ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿಪೂಜೆ
ಜಮಖಂಡಿ; ನಗರದಲ್ಲಿಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಗದೀಶ ಗುಡಗುಂಟಿ ಭಾನುವಾರ ಭೂಮಿ ಪೂಜೆ ನೆರವೇರಿಸಿದರು. ಜಿಲ್ಲಾಡಳಿತ, ಜಿಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಕಾಲೊನಿಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಗರದ ಕತಾಟೆ ಪ್ಲಾಟ, ವಿಜಯಪುರ ರಸ್ತೆಯಿಂದ ಅಯುಬ ಬೊಜಗಾರ ಅವರ ಮನೆಯ ವರೆಗಿನ ರಸ್ತೆ, 25 ಲಕ್ಷರೂ. ವಾರ್ಡನಂ. 30ರಲ್ಲಿ ನದಾಫ ಅವರ ಮನೆಯಿಂದ ಆಸೀಫ್ ಬಡೆಘರ ಅವರ ಮನೆಯ ವರೆಗಿನ ರಸ್ತೆ, ಕುಂಬಾರ ಹಳ್ಳ ಗ್ರಾಮದ ಮಿಲ್ಟನ್ ನಡಾರ ಅವರ ಮನೆಯಿಂದ ರೇಶ್ಮಾ ಮನಿಯಾರ ಮನೆಯ ವರೆಗಿನ ರಸ್ತೆ, ಹಾಗೂ ವಾರ್ಡ ನಂ 6ರ ಇಸ್ಮಾಯಿಲ್ ಕಾಟಿಕ್ ಅವರ ಮನೆಯಿಂದ ವಿಜಯಪುರ ಮುಖ್ಯರಸ್ತೆ ವರೆಗಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಅಯಜ ಕಡಪಟ್ಟಿ, ಮಲ್ಲುದಾನಗೌಡ, ಶಂಕರ ಕಾಳೆ, ಶ್ರೀಧರ ಕಂಬಿ, ಯಮನೂರ ಮುಲ್ಲಂಗಿ, ಶಶಿಧರ ದೊಡಮನಿ, ರಾಘವೇಂದ್ರ ಮುಲ್ಲಂಗಿ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಂತೋಷ ಬಾಡಗಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಗುತ್ತಿಗೆದಾರ ರವಿ ತೊದಲಬಾಗಿ ಮುಂತಾದವರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.