Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್ಕಾರ್ಟ್ಸ್ ದಿಂದ `ಸೌಥ್ ಸ್ಪೆಷಲ್’ ಭತ್ತದ ಟ್ರಾಕ್ಟರ್ ಬಿಡುಗಡೆ





















ಹುಬ್ಬಳ್ಳಿ :  ಕೃಷಿ ಯಂತ್ರೋಪಕರಣ ಮತ್ತು ಕಟ್ಟಡ ನಿರ್ಮಾಣ ಸಾಧನಗಳ ಕಂಪನಿ ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್ ತನ್ನ ಪವರ್ ಟ್ರಾಕ್ ಶೌರ್ಯ ಎಂಬ `ಸೌಥ್ ಸ್ಪೆಷಲ್’ ಭತ್ತದ ಟ್ರಾಕ್ಟರ್ ಸರಣಿ ಬಿಡುಗಡೆ ಮಾಡಿದ್ದು ಇದರಲ್ಲಿ 39 ಎಚ್.ಪಿ.ಯಿಂದ 52 ಎಚ್.ಪಿ.ವರೆಗೆ ಐದು ವಿಧಗಳಿವೆ ಬಿಡುಗಡೆಯು ಮೊಟ್ಟಮೊದಲ ಬಾರಿಗೆ ಪವರ್ ಟ್ರಾಕ್ ಬ್ರಾಂಡ್ ನ್ನು ವಿಶೇಷ ಭತ್ತ ಮತ್ತು ಜೌಗು ಪ್ರದೇಶ ಕೇಂದ್ರಿತ ಸರಣಿಯಾಗಿದ್ದು ಇವುಗಳನ್ನು ದಕ್ಷಿಣ ಭಾರತದ ಭತ್ತ ಬೆಳೆಯುವ ಪ್ರದೇಶಗಳಾದ ಕರ್ನಾಟಕ, ತೆಲಂಗಾಣಆಂಧ್ರ ಮತ್ತು ತಮಿಳುನಾಡುಗಳಿಗೆ ಅಭಿವೃದ್ಧಿಪಡಿಸಲಾಗಿದೆ.








ಭಾರತದಲ್ಲಿ ಕುಬೋಟಾಫಾರ್ಮ್ ಟ್ರಾಕ್ ಮತ್ತು ಪವರ್ ಟ್ರಾಕ್ ಎಂಬ ಮೂರು ಟ್ರಾಕ್ಟರ್ ಬ್ರಾಂಡ್ ಗಳನ್ನು ನಿವ್ರಹಿಸುತ್ತಿದ್ದು ಕ್ರಮವಾಗಿ ಪ್ರೀಮಿಯಂಎಂಟ್ರಿ-ಪ್ರೀಮಿಯಂ ಮತ್ತು ವ್ಯಾಲ್ಯೂ ವಲಯಗಳಿಗೆ ಪೂರೈಸುತ್ತದೆಪವರ್ ಟ್ರಾಕ್ ಹಲವು ಕೃಷಿ ಕಾರ್ಯಾಚರಣೆಗಳಿಗೆ ಸಾಮೂಹಿಕ ವಲಯಕ್ಕೆ ಪೂರೈಸುತ್ತದೆ.

ಭತ್ತದ ಬೆಳೆಗೆ ಅಭಿವೃದ್ಧಿಪಡಿಸಲಾದ ಶೌರ್ಯ ಸರಣಿಯು ಜೌಗು ಪ್ರದೇಶ ಮತ್ತು ನೀರು ನಿಂತಿರುವ ಕೃಷಿಭೂಮಿಗಳಲ್ಲಿ ವಿಶ್ವಾಸಾರ್ಹ ಕಾರ್ಯಾಚರಣೆಗಳನ್ನು ನಡೆಸುವಂತೆ ರೂಪಿಸಲಾಗಿದೆಇದು ಪ್ರಮುಖ ಬಿಡಿಭಾಗಗಳಿಗೆ ಕ್ಯಾಸೆಟ್-ರೀತಿಯ ಸೀಲಿಂಗ್ ಹೊಂದಿದ್ದು ಇದರಿಂದ ಕಾರ್ಯಾಚರಣೆಗಳಲ್ಲಿ ನೀರು ಮತ್ತು ಕೆಸರು ಪ್ರವೇಶಿಸುವುದನ್ನು ತಪ್ಪಿಸುತ್ತದೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಭೂಮಿಗಳಲ್ಲಿ ಕುಶಲತೆಗೆ 31. ಮೀಟರ್ ಗಳ ತೀಕ್ಷ್ಣ ತಿರುಗುವಿಕೆಯ ರೇಡಿಯಸ್ ಹೊಂದಿದೆ ಟ್ರಾಕ್ಟರ್ ಗಳು ಪೂರ್ಣ ಸ್ಥಿರವಾದ ಮೆಷ್ ಗೇರ್ ಬಾಕ್ಸ್ ಮತ್ತು 8 ಫಾರ್ವರ್ಡ್ ಮತ್ತು 2 ರಿವರ್ಸ್ ಗೇರ್ ಗಳನ್ನು ಹೊಂದಿದೆ ಮತ್ತು ಟ್ರಾಕ್ಟರ್ ವಿಧ ಆಧರಿಸಿ ಸೆನ್ಸಿ-1 ಹೈಡ್ರಾಲಿಕ್ ಲಿಫ್ಟ್ ನ್ನು 1600-200 ಕೆಜಿ ಶ್ರೇಣಿಯಲ್ಲಿ ಹೊಂದಿದೆಡಬಲ್ ಕ್ಲಚ್ ನೊಂದಿಗೆ  ಸ್ವತಂತ್ರ ಪಿಟಿಒ ಲಿವರ್ ಹೊಂದಿದ್ದು ಇದು ಇಂಪ್ಲಿಮೆಂಟ್ ಬಳಕೆ ನಿಯಂತ್ರಿಸುತ್ತದೆ ಮತ್ತು ಬೇಲರ್ ಬಳಕೆಯಂತಹ ಸುಧಾರಿತ ಕೆಲಸಗಳಿಗೆ ಬೆಂಬಲಿಸುತ್ತದೆಪಿಟಿಒ ವೇಗದ ಆಯ್ಕೆಗಳಲ್ಲಿ ಡ್ಯುಯಲ್ ಪಿಟಿಒ 540/1000 ಮತ್ತು ರಿವರ್ಸ್ ಪಿಟಿಒ ವಿಸ್ತಾರ ಭತ್ತದ ಕೃಷಿ ಕೆಲಸಗಳಿಗೆ ನೆರವಾಗುತ್ತದೆಭತ್ತದ ಬಳಕೆಗೆ ರಂಧ್ರವಿರುವ ಉನ್ನತೀಕರಿಸಿದ ಪ್ಲಾಟ್ ಫಾರಂ ಮತ್ತು ರಕ್ಷಣಾತ್ಮಕ ವೈರಿಂಗ್ ಫೆಂಡರ್ ಚಾನಲ್ ಒಳಗಡೆ ರೂಟಿಂಗ್ ನಿಂದ ಜೌಗಿನ ಪರಿಸರಗಳಲ್ಲಿ ಕಾರ್ಯಾಚರಣೆಗಳಿಗೆ ಮತ್ತು ದೀರ್ಘ ಕೆಲಸಗಳಿಗೆ ನೆರವಾಗುತ್ತದೆ.

ಈ ಬಿಡುಗಡೆ ಕುರಿತು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ನಂದಾ, “ದಕ್ಷಿಣ ಭಾರತವು ಎಸ್ಕಾರ್ಟ್ಸ್ ಕುಬೋಟಾದ ಮುಂದಿನ ಹಂತದ ಪ್ರಗತಿಯ ಕೇಂದ್ರವಾಗಿದೆ ಮತ್ತು ನಾವು ಕೇಂದ್ರೀಕೃತ, ಉನ್ನತ ಗುಣಮಟ್ಟದ, ಬಳಕೆಗೆ ತಕ್ಕ ಉತ್ಪನ್ನಗಳ ಮೂಲಕ ನಮ್ಮ ಉಪಸ್ಥಿತಿ ವಿಸ್ತರಿಸುತ್ತಿದ್ದೇವೆ. ಭತ್ತದ ಮಾರುಕಟ್ಟೆಗಳಲ್ಲಿ ನಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು ಮತ್ತು ನಮ್ಮ ಪ್ರಾದೇಶಿ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿರುವುದರಿಂದ ಶೌರ್ಯದ ಬಿಡುಗಡೆಯು ಈ ಉದ್ದೇಶಗಳಿಗೆ ಪೂರಕವಾಗಿದೆ” ಎಂದರು.

ಸಾರ್ವಕಾಲಿಕ ನಿರ್ದೇಶಕ ಮತ್ತು ಸಿಇಒ ಭರತ್ ಮದನ್, “ಈ ಬಿಡುಗಡೆಯು ದಕ್ಷಿಣದ ಮಾರುಕಟ್ಟೆಗಳಲ್ಲಿ ಭತ್ತದ ವಲಯದಲ್ಲಿ ನಮ್ಮ ಭಾಗವಹಿಸುವಿಕೆ ಸದೃಢಗೊಳಿಸುತ್ತದೆ ಮತ್ತು ಟ್ರಾಕ್ಟರ್ ಪೋರ್ಟ್ ಫೋಲಿಯೋದಲ್ಲಿ ಪ್ರಾದೇಶಿಕ ಸಂಯೋಜನೆ ಸುಧಾರಿಸುತ್ತದೆ. ಅಂತಹ ಬಳಕೆ-ಪ್ರೇರಿತ ವಲಯಗಳಲ್ಲಿ ಕೇಂದ್ರೀಕೃತ ವಿಸ್ತರಣೆಯು ವಿವಿಧ ಆವರ್ತಗಳಲ್ಲಿ ಪೋರ್ಟ್ ಫೋಲಿಯೊ ಸಾಮರ್ಥ್ಯ ಕಾಪಾಡುವಲ್ಲಿ ಮುಖ್ಯವಾಗಿದೆ” ಎಂದರು.
















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ