Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು  ಜಾಗೃತರಾಗಿ: ಶಾಸಕ ನಿಖಿಲ್ ಕತ್ತಿ ಎಚ್ಚರಿಕೆ

ಹುಕ್ಕೇರಿ : ಮಳೆಗಾ ಪ್ರಾರಂಭದ ಹಿನ್ನಲೆಯಲ್ಲಿ  ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಂತೆ  ಎಲ್ಲ  ಇಲಾಖೆಯ ಅಧಿಕಾರಿಗಳು  ಮುನ್ನಚ್ಚರಿಕೆ ವಹಿಸಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.


ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ  ನಡೆದ ತಾಲೂಕು ಮಟ್ಟದ ತ್ರೈಮಾಸಿಕ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ಗೋಡೆಗಳ  ಬಗ್ಗೆ ಗಮನ ಹರಿಸಬೇಕು,  ಬಿತ್ತನೆ ಬೀಜಗಳು ಹಾಗೂ ಗೊಬ್ಬರ ದಾಸ್ತಾನು, ನೀರಿನ ಮೂಲಗಳನ್ನು ಪತ್ತೆ ಮಾಡಬೇಕು. ನೀರು ಪೂರೈಕೆಯಾಗುವ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಾಲ ಕಾಲಕ್ಕೆ ನೀರು ಪರೀಕ್ಷೆ ನಡೆಸಬೇಕು, ಪರಿಸರ ಸ್ವಚ್ಚತೆ ಗಮನ ಹರಿಸಬೇಕು  ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವದು, ಜೊತೆಗೆ  ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳದಂತೆ ಗ್ರಾಮ ಪಂಚಾಯತಿ ಪಿಡಿಓಗಳ ಉಸ್ತುವಾರಿ ವಹಿಸಿಕೊಳ್ಳಬೇಕು  ಎಂದರು.


ಮಳೆಗಾಲದ  ತಾಲೂಕು ಆಡಳಿತ ಸಮರ್ಥವಾಗಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು.  ಯಾವುದೇ ರೀತಿಯ ತೊಂದರೆಯಾಗದಂತೆ. ಈ ವಿಚಾರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಈ ಕರ್ತವ್ಯದಲ್ಲಿ ಅಲಕ್ಷ್ಯ ಸಲ್ಲದು ಎಂದು ಶಾಸಕ ನಿಖಿಲ್ ಕತ್ತಿ ತಾಕೀತು ಮಾಡಿದರು ಎಂದು  ಆದೇಶಿಸಿದರು.


        ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ  ಕೈಗೆತ್ತಿಕೊಂಡ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಂಡ ನಂತರ ಗ್ರಾಮ ಪಂಚಾಯತಿಯವರು ಹಸ್ತಾಂತರ ಮಾಡಿಕೊಳ್ಳುವದು  ಪಿಡಿಓ ಅವರ ಜವಾಬ್ದಾರಿ ಎಂದರು.


       ಹಿಡಕಲ್  ಜಲಾಶಯದಿಂದ  ಕುಡಿಯುವ ನೀರಿನ ಹೊಸ ಪೈಪಲೈನ್ ಕಾಮಗಾರಿ  ಆರು ತಿಂಗಳಿನಲ್ಲಿ ಮುಗಿಯಲಿದೆ ಎಂದರು.   ಪುರಸಭೆ ವ್ಯಾಪ್ತಿಯ ಯು.ಜಿ.ಡಿ ಕಾಮಗಾರಿಯಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಣಮಟ್ಟದ ಕೆಲಸಮಾಡಲು ಅಧಿಕಾರಿಗಳಿಗೆ ಸೂಚಿಸಿದರು.


    ಕಳೆದ ಎಸ್,ಎಸ್.ಎಲ್.ಸಿ. ಪರೀಕ್ಷೇಯಲ್ಲಿ  ಉತ್ತಮ ಸಾಧನೆ ಮಾಡಿದ ಮೂರು ವಿಧ್ಯಾರ್ಥಿಗಳಿಗೆ ಲ್ಯಾಪಟಾಪ್, ಹಾಗೂ ಆರೋಗ್ಯ ಇಲಾಖೆಯಿಂದ ೨೨ ಗ್ರಾಮ ಪಂಚಾಯತಿಗಳಿಗೆ  ಕ್ಷಯ ರೋಗ ಮುಕ್ತ  ಪುರಸ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.


 ಕ್ಷೇತ್ರ ಶಿಕ್ಷಣಧಿಕಾರಿ  ಪ್ರಭಾವತಿ ಪಾಟೀಲ ಮಾತನಾಡಿ ೩೪೯ ಅತಿಥಿಗಳ  ಶಿಕ್ಷಕರ ನೇಮಕಮಾಡಲಾಗಿದೆ ಜುಲೈ ತಿಂಗಳಿನಲ್ಲಿ ಮತ್ತೆ  ಅವಶ್ಯಕವಿರುವ ಶಾಲೆಗಳಿಗೆ ಅನುಮೋದನೆ ನೀಡಲಾಗುವದು  ಹಾಗೂ   ಅಪಾಯದ ಅಂಚಿನಲ್ಲಿರುವ ೭೩ ಶಾಲಾ ಕಟ್ಟಡಗಳನ್ನು  ನೆಲಸಮ ಮಾಡಲಾಗಿದೆ ೨೭೨ ಶಾಲಾ ಕಟ್ಟಡಗಳ ರೀಪೇರಿಗಳ  ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು. ಕೃಷಿ ಅಧಿಕಾರಿ   ಆರ.ಬಿ ನಾಯ್ಕರ,  ಕ್ಷೇತ್ರದಲ್ಲಿ ಶೆ. ೩೭ ರಷ್ಟು ಬಿತ್ತನೆಯಾಗಿದೆ. ಜೂನ ತಿಂಗಳಿನವರಗೆ ಅವಕಾಶವಿದೆ ಎಂದರು.   ಬೀಜ ಹಾಗೂ ಗೊಬ್ಬರ ಸಾಕಷ್ಟು ದಾಸ್ತಾನಿದೆ ಎಂದರು


      ತಹಶೀಲ್ದಾರ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್.ಮಲ್ಲಾಡದ,  ತಾಲೂಕಾ ನೂಡಲ್ ಅಧಿಕಾರಿ  ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ರಾಮಣ್ಣಾ  ಕನ್ನೋಳಿ,  ಸಿಪಿಐಗಳಾದ   ಶಿವಶರಣ ಅವಜಿ, ಪುರಸಭೆ ಮುಖ್ಯಾಧಿಕಾರಿಗಳಾದ ಈಶ್ವರ ಸಿದ್ನಾಳ, ಪ್ರಕಾಶ ಮಠದ,  ಡಾ. ಉದಯ ಕುಡಚಿ,  ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ, ತಾಪಂ ಮ್ಯಾನೇಜರ್ ಅವಿನಾಶ ಹೊಳೆಪ್ಪಗೋಳ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶಾನೂಲ ತಹಶಿಲ್ದಾರ, ಕೆಡಿಪಿ ನಾಮನಿರ್ದೇಶಕ ಸದಸ್ಯರಾದ  ಬಸವರಾಜ ಕೋಳಿ, ಸಿದ್ರಾಮ ಖೋತ,   ಗುಲಾಬ ತಹಶಿಲ್ದಾರ, ಕಲ್ಲಪ್ಪ ಕಟ್ಟಿ, ರಾಜು ಅವಟೆ, ಮುಖಂಡರಾದ ಸತ್ಯಪ್ಪಾ ನಾಯಿಕ,  ಶಿಥಲ ಬ್ಯಾಳಿ,  ರಾಜು ಮುನ್ನೋಳಿ,  ಚನ್ನಪ್ಪ ಗಜಬರ, ಶಿವನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಟಿಪಿಒ ಪ್ರಶಾಂತ ಮುನ್ನೋಳಿ ಸ್ವಾಗತಿಸಿದರು.  ಪಿಡಿಓ  ಕಿರಣ ಅಂಬೇಕರ.  ವಂದಿಸಿದರು.




Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ