Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಘಟನೆ ನೆನೆಸಿಕೊಂಡರೆ ಮೈ ನಡುಗುತ್ತೆ - ಲಕ್ಷ್ಮೀ ಅರುಣಾ

ಬಳ್ಳಾರಿ: 12..ನಗರದ ತಮ್ಮ ನಿವಾಸದ ಮುಂದೆ ನಡೆದ ಫೈರಿಂಗ್ ಘಟನೆಯ ಬಳಿಕ ನಡೆದ ವಿವಿಧ ಘಟನಾವಳಿಗಳಿಂದ ತಮಗೆ ಇದುವರೆಗೂ ಹೊರ ಬರಲು ಆಗುತ್ತಿಲ್ಲವೆಂದು ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ಆಘಾತ ಮತ್ತು ಆತಂಕದಲ್ಲಿ ಹೇಳಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಪುರಾಣ ಪ್ರಸಿದ್ಧ ಅಂಜನಾದ್ರಿ ದರ್ಶನದ ಬಳಿಕ  ಈ ಕುರಿತು ಪ್ರತಿಕ್ರಿಯೆ ನೀಡಿದ  ಅವರು, ಬಳ್ಳಾರಿಯಲ್ಲಿ ನಡೆದ ಘಟನೆ ನೆನಸಿಕೊಂಡರೆ ಮೈ ನಡುಗುತ್ತಿದೆ. ಘಟನೆ ನಡೆದು ೧೦ ದಿನ ಕಳೆದರೂ ಇನ್ನೂ ಹೊರಬರಲಾಗುತ್ತಿಲ್ಲ. ಘಟನೆ ನಡೆದಾಗ ನಾನು ಮತ್ತು ನನ್ನ ಮಗ ಮನೆಯಲ್ಲಿ ಇದ್ದೆವು. ಭರತ್ ರೆಡ್ಡಿ ಗೂಂಡಾಗಳು, ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಮನೆ ಮೇಲೆ ಫೈರಿಂಗ್ ವಿಚಾರವಾಗಿ ತುಂಬಾ ನೊಂದಿದ್ದೇವೆ. ಘಟನೆಯ ನೋವಿನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ನಾಳೆ ತಮ್ಮ ಪತಿ, ಶಾಸಕ ಜನಾರ್ದನ್ ರೆಡ್ಡಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಯೋಗ ಕ್ಷೇಮಕ್ಕಾಗಿ ಆಂಜನೇಯ ಮೊರೆ ಹೋಗಿರುವುದಾಗಿ ತಿಳಿಸಿದರು.

ಈ ಘಟನೆ ನಡೆದ ಬಳಿಕ ಎರಡನೇ ಬಾರಿಗೆ ಆಂಜನೇಯ ಬೆಟ್ಟ ಏರಿದ ಅರುಣಾ ಲಕ್ಷ್ಮೀ ಅವರು ೫೭೫ ಮೆಟ್ಟಿಲೇರಿ ಆಂಜನೇಯನ ದರ್ಶನ ಪಡೆದರು. ಭಕ್ತರೊಂದಿಗೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಮಾತನಾಡಿ, ಬಳ್ಳಾರಿ ಶಾಸಕ ಭರತ್ ರೆಡ್ಡಿ ನಮ್ಮ ಮನೆ ಮೇಲೆ ದಾಳಿ ಮಾಡಲು ಇಂತಹ ದುಸ್ಸಾಹಾಸಕ್ಕೆ ಕೈ ಹಾಕಿದ್ದಾರೆ.
ಭರತ್ ರೆಡ್ಡಿ ಪರ ಡಿಕೆಶಿ ಅವರ ಮಾತುಗಳನ್ನು ಕೇಳಿ ಆ ಘಟನೆಯಿಂದ ಹೊರ ಬರುವುದಕ್ಕೂ ಆಗುತ್ತಿಲ್ಲ. ನನ್ನ ಪತಿಗೆ ಹಾಗೂ ನನ್ನ ಜನತೆಗೆ ಏನು ಆಗಬಾರದು. ಅದಕ್ಕೆ ನಾನು ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದಿದ್ದೇನೆ ಎಂದರು.

ಘಟನೆ ಬಳಿಕ ರೆಡ್ಡಿ ಸಹೋದರರು ಒಂದಾಗಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಮೊದಲಿನಿಂದಲೂ ನಾವು ಒಂದಾಗಿದ್ದೇವೆ. ಮುಂದೆಯೂ ಒಂದಾಗಿರುತ್ತೇವೆ. ಘಟನೆ ಬಗ್ಗೆ ಉನ್ನತ ತನಿಖೆ ಆಗಬೇಕು. ಈ ಸರ್ಕಾರದಿಂದ ಉತ್ತಮ ತನಿಖೆ ಆಗುವುದಿಲ್ಲ. ಬೇರೆ ತನಿಖಾ ಸಂಸ್ಥೆಯಿAದ ತನಿಖೆ ಆಗಬೇಕು ಎಂದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ