Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಮಾಜವನ್ನು ಸಂಘಟಿಸಿ ಬಲಿಷ್ಠವಾಗಿ ಕಟ್ಟೋಣ: ಪ್ರೇಮಕುಮಾರ ಮ್ಯಾಗೇರಿ ಕರೆ.

​ಮುದ್ದೇಬಿಹಾಳ: "ನಮ್ಮ ಸಮಾಜವನ್ನು ನಾವೆಲ್ಲರೂ ಒಗ್ಗೂಡಿ ಜಿಲ್ಲಾಮಟ್ಟದಲ್ಲಿ ಕಟ್ಟಿ ಬೆಳೆಸೋಣ. ಸಮಾಜದ ಸಂಘಟನೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಅತಿ ಮುಖ್ಯವಾಗಿದೆ," ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಹೇಳಿದರು.

​ತಾಲ್ಲೂಕಿನ ಕಂದಗನೂರ ಗ್ರಾಮದಲ್ಲಿ ಶನಿವಾರ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 'ನೂತನ ಪದಾಧಿಕಾರಿಗಳ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ'ದಲ್ಲಿ ಅವರು ಮಾತನಾಡುತ್ತಿದ್ದರು.

​ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವೆ:

​ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ  ತಾಲ್ಲೂಕು ಅಧ್ಯಕ್ಷ ಶಂಕರಗೌಡ ಎಸ್. ಶಿವಣಗಿ, "ಸಮಾಜವು ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ತಾಲ್ಲೂಕಿನಲ್ಲಿ ಹಂಡೇವಜೀರ ಸಮಾಜವನ್ನು ಕಟ್ಟಿ ಬೆಳೆಸಲು ಸರ್ವರ ಸಹಕಾರ ಅಗತ್ಯ," ಎಂದು ತಿಳಿಸಿದರು.

​ಸಾನಿಧ್ಯ ಮತ್ತು ಆಶೀರ್ವಚನ

​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದಮೂರ್ತಿ ಮಹಾದೇವಯ್ಯ ಶಾಸ್ತ್ರಿ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ಎಸ್.ಬಿ. ಹಂಡರಗಲ್ಲ ಅವರು ಸಮಾಜದ ಸ್ಥಿತಿಗತಿ ಹಾಗೂ ಸಂಘಟನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

​ವೇದಿಕೆಯಲ್ಲಿ ಚಂದ್ರಶೇಖರಯ್ಯ ಹಿರೇಮಠ, ಶಿವಣಗೌಡ ಬಿರಾದಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಶಿದ್ದರಾಮಯ್ಯ ಗಣಾಚಾರಿ, ಸಂಗಮೇಶ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಟಿ. ಬಿರಾದಾರ, ನಿಡಗುಂದಿ ವಿ.ಲಿ.ಹ. ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ವಂದಾಲ, ಶಿದ್ರಾಮಪ್ಪ ಶಿವಣಗಿ, ಮಹಾಂತೇಶ ಬಿದರಕುಂದಿ, ಭೀಮನಗೌಡ ಪಾಟೀಲ,

​ಸಮಾಜದ ಕಾರ್ಯಧ್ಯಕ್ಷ ಭೀಮನಗೌಡ ಕೊಡಗಾನೂರ, ಅವ್ವನಗೌಡ, ಎಸ್.ಎಸ್. ಹುಗಾರ, ಸಾಹೇಬಗೌಡ ಪಾಟೀಲ, ಮೈಬುಬಸಾಬ ನಾಯ್ಕೋಡಿ, ಬಸವರಾಜ ಗಂಗೂರ, ಮಂಜುನಾಥಗೌಡ ಪೋಲಿಸ್ ಪಾಟೀಲ,ಬಸವರಾಜ ಡಮನಾಳ,ಗೌಡಪಗೌಡ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

​ನೂತನ ಪದಾಧಿಕಾರಿಗಳಿಗೆ ಸನ್ಮಾನ

​ಇದೇ ಸಂದರ್ಭದಲ್ಲಿ ಕಂದಗನೂರ ಗ್ರಾಮಸ್ಥರ ವತಿಯಿಂದ ನೂತನ ಪದಾಧಿಕಾರಿಗಳಾದ

ತಾಲ್ಲೂಕು ಅಧ್ಯಕ್ಷ

​ಎಸ್.ಎಸ್. ಶಿವಣಗಿ, ಭೀಮನಗೌಡ ಕೊಡಗಾನೂರ,

​ಮಲ್ಲನಗೌಡ ಬಿರಾದಾರ,ಎಂ ಬಿ ಬಿರಾದಾರ,​ಆರ್.ಎಸ್. ಬಿರಾದಾರ,​ಚಂದ್ರು ಢಮನಾಳ,​ಹುಲ್ಲನಗೌಡ ಬಿರಾದಾರ,​ಚಂದ್ರಶೇಖರ ಗೋನಾಳ,​ಸದಾನಂದ ಪಾಟೀಲ,​ಶೇಷಪ್ಪಗೌಡ ಪಾಟೀಲ,​ದ್ಯಾಮನಗೌಡ ಪಾಟೀಲ,

​ಮುಂತಾದವರನ್ನು ಅತ್ಯಂತ ಸಡಗರದಿಂದ ಸನ್ಮಾನಿಸಿ ಗೌರವಿಸಲಾಯಿತು.

​ಕಾರ್ಯಕ್ರಮದ ಆರಂಭದಲ್ಲಿ ಬಿ.ಸಿ. ಬಿರಾದಾರ ಸ್ವಾಗತಿಸಿದರು, ಬಾಬು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಎಸ್.ಆರ್. ಗೌಡರ ವಂದಿಸಿದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ