ಬಳ್ಳಾರಿ. ಮೇ.07.: ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಅಭಿವೃದ್ಧಿ ಸಂರಕ್ಷಣೆಗೆ ಹಾಗೂ ಪ್ರಸಾರಕ್ಕಾಗಿ ಶ್ರಮಿಸುವ ಸಂಸ್ಥೆಯಾಗಿದೆ ನಾಡಿನ ಸಂಸ್ಕೃತಿ ಪರಂಪರೆ ಇತಿಹಾಸ ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವ ಪರಿಷತ್ತಿನ ಪಾತ್ರ ಅನನ್ಯವಾದದ್ದು ಭಾಷೆ ಮಾನವನ ಅಸ್ತಿತ್ವದ ಪ್ರತಿಬಿಂಬ ಇದ್ದಂತೆ ಎಂದು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಷ್ಮಾ ಏನ್ ಜೋಗನ್ ಅಭಿಪ್ರಾಯ ಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕವು ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ,
ಸಮ್ಮೇಳನ, ಕವಿಗೋಷ್ಠಿ, ಕಥಾ ಸ್ಪರ್ಧೆ, ಪುಸ್ತಕ ಪ್ರದರ್ಶನಗಳಿಂದ ಕನ್ನಡದ ಸೊಬಗು ಜನ ಮಾನಸಗಳಲ್ಲಿ ಮೂಡುತ್ತದೆ ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ನೋಡದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಬೇಕು. ಇಂದಿನ ಯುವಕರಿಗೆ ಸಾಹಿತ್ಯದ ಪರಿಚಯ ಅತ್ಯಗತ್ಯ.ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡವನ್ನು ಜಾಗತಿಕ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚುರ ಪಡಿಸುವುದು ಔಚಿತ್ಯಪೂರ್ಣ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರ ಶಿಕ್ಷಣಾರ್ಥಿಯಾದ ಕುಮಾರಿ ಶಿವಲೀಲಾ ಪ್ರಾರ್ಥನಾ ಗೀತೆಯನ್ನು ನೆರವೇರಿಸಿದರು, ಉತ್ತರೇಶ್ ಗಣ್ಯಮಾನ್ಯರನ್ನು ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ. ವಿ. ಪ್ರಸ್ತಾವಿಕ ನುಡಿ ನುಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಆಲಂಭಾಷರವರು ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಾವು ನೀವೆಲ್ಲರೂ ಮಾಡಬೇಕಾಗಿದೆ ಎಂದರು.
ಡಾ. ಯು ಶ್ರೀನಿವಾಸ್ ಮೂರ್ತಿ ಉಪನ್ಯಾಸಕರು ತಮ್ಮ ವಿಶೇಷ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಎಚ್ ವಿ ನಂಜುಂಡಯ್ಯ ರವರ ನೇತೃತ್ವದಲ್ಲಿ ಸ್ಥಾಪನೆಯಾಯಿತು ಈ ಮೊದಲು ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾವಣೆ ಯಾದದ್ದು ನಮ್ಮ ಬಳ್ಳಾರಿಯಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಂತೆ ನಾವೆಲ್ಲರೂ ಶ್ರಮಿಸೋಣ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸತ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವೀರಭದ್ರಪ್ಪ ಎಚ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಇಂತಹ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ನಡೆದಿರುವುದು ನಮ್ಮ ಭಾಗ್ಯ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ನುಡಿದರು.
ಕನ್ನಡ ಭಾಷೆ ನಾಡು ನುಡಿ ಸೇವೆ ಮಾಡಿದ 4 ಜನ ಗಣ್ಯರಿಗೆ ಗೌರವಿಸಿ ಸತ್ಕರಿಸಲಾಯಿತು.
ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಕಾರ್ತಿಕ್ ಮರಿಸ್ವಾಮಿ ಮಠ ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಷತ್ತಿನ ಕೋಶ್ಯಾಧ್ಯಕ್ಷರಾದ ಶರಣಬಸವ ಕೊನೆಗೆ ವಂದಿಸಿದರು.