ಹೊಸಪೇಟೆ (, ವಿಜಯನಗರ ):: ಕನ್ನಡ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಒತ್ತಾಯಸಿ ಮಾನ್ಯ ಜಿ.ಪಂ ನ ಮುಖ್ಯ ಕಾರ್ಯನಿರ್ವಕ ಅಧಿಕಾರಿ ಗೆ
ಎಸ್ ಎಫ್ ಐ ಜಿಲ್ಲಾ ಸಮಿತಿ ಮನವಿ ಸಲ್ಲಿಸಿತು .
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ ಸ್ವತಂತ್ರ ಬಂದ ದಶಕಗಳ ಕಾಲ ಕಳೆದರು ಇಂದಿಗೂ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸುಚಿಕರವಾದ ಊಟ, ಸ್ವಚ್ಛತೆ, ಪುಸ್ತಕಗಳನ್ನು ಹೋರಾಟ ಮಾಡಿ ಕೇಳವಂತಹ ಪರಸ್ಥಿತಿ ಉಂಟಾಗಿದೆ ಇಂತಹ ಆಡಳಿತ ವ್ಯವಸ್ಥೆ ನಮ್ಮ ವ್ಯವಸ್ಥೆಯಲ್ಲಿ ಇದೆ ವಿದ್ಯಾರ್ಥಿಗಳಿಗೆ ಹಲವಾರು ತಿಂಗಳನಿಂದ ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಮತ್ತು ಹಲವರು ಬಾರಿ ವಿದ್ಯಾರ್ಥಿಗಳು ಮನವಿ ಪತ್ರವನ್ನು ಸಲ್ಲಿಸಿದ್ದರೂ ಸಹ ಮನವಿ ಪತ್ರವನ್ನು ಕಡೆಗಣಿಸಿ ಇಲಾಖೆಯು ಬೇಕಾ ಬಿಟ್ಟಯಾಗಿ ನಿರ್ಲಕ್ಷತನ ತೋರಿಸಿದೆ ಹಾಗೂ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಮನವಿಯನ್ನು ಸ್ಪಂದಿಸಿದೆ ವಿದ್ಯಾರ್ಥಿಗಳನ್ನು ವೈಕ್ತಕಿವಾಗಿ ಟಾರ್ಗೆಟ್ ಮಾಡುತ್ತಿರುವುದು SFI ಖಂಡಿಸುತ್ತೆದೆ. ಕೂಡುಲೆ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಿವಂತೆ ಮತ್ತು ಈ ಕಳಗಿನ ಬೇಡೆಕೆಗಳನ್ನು ತಕ್ಷಣವೆ ಬಗೆಹರಿಸಿಬೇಕೆಂದು SFI ಅಗ್ರಹಿಸುತ್ತೆದೆ ಒಂದುವೇಳೆ ಬಗೆಹರಿಸಿದೆ ಹೋದಲ್ಲಿ ಎಸ್ ಎಫ್ ಐ ಮತ್ತು ವಿದ್ಯಾರ್ಥಿಗಳು ಅನರ್ದಿಷ್ಟವಾದಿ ಧರಣಿಯನ್ನು ಹಮ್ಮಿಕೊಳ್ಳಬೇಕಾಗುತ್ತೆದೆ ಎಂದು ಈ ಮೂಲಕ ಎಸ್ ಎಫ್ ಐ ವಿಜಯನಗರ ಜಿಲ್ಲಾ ಸಮಿತಿಯು ಒತ್ತಾಯ ಮಾಡಿ ಪತ್ರವನ್ನು ಸಲ್ಲಿಸಿದರು.
ಬೇಡಿಕೆಗಳು
1. ಪಠೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರೀಡಾ ಸಾಮಗ್ರಿಗಳನ್ನ ಪ್ರತಿ ವರ್ಷವೂ ನೀಡಬೇಕು ಮತ್ತು ಸದರಿ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳು ಕೂಡಲೇ ನೀಡಬೇಕು.
2. ಅಧ್ಯಯನಕ್ಕೆ ಅನುಕೂಲವಾಗುವ ಮತ್ತು ಸಂಶೋಧನೆಗೆ ಸಹಕಾರಿಯಾಗುವಂತಹ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದಂತಹ ಪುಸ್ತಕಗಳನ್ನು ನೀಡಬೇಕು. ಮುಖ್ಯವಾಗಿ ಸಿಇಟಿ, ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಪುಸ್ತಕ ಬ್ಯಾಂಕನ್ನು ತೆರೆಯಬೇಕು.
3. ಸ್ವಚ್ಛತೆಗೆ ಸಂಬಂಧಿಸಿದಂತೆ ಆವರಣದಲ್ಲಿ ನಿಂತ ನೀರನ್ನು ಸಾಗಿಸುವುದು, ಶೌಚಾಲಯದಲ್ಲಿ ಸ್ವಚ್ಛಗೊಳಿಸುವುದು ಟ್ಯಾಂಕ್ ಗಳನ್ನು ಸ್ವಚ್ಚ ಮಾಡಿಸಬೇಕು.
4. ಸೊಳ್ಳೆ ಪರದೆ ಮತ್ತು ಮೆಸ್ಸನ್ನು ಕಟ್ಟುವುದು ಮತ್ತು ಕಟ್ಟಡಕ್ಕೆ ಪೇಂಟಿಂಗ್ ಮಾಡುವುದು ಮತ್ತು ಬಕೀಟ್, ಜಗ್ಗು ವಿತರಣೆ ಮಾಡಬೇಕು.
5. ಬಟ್ಟೆ ಒಣಗಿಸಲು ಸ್ಟ್ಯಾಂಡ್ ಗಳನ್ನು ಹಾಗೂ ಬಕೆಟ್ ಮತ್ತು ಜಗ್ಗುಗಳನ್ನು ನೀಡಬೇಕು.
6. ಆವರಣದ ಒಳಗಡೆ ಇರುವ ಸಸಿಗಳಿಗೆ ನೀರಾಕಲು ಪೈಪಿನ ವ್ಯವಸ್ಥೆ ಮಾಡಬೇಕು
7. ಬಟ್ಟೆ ಸ್ವಚ್ಚಗೊಳಿಸಿಕೊಳ್ಳಲು ವಾಷಿಂಗ್ ಮಷೀನ್ ಅನ್ನು ನೀಡಬೇಕು.
8. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆ ಮಾಡಬೇಕು ಮತ್ತು ಪ್ರಥಮ ಚಿಕಿತ್ಸೆ ನೀಡಬೇಕು.
9. ಪ್ರತಿ ವಿದ್ಯಾರ್ಥಿನಿರಿಗೆ ಶ್ಯಾನಿಟರಿ ಪ್ಯಾಡ್, ಸೋಪ್ ಕಿಟ್ಟುಗಳನ್ನು ನೀಡಬೇಕು ಹಾಗೂ ಶುಚಿಕ್ಕಿಟ್ಟಿನಲ್ಲಿ ಶಾಂಪೂಗಳನ್ನು ನೀಡಬೇಕು.
10. ಪ್ರತಿ ದಿನ ನೀರಿನ ಕೊರತೆ ಹೆಚ್ಚಾಗುತ್ತಿದ್ದು ನೀರು ಬಿಡಲು ಒಬ್ಬರನ್ನೂ ನೇಮಿಸಬೇಕು, ನೀರಿನ ಅಭಾವ ಹೆಚ್ಚಾದ ಸಂದರ್ಭದಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರೆಡ್ಡಿ, ಜಿಲ್ಲಾ ಸಹಾ ಕಾರ್ಯದರ್ಶಿ ಪವನ್ ಕುಮಾರ್ SFI ಮುಖಂಡರಾದ ಅಂಬಿಕಾ, ಅಂಬುಜಾ, ಮಯಾದೇವಿ, ನಂದಿನಿ, ಲಕ್ಷ್ಮಿ, ವೀಣಾ ಬಸಮ್ಮ, ಕಲ್ಪನ, ಶಿಲ್ಪಾ, ಚೌಡಿಭಾಯಿ, ಸಭಿನಾ, ರೇಣುಕಾ, ಹಾಗೂ ಇತರರು ಭಾಗವಹಿಸಿದ್ದರು.