ಗದಗ, ೨೫ : ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು, ವಿದ್ಯಾವಂತರಾಗುವುದರೊಂದಿಗೆ ಪ್ರಜ್ಞಾವಂತಿಕೆಯನ್ನೂ ಬೆಳೆಸಿಕೊಳ್ಳಬೇಕು. ತಂದೆ ತಾಯಿ, ಗುರುಹಿರಿಯರು ಹೇಳುವ ಸಂಸ್ಕಾರಯುತ ವಿಚಾರಗಳನ್ನು ತಿರಸ್ಕಾರ ಮಾಡದೇ ಅವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ನಿಮ್ಮ ಬದುಕು ಸುಂದರವಾಗುತ್ತದೆ ಎಂದು ಶಿರೋಳ ಜಗದ್ಗುರು ಯಚ್ಚರಸ್ವಾಮಿಗಳ ಸಂಸ್ಥಾನ ಗವಿಮಠದ ಶ್ರೀ ಅಭಿನವ ಯಚ್ಚರಮಹಾಸ್ವಾಮೀಜಿ ಹೇಳಿದರು.
ಅವರು ನಗರದ ಗಂಗಿಮಡಿ ಕ್ರಾಸ್ತ ಹತ್ತಿರದ, ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಕೊಂಡಿದ್ದ ೮ನೇ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಂಘದ ನಿವೃತ್ತ ದಂಪತಿಗಳ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ, ವದ್ಯೆ, ಅಂಕಗಳು ಬದುಕಿಗೆ ಆಸರೆಯಾದರೆ, ಸಂಸ್ಕಾರ ಬದುಕನ್ನು ಸುಂದರಗೊಳಿಸುತ್ತದೆ, ಹಾಗಾಗಿ ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಪ್ರತಿಯೊಬ್ಬ ಮಗುವು ಶಿಕ್ಷಣವಂತರಾದಾಗ ಸುಶೀಕ್ಷತ ಸಮಾಜ ನಮ್ಮದಾಗಿ ಸಮಾಜ ಸಂಘಟನೆಗೆ ಬಲಬರುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ. ಕಡ್ಲಿಕೊಪ್ಪ ಅವರು ಮಾತನಾಡಿ, ಸಮಾಜದಲ್ಲಿ ಎಷ್ಟೇ ಸಂಘಟನೆಗಳಿದ್ದರೂ ನಾವೆಲ್ಲ ಒಂದಾಗಿ ಸಮಾಜದ ಬೇಕು ಬೇಡಿಕೆಗಳಿಗೆ ಹೋರಾಡಬೇಕು. ಸಮಾಜದ ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿಸುವುದರೊಂದಿಗೆ ಸಮಾಜ ಸಂಘಟನೆಯ ಅರಿವು ಅವರಲ್ಲಿ ಮೂಡಿಸಬೇಕು. ಎಂಟನೆ ವರ್ಷದ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ೧೪೦ಕ್ಕೂ ಹೆಚ್ಚು ನಮ್ಮ ವಿಶ್ವಕರ್ಮ ಸಮಾಜದ ಮಕ್ಕಳು ಪಾಲ್ಗೊಂಡು ಪುರಸ್ಕೃತರಾಗಿದ್ದಿರಿ, ನೀವೆಲ್ಲ ಐಏಎಸ್, ಐಪಿಎಸ್, ಐಎಫ್‌ಎಸ್, ಕೆಏಎಸ್ ನಂತಹ ಹುದ್ದೆಗಳ ಗುರಿ ಇಟ್ಟಕೊಳ್ಳಬೇಕು, ಅದಕ್ಕೆ ನಮ್ಮ ಸಂಘಟನೆ ಅಗತ್ಯ ಸಹಕಾರ ನೀಡುವುದು, ಜೊತೆಗೆ ಸಮಾಜದ ಸರ್ವರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ನೌಕರರ ಸಂಘ ನಿರ್ಮಿಸುತ್ತಿರುವ ಪಂಚಕಸಬುಗಳ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ ಸರ್ವರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಮಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಕೆ. ಡಿ. ಬಡಿಗೇರ ಅವರು ಮಾತನಾಡಿ, ತಪಸ್ಸಿನಂತೆ ತೊಡಗಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧ್ಯ. ಮೊಬೈಲ್ ಮುಂತಾದ ಮನೋರಂಜನೆಗಳನ್ನು ತ್ಯಾಗಮಾಡಿ ಶ್ರದ್ಧೆಯಿಂದ ಅಭ್ಯಾಸ ಮಾಡಿ, ನಿಮ್ಮ ಬದುಕು ರೂಪಿಸಿಕೊಳ್ಳುವ ಶಿಲ್ಪಿಗಳು ನೇವೆ ಆಗಿದ್ದು, ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಯಾದಗಿರಿ ಜಿಲ್ಲಾ ವಿಶ್ವಕರ್ಮ ನೌಕರಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮೌನೇಶ ಕೆಂಭಾವಿ, ಧಾರವಾಡ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರಾದ ಕಾಳಪ್ಪ ವ್ಹಿ. ಬಡಿಗೇರ, ರಾಯಚೂರ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಮನೋಹರ ವಾಯ್. ಪತ್ತಾರ, ಧಾರವಾಡ ಜಿಲ್ಲಾ ವಿಶ್ವಕರ್ಮ ನೌಕರರ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ವಿಠ್ಠಲ ಜಿ. ಕಮ್ಮಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಹಾವೇರಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಈರಪ್ಪ ಶ. ಪಂಚಾನನ, ಬಾಗಲಕೋಟ ತಾಲೂಕಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ದೇವೇಂದ್ರಪ್ಪ ಮ. ಅಗಲತಕಟ್ಟ, ರಾಯಚೂರ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಮು ಗಾಣದಾಳ, ಕೊಪ್ಪಳ ತಾಲೂಕಾ ವಿಶ್ವಕರ್ಮ ಸಮಾದ ಅಧ್ಯ÷ಕ್ಷರಾದ ದೇವೇಂದ್ರಪ್ಪ ಎಚ್. ಬಡಿಗೇರ, ಕೊಪ್ಪಳ ಜಿಲ್ಲಾ ವಿಶ್ವಕರ್ಮ ನೌಕರರ ನಿರ್ದೇಶಕರು ಹಾಗೂ ಸಮಾಜದ ಕಾರ್ಯಾಧ್ಯಕ್ಷರಾದ ರುದ್ರಪ್ಪ ಕೆ. ಬಡಿಗೇರ, ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಎ. ಎನ್. ಬಡಿಗೇರ, ನಿದೇಶಕರಾದ ಬಿ. ಎಮ್. ಬಡಿಗೇರ, ಕೆ. ಎಸ್. ಬಡಿಗೇರ, ಶ್ರೀಮತಿ ಶಿವಲೀಲಾ ಕೆ. ಬಡಿಗೇರ, ಬಿ. ಎಂ. ಯರಕದ, ಮೌನೇಶ ಸಿ. ಬಡಿಗೇರ(ನರೇಗಲ್ಲ), ಮಹೇಶ ಕಮ್ಮಾರ, ವಿಶ್ವನಾಥ ಯ. ಕಮ್ಮಾರ, ಶ್ರೀಮತಿ ರಿಂದಮ್ಮ ತೋಟಗಂಟಿ, ಶ್ರೀಮತಿ ಕಸ್ತೂರಿಬಾಯಿ ಕಮ್ಮಾರ, ಡಾ. ಸಿ. ವಿ. ಬಡಿಗೇರ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ಸಾಧಕರಿಗೆ ವಿಶ್ವಕರ್ಮ ಸಾಧಕಶ್ರೀ ಹಾಗೂ ವಿಶ್ವಕರ್ಮ ನೌಕರಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ನಿವೃತ್ತ ನೌಕರ ದಂಪತಿಗಳಿಗೆ ಹಾಗೂ ವಿಶೇಷ ಸನ್ಮಾನಿತರಿಗೆ ಸನ್ಮಾನ ಮಾಡಲಾಯಿತು.
ಆರಂಭದಲ್ಲಿ ಲಕ್ಷೆö್ಮÃಶ್ವರದ ಶ್ರೀಧರ ದೇ. ಬಡಿಗೇರ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಗಿರೀಶ ಬಡಿಗೇರ ಸ್ವಾಗತಿಸಿದರು. ರಾಜಗೋಪಾಲ ಡಿ. ಕಡ್ಲಿಕೊಪ್ಪ ಪ್ರಸ್ತಾವಿಕ ನುಡಿಗಳಾಡಿದರು. ಶ್ರೀಮತಿ ಸುಮಂಗಲಾ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಸಿ. ಎಂ. ಪತ್ತಾರ ವಂದಿಸಿದರು.
