ಬೆಳಗಾವಿ 21 - ದಕ್ಷ ಸಂಘಟನೆಯವರು ಇದೇ ದಿ. ೨೫ ಶನಿವಾರದಂದು ಸಾಯಂಕಾಲ ೫ ಗಂಟೆಗೆ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ನಗೆಹಬ್ಬ ಮತ್ತು ಧನ್ಯತಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ನಗೆಹಬ್ಬದಲ್ಲಿ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಶಿ ಅವರು ತಮ್ಮ ಮಾತುಗಳಿಂದ ರಂಜಿಸಲಿದ್ದಾರೆ.
ಗಂಗಾವತಿ ಪ್ರಾಣೇಶ ಅವರ ಆಪೆಕ್ಷೆಯ ಮೇರೆಗೆ ಹಾಸ್ಯ ಭಾಷಣ ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಬೆಳಗಾವಿ ಮಹಿನೀಯರನ್ನು ಧನ್ಯತಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಉಚಿತ ಪಾಸ್ ಗಳಿಗಾಗಿ 7090165656 ಸಂಪರ್ಕಿಸಬಹುದಾಗಿದೆ.