Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೆಪ್ಸಿಕೋಯಿಂದ ಎನರ್ಜಿ ಡ್ರಿಂಕ್ ಅಡ್ರಿನಾಲಿನ್ ರಶ್ ಬಿಡುಗಡೆ


ಹುಬ್ಬಳ್ಳಿ,೩ ಜೂನ್ ೨೦೨೬: ಪೆಪ್ಸಿಕೋ ಇಂಡಿಯಾ ಇಂದಿನ ಪೀಳಿಗೆ ಗುರಿಯಾಗಿಸಿಕೊಂಡು, ತನ್ನ ಪ್ರೀಮಿಯಂ ಎನರ್ಜಿ ಡ್ರಿಂಕ್ ಬ್ರ್ಯಾಂಡ್ ಅಡ್ರಿನಾಲಿನ್ ರಶ್ ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದೇ ಸಂದರ್ಭದಲ್ಲಿ ಕಂಪನಿಯು ಮಹತ್ವಾಕಾಂಕ್ಷೆ, ಸತತ ಪರಿಶ್ರಮ ಮತ್ತು ಯುವ ಶಕ್ತಿಯನ್ನು ಬಿಂಬಿಸುವ ಡಿಜಿಟಲ್ ಜಾಹೀರಾತು ಚಿತ್ರ ಅನಾವರಣಗೊಳಿಸಿದೆ. “ಎ-ರಶ್, ಎ-ಗೇಮ್ ಆನ್’ ಶೀರ್ಷಿಕೆಯಡಿ ಈ ಅಭಿಯಾನ ಮೂಡಿಬಂದಿದ್ದು, ಇಂದಿನ ಜೆನ್ ಜೀ ಯುವ ಪೀಳಿಗೆಯ ಜೀವನಶೈಲಿಗೆ ಇದು ಕನ್ನಡಿ ಹಿಡಿಯುವಂತಿದೆ.
ವೇಗವಾಗಿ ಬೆಳೆಯುತ್ತಿರುವ ಮಾಸ್ ಪ್ರೀಮಿಯಂ ವಿಭಾಗದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಜಾಗತಿಕ ಗುಣಮಟ್ಟದ ಪಾನೀಯ ನೀಡಲು ಪೆಪ್ಸಿಕೋ ನಿರ್ಧರಿಸಿದೆ. ಅತ್ಯಾಕರ್ಷಕ ಪ್ರೀಮಿಯಂ ಕ್ಯಾನ್ ವಿನ್ಯಾಸದಲ್ಲಿ ಲಭ್ಯವಿರುವ ಈ ಎನರ್ಜಿ ಡ್ರಿಂಕ್ ಗೆ ರೂ. ೬೦ ನಿಗದಿಪಡಿಸಲಾಗಿದೆ.
ಈ ಪಾನೀಯವನ್ನು ಎರಡು ಫ್ಲೇವರ್‌ಗಳಲ್ಲಿ ಪರಿಚಯಿಸಲಾಗಿದೆ. ಒಂದು, ಪ್ಯಾಶನ್ ರಶ್. ಕೆಫೀನ್, ಟೌರಿನ್ ಮತ್ತು ವಿಟಮಿನ್ ಗಳ ಅಂಶವುಳ್ಳ ಈ ಪಾನೀಯ ಕೆಲಸದಲ್ಲಿ ಗರಿಷ್ಠ ಏಕಾಗ್ರತೆ ನೀಡಲು ಸಹಕಾರಿಯಾಗಿದೆ. ಇನ್ನೊಂದು, ಕ್ಲಾಸಿಕ್ ರಶ್. ಇದನ್ನು ದೈನಂದಿನ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರಲು ಮತ್ತು ಅತ್ಯುತ್ತಮ ಪ್ರದರ್ಶನ ನೀಡಲು ರೂಪಿಸಲಾಗಿದೆ.
ಹೊಸದಾಗಿ ಬಿಡುಗಡೆಯಾಗಿರುವ ಈ ಪ್ರಚಾರ ಚಿತ್ರವು, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲು ಸಿದ್ಧರಿರುವ ಮತ್ತು ಗಡಿಗಳನ್ನು ಮೀರಿ ಬೆಳೆಯುವ ಇಂದಿನ ಪೀಳಿಗೆಯ ಧೃತಿಗೆಡದ ಮನೋಭಾವವನ್ನು ಆಕರ್ಷಕವಾಗಿ ಸೆರೆಹಿಡಿದಿದೆ. “ಯಾವಾಗ ನಿಮಗೆ ಜವಾಬ್ದಾರಿ ದೊರೆಯುತ್ತದೆಯೋ, ಆಗ ನೀವು ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತೀರಿ” ಎಂಬ ಚಿಂತನೆಯೊಂದಿಗೆ ಈ ಅಭಿಯಾನ ರೂಪಿಸಲಾಗಿದೆ. ತಮ್ಮ ಮಹತ್ವಾಕಾಂಕ್ಷೆ ಮತ್ತು ಹವ್ಯಾಸಗಳ ಬೆನ್ನತ್ತಿ ಹೊರಡುವ ಯುವ ಗ್ರಾಹಕರಿಗೆ ಅಡ್ರಿನಾಲಿನ್ ರಶ್ ಅತ್ಯುತ್ತಮ ಒಡನಾಡಿಯಾಗಲಿದೆ ಎಂಬುದನ್ನು ಈ ಚಿತ್ರ ಬಿಂಬಿಸುತ್ತದೆ.
ಇಂದಿನ ಜೆನ್-ಜೀ ಪೀಳಿಗೆಯ ನೆಚ್ಚಿನ ಹವ್ಯಾಸಗಳಾದ ಫೋಟೋಗ್ರಫಿ ಮತ್ತು ಪಾರ್ಕರ್ (ಕಡಿದಾದ ದಾರಿಗಳಲ್ಲಿ ಸಾಹಸಮಯ ಜಿಗಿತ) ಮೂಲಕ ಈ ಚಿತ್ರ ರೂಪಿಸಲಾಗಿದೆ.
ಅಭಿಯಾನವು, ಕಂಟೆಂಟ್ ಕ್ರಿಯೇಟರ್ ಗಳ ಕಥೆಗಳು, ಇಂಟರ್ನೆಟ್ ಟ್ರೆಂಡ್ ಗಳು ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಗಳ ಮೂಲಕ ಜೆನ್- ಜೀ ಪ್ರೇಕ್ಷಕರನ್ನು ನೇರವಾಗಿ ತಲುಪುವ ಗುರಿ ಹೊಂದಿದೆ.
ಈ ಕುರಿತು ಮಾತನಾಡಿದ ಪೆಪ್ಸಿಕೋ ಇಂಡಿಯಾದ ಎನರ್ಜಿ ಡ್ರಿಂಕ್ಸ್ ವಿಭಾಗದ ಮುಖ್ಯಸ್ಥರಾದ ದೀಕ್ಷಾ ಬಜಾಜ್ ಅವರು, "ಅಡ್ರಿನಾಲಿನ್ ರಶ್ ಮೂಲಕ ನಾವು ನಿಜವಾದ ಅರ್ಥದಲ್ಲಿ ಹೊಸ ಪೀಳಿಗೆಗಾಗಿಯೇ ರೂಪಿಸಲಾದ ಬ್ರ್ಯಾಂಡ್ ಒಂದನ್ನು ಸೃಷ್ಟಿಸಲು ಬಯಸಿದ್ದೇವೆ. ‘ಅಲ್ಟಿಮೇಟ್ ಫೋಕಸ್ ವರೆಗೆ ಇದರ ಪ್ರತಿಯೊಂದು ಅಂಶವೂ ಇಂದಿನ ಹೊಸ ಪೀಳಿಗೆಯನ್ನು ಪ್ರತಿನಿಧಿಸುತ್ತದೆ. ಯುವ ಗ್ರಾಹಕರು ತಮಗೆ ಅತ್ಯಂತ ಪ್ರಮುಖವಾದ ಗುರಿಗಳನ್ನು ಬೆನ್ನತ್ತಲು ಪ್ರೇರೇಪಿಸುವ ಬ್ರ್ಯಾಂಡ್ ಅನ್ನು ಕಟ್ಟುವ ಜೊತೆಗೆ, ಪ್ರತಿ ಯಶಸ್ಸಿನ ಹಿಂದೆ ಇರುವ ಸಮರ್ಪಣಾ ಮನೋಭಾವ, ತೀವ್ರತೆ ಮತ್ತು ಸತತ ಪರಿಶ್ರಮವನ್ನು ಸಂಭ್ರಮಿಸುವುದು ನಮ್ಮ ಉದ್ದೇಶವಾಗಿದೆ" ಎಂದರು.
ಪೆಪ್ಸಿಕೋ ಇಂಡಿಯಾದ ಇಂಡಿಯಾ ಬಿಸಿನೆಸ್ ಯೂನಿಟ್  ಬಿವರೇಜಸ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ತರುಣ್ ಭಗತ್ ಅವರು, "ಭಾರತದಲ್ಲಿ ಎನರ್ಜಿ ಡ್ರಿಂಕ್ಸ್ ವಿಭಾಗವು ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿದೆ. ಅಡ್ರಿನಾಲಿನ್ ರಶ್‌ಲ ಬಿಡುಗಡೆಯೊಂದಿಗೆ, ನಾವು ಪ್ರೀಮಿಯಂ ಎನರ್ಜಿ ಡ್ರಿಂಕ್ಸ್ ವಿಭಾಗದಲ್ಲಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ" ಎಂದು ತಿಳಿಸಿದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*