ಲಿ ಗದ್ಯ ಮತ್ತು ಪದ್ಯದಲ್ಲಿ ಕೃತಿಗಳನ್ನು ರಚಿಸಿದ್ದಾರೆ ಕನ್ನಡದ ಪ್ರಥಮ ಗದ್ಯಕೃತಿ ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಾದರೆ, ವಾಲ್ಮೀಕಿ ರಚಿತ ರಾಮಾಯಣ, ಬೇಂದ್ರೆಯವರ ನಾಕುತಂತಿ ಕೃತಿಗಳು ಪದ್ಯದಲ್ಲಿವೆ ಎಂದ ಅವರು,  ಕಾವ್ಯ ರಚನೆಕಾರ ಪದಗಳ ಪೋಣಿಸುವಿಕೆಯನ್ನು  ಚೆನ್ನಾಗಿ ತಿಳಿದುಕೊಂಡಲ್ಲಿ ಅತ್ಯುತ್ತಮವಾದ ಸಾಹಿತ್ಯವನ್ನು ರಚಿಸಬಲ್ಲವನಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.


   ಚಂಪೂ ಕಾವ್ಯದಲ್ಲಿ ವ್ಯಾಕರಣ ಅಥವಾ ಛಂದಸ್ಸನ್ನು ಬಳಸಬೇಕೆಂದೇನಿಲ್ಲ ಸಾಮಾನ್ಯ ಪದಗಳನ್ನೇ ಬಳಸಿಕೊಂಡು ಜನರ ಆಡುಭಾಷೆಯಲ್ಲಿ ರಚಿಸಿದರೆ ಜನಮನವನ್ನು ತಲುಪಿಸಬಹುದು ಎಂದರು.

  ಡಾ. ಗೋವಿಂದ ಹೆಗಡೆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಉಸ್ತುವಾರಿ ಕಿರಣ್ ಪಟೇಲ್ ನಿರ್ವಹಣೆ ಡಾಕ್ಟರ್ ಅಂತಾಚಾರಿ ನೆರವೇರಿಸಿದರು.


 ಎರಡನೇ ದಿನವಾದ ಇಂದು ವೈದ್ಯ ಕವಿ ಗೋಷ್ಠಿ ಜರುಗಿತು. ಡಾಕ್ಟರ್ ದತ್ತಗೀರ್ ಸಾಬ್ ದಿನ್ನಿ  ಈ ಗೋಷ್ಠಿಯ ಅಧ್ಯಕ್ಷತೆಯನ್ನು, ಡಾಕ್ಟರ್ ಸುಮಾ ಗುಡಿ ನಿರ್ವಹಣೆ, ಡಾಕ್ಟರ್ ಇಂದಿರಾ ದೊಡ್ಡಬಳ್ಳಾಪುರ ಇವರು ವೇದಿಕೆಯ ಉಸ್ತುವಾರಿಯನ್ನು ನೆರವೇರಿಸಿದರು.


 ಸಂಜೆ ಸಮಾರೋಪ ಸಮಾರಂಭದಲ್ಲಿ ಡಾಕ್ಟರ್ ವಿವಿ ಚಿನಿವಾಲರ ರಾಜ್ಯಾಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ ಇವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅವಿಭಜಿತ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ,  ಭಾಗವಹಿಸಿದ್ದರು, ಡಾ. ವೀರಭದ್ರಯ್ಯ ಟಿ ಎ ಡಾ. ಸೂರಿರಾಜು,ಗಡ್ಡಿ ದಿವಾಕರ್, ದಿನೇಶ್ ಗುಡಿ ದಿವ್ಯ ಕೆ ಎನ್ ಉಪಸ್ಥಿತರಿದ್ದರು.


 ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ಭಾರತೀಯ ವೈದ್ಯರ ಸಂಘ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನ 2025  ವೈದ್ಯ ಸಾಹಿತ್ಯ ಜನಪರ ಸಾಹಿತ್ಯ ಕಾರ್ಯಕ್ರಮದಲ್ಲಿ ರಾಜ್ಯದ್ಯಂತ ಸುಮಾರು 3 ನೂರಕ್ಕೂ ಹೆಚ್ಚು ಜನ ವೈದ್ಯರು ಭಾಗವಹಿಸಿ  ಈ ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸಿದರು. ಈ ಎರಡು ದಿನಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಡಾ. ಅರವಿಂದ್ ಪಟೇಲ್ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ